ಮೋಬಿಯಸ್ ಉತ್ಪನ್ನ

testwikiದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಮೋಬಿಯಸ್ ಉತ್ಪನ್ನವು ಒಂದು ಅಂಕೋತ್ಪನ್ನ.[] ಈ ಅಂಕೋತ್ಪನ್ನ (ಅರಿತ್‌ಮೆಟಿಕಲ್ ಫಂಕ್ಷನ್) ಟೆಂಪ್ಲೇಟು:Math ಎಂಬುದು ಅಂಕಗಣಿತಕ್ಕೆ ಮೋಬಿಯಸ್ ನೀಡಿದ ಉತ್ತಮ ಕೊಡುಗೆ.ಟೆಂಪ್ಲೇಟು:Sfn ಇಲ್ಲಿ x = ಚರ. ಇದು ಒಂದು ನೈಸರ್ಗಿಕ ಸಂಖ್ಯೆ. ಎಂದರೆ ಟೆಂಪ್ಲೇಟು:Math ಎಂಬುದು ಎಲ್ಲ ನೈಸರ್ಗಿಕ ಸಂಖ್ಯೆಗಳ ಗಣವಾದರೆx ಇದರಲ್ಲಿ ಯಾವ ಸಂಖ್ಯೆಯಾದರೂ ಆಗಿರಬಹುದು. ಅರ್ಥಾತ್ ಟೆಂಪ್ಲೇಟು:Math ಉತ್ಪನ್ನದ ಪ್ರಾಂತ್ಯ (domain) N ಎಂದಾಗುತ್ತದೆ.

N ಪ್ರಾಂತ್ಯವಾಗಿರುವ ಉತ್ಪನ್ನಗಳನ್ನು ಅಂಕೋತ್ಪನ್ನ ಎಂದು ಕರೆಯುವುದಿದೆ. ಈಗ x>1 ಆಗಿದ್ದು ಅದು ಯಾವ ನೈಸರ್ಗಿಕ ಸಂಖ್ಯೆಯೇ ಆಗಲಿ, ಅದನ್ನು ಕೆಲವು ಅವಿಭಾಜ್ಯ ಸಂಖ್ಯೆಗಳ ಗುಣಲಬ್ಧವಾಗಿ ಅನುವರ್ತಿಸುವುದು. ಇಂಥ ಅಪವರ್ತನವು (factor) ಏಕೈಕ ಮಾತ್ರ. ಇದರಲ್ಲಿ ಕೆಲವು ಅವಿಭಾಜ್ಯಗಳು (ಪ್ರೈಮ್ಸ್) ಒಂದಕ್ಕಿಂತ ಹೆಚ್ಚು ಸಲ ಬಂದಿರಬಹುದು.

ಉದಾಹರಣೆ (1): 12 = 2 x 2 x 3. ಇಲ್ಲಿ ಅವಿಭಾಜ್ಯ 2. ಇದು ಎರಡು ಬಾರಿ ಬಂದಿದೆ.

ಉದಾಹರಣೆ (2): 15 = 3 x 5. ಇದು ಎರಡು ಪರಸ್ಪರ ಭಿನ್ನವಾದ ಅವಿಭಾಜ್ಯಗಳಾದ 3 ಮತ್ತು 5 ರ ಗುಣಲಬ್ಧ.

ಮೋಬಿಯಸ್ ಉತ್ಪನ್ನದ ವ್ಯಾಖ್ಯಾನ

ಈ ಹಿನ್ನೆಲೆಯಲ್ಲಿ ಮೋಬಿಯಸ್ ಉತ್ಪನ್ನ ಟೆಂಪ್ಲೇಟು:Math ವನ್ನು ಹೀಗೆ ವ್ಯಾಖ್ಯಾನಿಸಲಾಗುತ್ತದೆ:

