ಭೌತಿಕ ದ್ರವ್ಯರಾಶಿ ಸೂಚಿ

testwikiದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಶಾರೀರಿಕ ದ್ರವ್ಯರಾಶಿ ಸೂಚಿಯ ರೇಖಾಚಿತ್ರವನ್ನು ಮೇಲೆ ತೋರಿಸಲಾಗಿದೆ. ಅಡ್ಡಗೆರೆಗಳು ಪ್ರಮುಖ ವರ್ಗದಲ್ಲಿನ ಉಪವಿಭಾಗಗಳನ್ನು ಸೂಚಿಸುತ್ತವೆ.ಉದಾಹರಣೆಗಾಗಿ, "ಕಡಿಮೆ-ತೂಕ" ವರ್ಗೀಕರಣವನ್ನು ಮತ್ತೆ "ತೀವ್ರ", "ಮಧ್ಯಮ" ಮತ್ತು "ಕಡಿಮೆ" ಉಪವಿಭಾಗಗಳಾಗಿ ವಿಂಗಡಿಸಲಾಗಿದೆ.ವಿಶ್ವ ಆರೋಗ್ಯ ಸಂಸ್ಥೆಯಾಧಾರಿತ ಮಾಹಿತಿ ಇಲ್ಲಿದೆ.

ಭೌತಿಕ ದ್ರವ್ಯರಾಶಿ ಸೂಚಿ (BMI ) ಅಥವಾ ಕ್ವೆಟೆಲೆಟ್‌ ಸೂಚಿ ಯು ಒಬ್ಬ ವ್ಯಕ್ತಿಯ ತೂಕ ಮತ್ತು ಎತ್ತರವನ್ನು ಹೋಲಿಕೆ ಮಾಡುವ ಒಂದು ಸಂಖ್ಯಾಶಾಸ್ತ್ರೀಯ ಅಳತೆ. ಇದು ನಿಜವಾಗಿ ಶರೀರದ ಕೊಬ್ಬಿನ ಶೇಕಡಾವಾರು ಪ್ರಮಾಣವನ್ನು ಅಳೆಯದಿದ್ದರೂ, ವ್ಯಕ್ತಿಯ ಎತ್ತರದ ಆಧಾರದಲ್ಲಿ ಆರೋಗ್ಯಪೂರ್ಣ ದೇಹದ ತೂಕವನ್ನು ಅಂದಾಜು ಮಾಡಲು ನೆರವಾಗುತ್ತದೆ. ಇದರ ಮಾಪನದ ಮತ್ತು ಗಣನೆಯ ಸುಲಭತೆಯಿಂದಾಗಿ, ಇದನ್ನು ಹೆಚ್ಚಾಗಿ ಜನರಲ್ಲಿನ ತೂಕಕ್ಕೆ ಸಂಬಂಧಿಸಿದ ತೊಂದರೆಗಳನ್ನು ಕಂಡುಹಿಡಿದು, ರೋಗನಿರ್ಣಯದ ಸಾಧನವಾಗಿ ಉಪಯೋಗಿಸಲಾಗುತ್ತದೆ. ಸಾಮಾನ್ಯವಾಗಿ ವ್ಯಕ್ತಿಗಳು ಕಡಿಮೆ-ತೂಕ, ಹೆಚ್ಚು-ತೂಕ ಅಥವಾ ಬೊಜ್ಜು ಅಥವಾ ಕೊಬ್ಬಿನಾಂಶದ ಶರೀರ ಹೊಂದಿರುವರೇ ಎಂಬುದನ್ನು ಗುರುತಿಸಬಹುದು. ಇದನ್ನು 1830 ಮತ್ತು 1850ರ ನಡುವೆ, ಬೆಲ್ಜಿಯಂನ ಮಹಾವಿದ್ವಾಂಸ ಅಡೋಲ್ಫೆ ಕ್ವೆಟೆಲೆಟ್‌ "ಸಾಮಾಜಿಕ ಭೌತವಿಜ್ಞಾನ"ವನ್ನು ಅಭಿವೃದ್ಧಿಗೊಳಿಸುವ ಸಂದರ್ಭದಲ್ಲಿ ಆವಿಷ್ಕರಿಸಿದನು.[] ಶಾರೀರಿಕ ದ್ರವ್ಯರಾಶಿ ಸೂಚಿ ಎಂದರೆ ವ್ಯಕ್ತಿಯ ಶರೀರದ ತೂಕವನ್ನು ಅವನ ಅಥವಾ ಅವಳ ಎತ್ತರದ ವರ್ಗದಿಂದ ಭಾಗಿಸಿದಾಗ ಸಿಗುವ ಪರಿಮಾಣ. ವೈದ್ಯಕೀಯ ಕ್ಷೇತ್ರದಲ್ಲಿ ಸಾರ್ವತ್ರಿಕವಾಗಿ ಬಳಸುವ ಸೂತ್ರವು ಕೆಜಿ/ಮೀ2 ಎಂಬ ಅಳತೆಯ ಏಕಮಾನವನ್ನು ನೀಡುತ್ತದೆ. BMIಅನ್ನು BMI-ಕೋಷ್ಟಕವನ್ನು ಬಳಸಿಕೊಂಡೂ ಕಂಡುಹಿಡಿಯಬಹುದು. ಇದು BMIಯ ವಿವಿಧ ಮೌಲ್ಯಗಳಿಗೆ ಸಮೋನ್ನತೆ ರೇಖೆಗಳನ್ನು ಅಥವಾ ವಿವಿಧ BMI ವರ್ಗಗಳಿಗೆ ಬಣ್ಣಗಳನ್ನು ಬಳಸಿಕೊಂಡು BMIಅನ್ನು ತೂಕ (ಸಮಾಂತರವಾದ ರೇಖೆ) ಮತ್ತು ಎತ್ತರಕ್ಕೆ (ಲಂಬವಾಗಿರುವ ರೇಖೆ) ಬಳಸಿ ಸಂಬಂಧಪಟ್ಟ ವಿಷಯವನ್ನು ತೋರಿಸುತ್ತದೆ.

