ವರ್ಣಕೋಶದ ಅಳವಡಿಕೆ
ವರ್ಣಕೋಶ (ಕ್ರೋಮ್ಯಾಟಿಕ್)ದ ಅಳವಡಿಕೆಯು ಕಾಣಿಸುವ ವಸ್ತುವಿನ ಬಣ್ಣಗಳನ್ನು ಸಂರಕ್ಷಿಸಲು ಮಾನವ ದೃಷ್ಟಿಗೋಚರ ವ್ಯವಸ್ಥೆಯು ಮಾಡಿಕೊಳ್ಳುವ ಬೆಳಕಿನ ಬದಲಾವಣೆಯ ಸಾಮರ್ಥ್ಯವಾಗಿದೆ. ವಸ್ತುವಿನಿಂದ ಪ್ರತಿಫಲಿಸುವ ಮತ್ತು ನಮ್ಮ ಕಣ್ಣುಗಳಿಂದ ಗಮನಿಸಬಹುದಾದ ಬೆಳಕಿನ ವ್ಯಾಪಕ ಬದಲಾವಣೆಯ ಹೊರತಾಗಿಯೂ ವಸ್ತುವಿನ ಬಣ್ಣದ ಸ್ಥಿರ ಗೋಚರಿಕೆಗೆ ಇದು ಕಾರಣವಾಗಿದೆ. ಕ್ರೋಮ್ಯಾಟಿಕ್ ಅಡಾಪ್ಟೇಶನ್ ಟ್ರಾನ್ಸ್‌ಫಾರ್ಮೇಶನ್ (ಸಿಎಟಿ) ಕಾರ್ಯವು ಬಣ್ಣದ ವಸ್ತುವಿನಲ್ಲಿ ಕಾಣಿಸುವ ಬಣ್ಣದ ಗ್ರಹಿಕೆಯನ್ನು ಪ್ರಮುಖ ಅಂಶವಾಗಿ ಅನುಕರಿಸುತ್ತದೆ.
ವಸ್ತುವನ್ನು ವಿವಿಧ ಪರಿಸ್ಥಿತಿಗಳಲ್ಲಿ ವೀಕ್ಷಿಸಬಹುದು. ಉದಾಹರಣೆಗೆ, ವಸ್ತುವು ಸೂರ್ಯನ ಬೆಳಕಿನಿಂದ, ಬೆಂಕಿಯ ಬೆಳಕಿನಿಂದ ಅಥವಾ ಕಠಿಣ ವಿದ್ಯುತ್ ಬೆಳಕಿನಿಂದ ಪ್ರಕಾಶಿಸಲ್ಪಡಬಹುದು. ಈ ಎಲ್ಲಾ ಸಂದರ್ಭಗಳಲ್ಲಿ, ವಸ್ತುವು ಒಂದೇ ಬಣ್ಣವನ್ನು ಹೊಂದಿದೆ ಎಂದು ಮಾನವ ದೃಷ್ಟಿ ಗ್ರಹಿಸುತ್ತದೆ: ಹಗಲಿನಲ್ಲಿ ಅಥವಾ ರಾತ್ರಿಯಲ್ಲಿ ನೋಡಿದಾಗಲೂ ಕೆಂಪು ಸೇಬು ಯಾವಾಗಲೂ ಕೆಂಪು ಬಣ್ಣದಲ್ಲಿ ಕಾಣುತ್ತದೆ (ಕೆಂಪು ಸೇಬು ನಮ್ಮ ಕಣ್ಣುಗಳಲ್ಲಿ ಸರಳುಗಳಾಗಿ ಪ್ರಕಾಶಿಸಲ್ಪಟ್ಟರೆ ಕೆಂಪು ಬಣ್ಣವು ನಮಗೆ ಕಾಣಿಸುವುದಿಲ್ಲ). ಮತ್ತೊಂದೆಡೆ, ಬೆಳಕಿನ ಯಾವುದೇ ಹೊಂದಾಣಿಕೆಯನ್ನು ಹೊಂದಿರದ ಒಂದು ಕ್ಯಾಮರಾವು, ಸೇಬುವಿಗೆ ವಿವಿಧ ಬಣ್ಣವನ್ನು ದಾಖಲಿಸಬಹುದು. ದೃಷ್ಟಿಗೋಚರ ವ್ಯವಸ್ಥೆಯ ಈ ವೈಶಿಷ್ಟ್ಯವನ್ನು ಕ್ರೋಮಾಟಿಕ್ ರೂಪಾಂತರ ಅಥವಾ ಬಣ್ಣ ಸ್ಥಿರೀಕರಣ ಎಂದು ಕರೆಯಲಾಗುತ್ತದೆ;ಕ್ಯಾಮರಾದಲ್ಲಿ ತಿದ್ದುಪಡಿ ಸಂಭವಿಸಿದಾಗ ಅದನ್ನು ಬಿಳಿ ಸಮತೋಲನ (ವೈಟ್ ಬ್ಯಾಲೆನ್ಸ್) ಎಂದು ಕರೆಯಲಾಗುತ್ತದೆ.
