ವಿಲಿಯಮ್ ಬ್ರೌಂಕರ್

testwikiದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ವಿಲಿಯಮ್ ಬ್ರೌಂಕರ್ (1620-84) ಐರ್ಲೆಂಡ್ ದೇಶದ ಗಣಿತವಿದ.

ಜೀವನ, ಸಾಧನೆಗಳು

ರಾಯಲ್ ಸೊಸೈಟಿಯ ಪ್ರಥಮ ಅಧ್ಯಕ್ಷ. ಬೀಜಗಣಿತದಲ್ಲಿ ಮೂಲಭೂತ ಚಿಂತನೆ ಸಂಶೋಧನೆ ನಡೆಸಿದ್ದಾನೆ. A ಒಂದು ಅವರ್ಗ ಧನ ಪೂರ್ಣಾಂಕವಾಗಿದ್ದರೆ (non-square positive integer) x2 - Ay2 = 1 ಎಂಬ ಸಮೀಕರಣಕ್ಕೆ ಧನ ಪೂರ್ಣಾಂಕ ಮೂಲ x,y ಗಳು ಅಸಂಖ್ಯಾತವಾಗಿರುತ್ತವೆಂದು ಸಾಧಿಸಿ ಅವನ್ನು ಪಡೆಯುವ ವಿಧಾನಗಳನ್ನು ಕೊಟ್ಟ. ಸುಮಾರು ಒಂದು ಸಹಸ್ರ ವರ್ಷಗಳ ಹಿಂದೆ ಭಾರತದಲ್ಲಿ ಬ್ರಹ್ಮಗುಪ್ತನೂ, ಮುಂದೆ ಭಾಸ್ಕರನೂ ಇವನ್ನು ಪ್ರತಿಪಾದಿಸಿದ್ದರು. ಆದರೆ ಯೂರೊಪಿನಲ್ಲಿ ಪ್ರಥಮತಃ ಈ ಸಾಧನೆ ನೀಡಿದಾತ ಪಿಯರೆ ಫರ್ಮಾ (1601-65). ಈ ಸಮಸ್ಯೆಯನ್ನು ಫರ್ಮ 1657 ಫೆಬ್ರುವರಿಯಲ್ಲಿ ಬ್ರೌಂಕರ್ ಮತ್ತು ವಾಲಿಸ್ ಅವರಿಗೆ ಸವಾಲಾಗಿ ಒಡ್ಡಿದ. ಬ್ರೌಂಕರ್ ಇದಕ್ಕೆ ಒಂದು ಪರಿಹಾರ ಕೊಟ್ಟನಾದರೂ (ಉದಾಹರಣೆಗೆ A = 2, x = 3, y = 2) ವಾಲಿಸ್ ತಪ್ಪು ತಿಳಿವಳಿಕೆಯಿಂದ ಬಹುಶಃ ಪೆಲ್ (1610-85) ಎಂಬಾತ ಇದನ್ನು ಕೊಟ್ಟಿರಬೇಕೆಂದು ಭಾವಿಸಿ ಇದನ್ನು ಪೆಲ್ಲನ ಸಮೀಕರಣವೆಂದು ಕರೆದ. ನಿಜಕ್ಕೂ ಇದು ಬ್ರಹ್ಮಗುಪ್ತ-ಭಾಸ್ಕರ ಸಮೀಕರಣ.

ಬ್ರೌಂಕರ್ 1658ರಲ್ಲಿ π4 ಗೆ ಅನಂತ ಭಿನ್ನರಾಶ್ಯಾತ್ಮಕ ವಿಸ್ತರಣೆ (infinite fractional expansion) ಶೋಧಿಸಿದ. ಪ್ರಸ್ತುತ ಭಾಷೆಯಲ್ಲಿ ಇದರ ನಿರೂಪಣೆ ಹೀಗಿದೆ:

π4=11+122+322+522+722+922+

ಇದೇ ವೇಳೆ ವಾಲಿಸ್ π2 ಗೆ ಕೊಟ್ಟ

π2=(2123)(4345)(6567)(8789)

ಸೂತ್ರವನ್ನು[] ಮಾರ್ಪಡಿಸಿ ಬ್ರೌಂಕರ್ ತನ್ನ ಸೂತ್ರ ಪಡೆದ.

ಅತಿಪರವಲಯ y=1x1 ರ ಸಲೆ ಗಣಿಸುವಾಗ 1668ರಲ್ಲಿ ಬ್ರೌಂಕರ್ ಮತ್ತು ಮರ್ಕೇಟರ್ ಪರಸ್ಪರ ಸ್ವತಂತ್ರವಾಗಿ ಪ್ರತಿಘಾತೀಯ ಶ್ರೇಣಿ n=1(1)n11n ಯನ್ನು ಶೋಧಿಸಿದರು.[][]

ಉಲ್ಲೇಖಗಳು

ಟೆಂಪ್ಲೇಟು:ಉಲ್ಲೇಖಗಳು

ಹೊರಗಿನ ಕೊಂಡಿಗಳು