ವ್ಯಾಖ್ಯೆ 1ಟೆಂಪ್ಲೇಟು:Math ಮತ್ತು x>1,xϵNಆದಾಗ x ಎಂಬುದು n ಪರಸ್ಪರ ಭಿನ್ನ ಅವಿಭಾಜ್ಯಗಳ ಗುಣಲಬ್ಧವಾಗಿದ್ದರೆ μ(x)=(1)n ಎಂದಾಗುತ್ತದೆ. ಹಾಗಲ್ಲದೆ x ನ ಅವಿಭಾಜ್ಯ ಅಪವರ್ತನೀಕರಣದಲ್ಲಿ ಯಾವುದೇ ಅವಿಭಾಜ್ಯ ಅಪವರ್ತನ ಒಂದಕ್ಕಿಂತ ಹೆಚ್ಚುಸಲ ಪುನರಾವರ್ತಿಸಿದ್ದರೆ, μ(x)=0 ಎಂದು ವ್ಯಾಖ್ಯಾನಿಸಲಾಗುವುದು.

ಉದಾಹರಣೆ (1): μ(12)=0 ಮತ್ತು μ(15)=(1)2=1

ವ್ಯಾಖ್ಯೆ 2ξ ಯಾವುದೇ ನೈಜಸಂಖ್ಯೆಯಾಗಿರಲಿ. ಈಗ nξ<(n+1) ಆಗುವಂಥ ಕನಿಷ್ಠತಮ ಪೂರ್ಣಾಂಕ (whole number) n ಏಕೈಕವಾಗಿ ಅಸ್ತಿತ್ವದಲ್ಲಿರುತ್ತದೆ. ಈ n ನನ್ನು ξ ನ ಪೂರ್ಣಭಾಗ ಎಂದು ಕರೆಯಲಾಗುತ್ತದೆ. ಇದನ್ನು n=[ξ] ಎಂದು ಸಾಂಕೇತಿಕವಾಗಿ ಬರೆಯಲಾಗುವುದು.

ಪ್ರಮೇಯಗಳು

ಈ ವ್ಯಾಖ್ಯೆಗಳ ಹಿನ್ನೆಲೆಯಲ್ಲಿ ಟೆಂಪ್ಲೇಟು:Math ಉತ್ಪನ್ನದ ಕೆಲವು ಮುಖ್ಯ ಗುಣ ವಿಶೇಷಗಳನ್ನು ಮುಂದಿನ ಪ್ರಮೇಯಗಳಲ್ಲಿ ಸೂಚಿಸಲಾಗಿದೆ.

ಪ್ರಮೇಯ 1a ಯಾವುದೇ ನೈಸರ್ಗಿಕ ಸಂಖ್ಯೆಯಾದರೂ

daμ(d)={1if a=1,0if a>1. ಆದಾಗ

ಇಲ್ಲಿ d ಯು a ಯ ಅಪವರ್ತನಗಳನ್ನು ಸೂಚಿಸುತ್ತದೆ. Σ ಎಂಬ ಪ್ರತೀಕವಾದರೊ Σ ಸಂಕಲನ a ಯ ಎಲ್ಲ ಅಪವರ್ತನ d ಗಳ ಮೇಲೆ ಸಾಗಿದೆ ಎಂದು ತಿಳಿಸುತ್ತದೆ.

ಪ್ರಮೇಯ 2: [ξ]; μ(j)[ξ/j]=1; j=1

ಪ್ರಮೇಯ 3: m > 1 ಆದರೆ, |n=1mμ(n)n|1

ಪ್ರಮೇಯ 4P ಯಾವುದೇ ಅಂಕೋತ್ಪನವಾದರೂ G(a)=daF(d) ಆಗಿದ್ದರೆ, ಇದರ ವಿಲೋಮ ಸಂಬಂಧ F(a)=daμ(d)G(ad)ಪರಿಪಾಲಿತವಾಗುತ್ತದೆ. ಇದು ಪ್ರಸಿದ್ಧವಾದ ಮೋಬಿಯಸ್ ವಿಲೋಮಸೂತ್ರ.

ಉಲ್ಲೇಖಗಳು

ಟೆಂಪ್ಲೇಟು:ಉಲ್ಲೇಖಗಳು

ಮೂಲಗಳು

ಟೆಂಪ್ಲೇಟು:Refbegin

ಟೆಂಪ್ಲೇಟು:Refend

ಹೊರಗಿನ ಕೊಂಡಿಗಳು

  1. Möbius function. Encyclopedia of Mathematics. URL: http://encyclopediaofmath.org/index.php?title=M%C3%B6bius_function&oldid=54235