ಮಾನವನ ದೃಷ್ಟಿಗೋಚರ ವ್ಯವಸ್ಥೆಯು ಸಾಮಾನ್ಯವಾಗಿ ವಿಭಿನ್ನ ಬೆಳಕಿನ ಅಡಿಯಲ್ಲಿ ಸ್ಥಿರವಾದ ಬಣ್ಣವನ್ನು ಗ್ರಹಿಸುತ್ತದೆಯಾದರೂ, ಎರಡು ವಿಭಿನ್ನ ಪ್ರಚೋದಕಗಳ ಸಾಪೇಕ್ಷ ಪ್ರಕಾಶವು ವಿಭಿನ್ನ ಬೆಳಕಿನ ಮಟ್ಟಗಳಲ್ಲಿ ವ್ಯತಿರಿಕ್ತವಾಗಿರುತ್ತದೆ. ಉದಾಹರಣೆಗೆ, ಹೂವುಗಳ ಹಳದಿ ದಳಗಳು ಮಂದ ಬೆಳಕಿನಲ್ಲಿ ಹಸಿರು ಎಲೆಗಳಿಗೆ ಹೋಲಿಸಿದರೆ ಪ್ರಕಾಶಮಾನವಾಗಿ,ಗಾಢವಾಗಿ ಕಾಣಿಸುತ್ತವೆ ಆದರೆ ಹಗಲಿನಲ್ಲಿ ಇದಕ್ಕೆ ವಿರುದ್ಧವಾಗಿ ಕಾಣಿಸುತ್ತದೆ. ಇದನ್ನು ಪುರ್ಕಿಂಜೆ ಪರಿಣಾಮ ಎಂದು ಕರೆಯಲಾಗುತ್ತದೆ ಮತ್ತು ಇದು ಮಾನವನ ಕಣ್ಣಿನ ಗರಿಷ್ಠ ಸಂವೇದನೆಯು ಕಡಿಮೆ ಬೆಳಕಿನ ಮಟ್ಟದಲ್ಲಿ ವರ್ಣಪಟಲದ ನೀಲಿ ತುದಿಗೆ ಬದಲಾಗುವುದರಿಂದ ಉಂಟಾಗುತ್ತದೆ.
ವಾನ್ ಕ್ರೈಸ್ ರೂಪಾಂತರ
ಕೆಲವೊಮ್ಮೆ ಕ್ಯಾಮರಾ ಪ್ರತಿಬಿಂಬ ಸಂಸ್ಕರಣೆಯಲ್ಲಿ(ಕ್ಯಾಮರಾ ಇಮೇಜ್ ಪ್ರೊಸೆಸಿಂಗ್) ಬಳಸಲಾಗುವ ಒಂದು ತಂತ್ರ ವಾನ್ ಕ್ರೈಸ್ ಕ್ರೊಮ್ಯಾಟಿಕ್ ಅಡಾಪ್ಟೇಶನ್ ವಿಧಾನವಾಗಿದೆ.ಉಲ್ಲೇಖದ ಬಿಳಿಯ ಹೊಂದಾಣಿಕೆಯ ನೋಟವನ್ನು ಸ್ಥಿರವಾಗಿರಿಸುವ ಸಲುವಾಗಿ ಈ ವಿಧಾನವು ಪ್ರತಿ ಮಾನವ ಕೋನ್ ಸೆಲ್ ಸ್ಪೆಕ್ಟ್ರಲ್ ಸಂವೇದನಾ ಪ್ರತಿಕ್ರಿಯೆಗಳಿಗೆ ಪ್ರಯೋಜನವನ್ನು ಅನ್ವಯಿಸಿಸುತ್ತದೆ.ಜೋಹಾನ್ಸ್ ವಾನ್ ಕ್ರೈಸ್ ಅವರ ಮೂರು ರೀತಿಯ ಕೋನ್ ಸೆಲ್ ಗಳ ಮೇಲಿನ ಹೊಂದಾಣಿಕೆಯ ಲಾಭಗಳ ಕಲ್ಪನೆಯನ್ನು ಮೊದಲು ಹರ್ಬರ್ಟ್ ಇ. ಐವ್ಸ್ ರವರು ಬಣ್ಣ ಸ್ಥಿರತೆಯ ಸಮಸ್ಯೆಗೆ ಸ್ಪಷ್ಟವಾಗಿ ಅನ್ವಯಿಸಿದರು,[೧][೨] ಮತ್ತು ಈ ವಿಧಾನವನ್ನು ಕೆಲವೊಮ್ಮೆ ಐವ್ಸ್ ರೂಪಾಂತರ[೩] ಅಥವಾ ವಾನ್ ಕ್ರೈಸ್-ಐವ್ಸ್ ರೂಪಾಂತರ[೪] ಎಂದು ಕರೆಯಲಾಗುತ್ತದೆ.
