ಫೋರ್ಯೇ ಶ್ರೇಣಿಗಳು

testwikiದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

-π ≤ x ≤ π ಅಂತರದಲ್ಲಿ f(x)=12a0+n=1(ancosnx+bnsinnx)...…(1)

ಆಗಿರಲಿ. ಇದರಲ್ಲಿಯ a ಮತ್ತು b ಎಂಬ ಸ್ಥಿರ ಗುಣಾಂಕಗಳನ್ನು ಈ ಕೆಳಗಿನಂತೆ ಅನುಕಲ ವಿಧಾನದಿಂದ ಕಂಡುಹಿಡಿಯೋಣ:

m, n ಎಂಬ ಸಂಖ್ಯೆಗಳು ಧನ ಪೂರ್ಣಾಂಕಗಳಾದರೆ (positive integers), ಆಗ

ππsinnx dx=0, ππsinmxcosnx dx={   0,mn;π,m=n

ππcosnx dx=0, ππsinmxsinnx dx={0,mn;π,m=n

ππcosmxcosnx dx=0,

ಎಂಬ ಅನುಕಲಗಳನ್ನು ಸುಲಭವಾಗಿ ಸಾಧಿಸಬಹುದು.

ಈಗ ಶ್ರೇಣಿ (1) ರಲ್ಲಿ ಪ್ರತಿಯೊಂದು ಪದವೂ ಅನುಕಲಸಾಧ್ಯವೆಂದು ಭಾವಿಸಿ, ಅದರ ಎರಡು ಪಾರ್ಶ್ವಗಳನ್ನೂ ನಿಂದ π ವರೆಗೆ ಪದಶಃ ಅನುಕಲಿಸಿದರೆ

ππf(x) dx=12a0ππdx=a0π

ಆಗುತ್ತದೆ; ಇದರ ಪದಗಳೆಲ್ಲವೂ ಮೇಲಿನ ಅನುಕಲಗಳಿಂದ ಶೂನ್ಯವಾಗುತ್ತವೆ.

a0=1πππf(x) dx

ಮತ್ತೆ (1) ರ ಎರಡು ಕಡೆಗಳನ್ನೂ cos nx ನಿಂದ ಗುಣಿಸಿ ನಿಂದ π ವರೆಗೆ ಪದಶಃ ಅನುಕಲಿಸಿದರೆ

ππf(x)cosnx dx=anππcos2nx dx=anπ

ಆಗುತ್ತದೆ. ಇತರ ಪದಗಳೆಲ್ಲವೂ ಶೂನ್ಯವಾಗುತ್ತವೆ.

an=1πππf(x)cosnx dx

ಇದೇ ರೀತಿ (1)ರ ಎರಡು ಕಡೆಗಳನ್ನೂ sin nx ನಿಂದ ಗುಣಿಸಿ ನಿಂದ π ವರೆಗೆ ಪದಶಃ ಅನುಕಲಿಸಿದರೆ

bn=1πππf(x)sinnx dx

ಈಗ, ವಿಸ್ತರಣೆ (1)ರಲ್ಲಿ a ಮತ್ತು b ಎಂಬ ಗುಣಕಗಳಿಗೆ ಈ ಅನುಕಲಗಳನ್ನು ಪ್ರತಿಸ್ಥಾಪಿಸಿದರೆ ದೊರೆಯುವ ಶ್ರೇಣಿಯೇ ದತ್ತ ಅಂತರದಲ್ಲಿ f(x) ಗೆ ಅನುಗುಣವಾದ ಫೋರ್ಯೇ ಶ್ರೇಣಿ. ಕೆಲವು ನಿರ್ಬಂಧಗಳಲ್ಲಿ ಈ ಶ್ರೇಣಿ f(x) ಗೆ ಸಮವಾಗಿರುತ್ತದೆ.

ಇಂಥ ಶ್ರೇಣಿಗಳು ಉಪಪ್ರಸರಣ, ತಂತ್ರೀಕಂಪನ ಮುಂತಾದ ಗಣನೆಗಳಿಗೆ ಅವಶ್ಯವಾಗುತ್ತವೆ. ಇವನ್ನು 19ನೆಯ ಶತಮಾನದ ಆದಿಯಲ್ಲಿ ಫೋರ್ಯೇ ಎಂಬ ವಿಜ್ಞಾನಿ ಆವಿಷ್ಕರಿಸಿದ.

ಹೊರಗಿನ ಕೊಂಡಿಗಳು