ವಾನ್ ಕ್ರೈಸ್ ಗುಣಾಂಕದ ನಿಯಮವು ಮೂರು ಕೋನ್ ಪ್ರತಿಕ್ರಿಯೆಗಳ ಲಾಭಗಳನ್ನು ಪ್ರತ್ಯೇಕವಾಗಿ ಅಳವಡಿಸಿಕೊಳ್ಳುವ ಮೂಲಕ ಬಣ್ಣ ಸ್ಥಿರತೆಯನ್ನು ಸಾಧಿಸಲಾಗುತ್ತದೆ ಎಂಬ ಊಹೆಯ ಮೇಲೆ ನಿಂತಿದೆ,ಲಾಭಗಳು ಬಣ್ಣ ಇತಿಹಾಸ ಮತ್ತು ಸುತ್ತಲಿನ ಪರಿಸರದಂತಹ ಸಂವೇದನಾ ಸಂದರ್ಭವನ್ನು ಅವಲಂಬಿಸಿದೆ. ಹೀಗಾಗಿ, ಎರಡು ವಿಕಿರಣ ಸ್ಪೆಕ್ಟ್ರಾದಿಂದ ಬರುವ ಕೋನ್ ಪ್ರತಿಕ್ರಿಯೆ c′ಅನ್ನು ಕರ್ಣೀಯ ಅಡಾಪ್ಟೇಶನ್ ಮ್ಯಾಟ್ರಿಸಸ್ D1 ಮತ್ತು D2 ಗಳ ಸೂಕ್ತ ಆಯ್ಕೆಯಿಂದ ಹೊಂದಾಣಿಸಬಹುದು.[೫]
ಇಲ್ಲಿ ಕೋನ್ ಸೆನ್ಸಿಟಿವಿಟಿ ಮ್ಯಾಟ್ರಿಕ್ಸ್ ಮತ್ತು ಎಂಬುದು ಷರತ್ತುಬದ್ಧ ಪ್ರಚೋದನೆಯ ಸ್ಪೆಕ್ಟ್ರಮ್ ಆಗಿದೆ. ಇದು ಎಲ್ ಎಮ್ ಎಸ್(LMS) ಬಣ್ಣದ ಜಾಗದಲ್ಲಿ ಕ್ರೋಮ್ಯಾಟಿಕ್ ಅಳವಡಿಕೆಗಾಗಿ ವಾನ್ ಕ್ರೈಸ್ ರೂಪಾಂತರಕ್ಕೆ ಕಾರಣವಾಗುತ್ತದೆ (ದೀರ್ಘ-, ಮಧ್ಯಮ- ಮತ್ತು ಕಡಿಮೆ-ತರಂಗಾಂತರದ ಕೋನ್ ಪ್ರತಿಕ್ರಿಯೆ ಸ್ಥಳದ ಪ್ರತಿಕ್ರಿಯೆಗಳು):
ಈ ಕರ್ಣೀಯ ಮ್ಯಾಟ್ರಿಕ್ಸ್ ಡಿ(D)ಯು ಒಂದು ರೂಪಾಂತರ ಸ್ಥಿತಿಯಲ್ಲಿರುವ ಕೋನ್ ಪ್ರತಿಕ್ರಿಯೆಗಳನ್ನು ಅಥವಾ ಬಣ್ಣಗಳನ್ನು ಇನ್ನೊಂದರಲ್ಲಿರುವ ಅನುಗುಣವಾದ ಬಣ್ಣಗಳಿಗೆ ನಕ್ಷೆ ಮಾಡುತ್ತದೆ; ರೂಪಾಂತರದ ಸ್ಥಿತಿಯನ್ನು ಪ್ರಕಾಶಕದಿಂದ ನಿರ್ಧರಿಸಲಾಗುತ್ತದೆ ಎಂದು ಭಾವಿಸಿದಾಗ, ಈ ಮ್ಯಾಟ್ರಿಕ್ಸ್ ಪ್ರಕಾಶಕ ರೂಪಾಂತರವಾಗಿ ಉಪಯುಕ್ತವಾಗಿದೆ. ಕರ್ಣೀಯ ಮ್ಯಾಟ್ರಿಕ್ಸ್ ಡಿ(D)ಯ ಅಂಶಗಳು ಪ್ರಕಾಶಕದ ಬಿಳಿ ಬಿಂದುವಿನ ಕೋನ್ ಪ್ರತಿಕ್ರಿಯೆಗಳ (ಉದ್ದ, ಮಧ್ಯಮ, ಸಣ್ಣ) ಅನುಪಾತಗಳಾಗಿವೆ.
ಎಕ್ಸ್ ವೈ ಝಡ್(XYZ)ಅಥವಾ ಆರ್ ಜಿ ಬಿ (RGB )ಬಣ್ಣದ ಜಾಗದಲ್ಲಿ ಪ್ರತಿನಿಧಿಸುವ ಬಣ್ಣಗಳ ಹೆಚ್ಚು ಸಂಪೂರ್ಣವಾದ ವಾನ್ ಕ್ರೈಸ್ ರೂಪಾಂತರವು ಮಧ್ಯದಲ್ಲಿರುವ ಕರ್ಣೀಯ ರೂಪಾಂತರ ಡಿ(D)ಯ ಜೊತೆಗೆ ಎಲ್ ಎಮ್ ಎಸ್(LMS) ಜಾಗದಲ್ಲಿ ಮತ್ತು ಹೊರಗೆ ಮ್ಯಾಟ್ರಿಕ್ಸ್ ರೂಪಾಂತರಗಳನ್ನು ಒಳಗೊಂಡಿರುತ್ತದೆ.[೬]
ಸಿಐಇ ಬಣ್ಣದ ಗೋಚರಿಕೆಯ ಮಾದರಿಗಳು
ಅಂತರಾಷ್ಟ್ರಿಯ ಪ್ರಕಾಶದ ಆಯೋಗ(ಸಿಐಇ)ವು ಬಣ್ಣ ಗೋಚರಿಸುವ ಮಾದರಿಗಳ ಗುಂಪನ್ನು ಪ್ರಕಟಿಸಿದೆ, ಅವುಗಳಲ್ಲಿ ಹೆಚ್ಚಿನವು ಬಣ್ಣ ರೂಪಾಂತರ ಕಾರ್ಯವನ್ನು ಒಳಗೊಂಡಿವೆ. ಸಿಐಇ ಯು L*a*b* (CIELAB) XYZ ಬಣ್ಣದ ಜಾಗದಲ್ಲಿ[೭] "ಸರಳ" ವಾನ್ ಕ್ರಿಸ್-ಮಾದರಿಯ ರೂಪಾಂತರವನ್ನು ನಿರ್ವಹಿಸುತ್ತದೆ, CIELUV ಜಡ್-ಟೈಪ್ (ಅನುವಾದ) ಬಿಳಿ ಬಿಂದು ರೂಪಾಂತರವನ್ನು ಬಳಸುತ್ತದೆ.[೮] CIECAM97s ಮತ್ತು CIECAM02 ಹಾಗೂ CMCCAT97 ಮತ್ತು CAT02ಯು[೭] ಹೆಚ್ಚು ಸಮಗ್ರವಾದ ಬಣ್ಣ ರೂಪದ ಮಾದರಿಗಳ ಎರಡು ಪರಿಷ್ಕರಣೆಗಳಾಗಿವೆ. ಪ್ರತಿಯೊಂದೂ CAT ಕಾರ್ಯವನ್ನು ಒಳಗೊಂಡಿತ್ತು. CMCCAT97 ನ ಸರಳೀಕೃತ ಆವೃತ್ತಿಯಾಗಿರುವ CAT02ನ[೯] ಪೂರ್ವವರ್ತಿಯನ್ನು CMCCAT2000 ಎಂದು ಕರೆಯುತ್ತಾರೆ.[೧೦]
ಉಲ್ಲೇಖಗಳು
- ↑ ಟೆಂಪ್ಲೇಟು:Cite journal (Reprinted in: ಟೆಂಪ್ಲೇಟು:Cite journal)
- ↑ ಟೆಂಪ್ಲೇಟು:Cite journal
- ↑ ಟೆಂಪ್ಲೇಟು:Cite journal
- ↑ ಟೆಂಪ್ಲೇಟು:Cite book
- ↑ ಟೆಂಪ್ಲೇಟು:Cite book
- ↑ ಟೆಂಪ್ಲೇಟು:Cite book
- ↑ ೭.೦ ೭.೧ ಟೆಂಪ್ಲೇಟು:Cite journal
- ↑ ಟೆಂಪ್ಲೇಟು:Cite journal
- ↑ ಟೆಂಪ್ಲೇಟು:Cite bookಟೆಂಪ್ಲೇಟು:Dead link
- ↑ ಟೆಂಪ್ಲೇಟು:Cite journal