SI ಏಕಮಾನಗಳು BMI=mass (kg)(height(m))2
ಬ್ರಿಟನ್ನಿನ ಏಕಮಾನಗಳು BMI=mass (lb)×703(height(in))2
BMI=mass (lb)×4.88(height(ft))2

ಬಳಕೆ

BMIನ ಸೂತ್ರವು 19ನೇ ಶತಮಾನದಲ್ಲಿ ಬಳಕೆಗೆ ಬಂದಿತು. ಅದರ ಅನುಪಾತಕ್ಕೆ "ಶಾರೀರಿಕ ದ್ರವ್ಯರಾಶಿ ಸೂಚಿ" ಎಂಬ ಪದ ಬಳಕೆಯಾಗಿದೆ. ಅದರ ಜನಪ್ರಿಯತೆಯು ಏನ್ಸೆಲ್ ಕೀಸ್‌‌ನಿಂದ 1972ರ ಲೇಖನದಲ್ಲಿ ಬೆಳಕಿಗೆ ಬಂದಿತು. ಈ ಲೇಖನವು ದೇಹದ ತೂಕ ಮತ್ತು ಎತ್ತರದ ಅನುಪಾತಗಳಿಂದ ಶರೀರದ ಕೊಬ್ಬಿನ ಅಂಶದ ಶೇಕಡಾವಾರನ್ನು ಕಂಡುಹಿಡಿಯುವುದಕ್ಕೆ ಅನುಕೂಲವಾಗಿದೆ.BMIಯು ಉತ್ತಮ ಬದಲಿ ಅಂಶ ಎಂಬುದನ್ನು ತೋರಿಸಿದೆ.2/}[] ಶ್ರೀಮಂತ ಪಾಶ್ಚಿಮಾತ್ಯ ಸಮಾಜದಲ್ಲಿ ಸ್ಥೂಲಕಾಯತೆಯು ಹೆಚ್ಚಾಗಿ ಕಾಣಿಸಿಕೊಳ್ಳುವ ಸಮಸ್ಯೆಯಾದುದುರಿಂದ ಶರೀರದ ಕೊಬ್ಬನ್ನು ಅಳತೆ ಮಾಡುವ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಲಾಗುತ್ತದೆ. BMI ಜನಸಂಖ್ಯೆ ಅಧ್ಯಯನಕ್ಕೆ ಹೆಚ್ಚು ಸೂಕ್ತವಾದುದು ಹಾಗೂ ವೈಯಕ್ತಿಕ ರೋಗನಿರ್ಣಯಕ್ಕೆ ಯೋಗ್ಯವಾದುದಲ್ಲ ಎಂದು ಕೀಸ್ ಉಲ್ಲೇಖಿಸಿದ್ದಾನೆ. ಯೋಗ್ಯವಲ್ಲದಿದ್ದರೂ, ಅದರ ಸರಳತೆಯಿಂದಾಗಿ ಹೆಚ್ಚಾಗಿ ವೈಯಕ್ತಿಕ ರೋಗನಿರ್ಧಾರ ಮಾಡಲು ಬಳಸಲಾಗುತ್ತದೆ.

BMIಯು ವ್ಯಕ್ತಿಯ "ಬೊಜ್ಜು" ಅಥವಾ "ಕೃಶತೆ"ಯ ಸರಳ ಸಂಖ್ಯಾತ್ಮಕ ಅಳತೆ ಒದಗಿಸಿತು. ಇದು ಆರೋಗ್ಯಾಧಿಕಾರಿಗಳಿಗೆ ಅವರ ರೋಗಿಗಳ ಹೆಚ್ಚು-ಮತ್ತು ಕಡಿಮೆ-ತೂಕದ ಸಮಸ್ಯೆಗಳ ಬಗ್ಗೆ ಹೆಚ್ಚು ವಸ್ತುನಿಷ್ಠವಾಗಿ ಚರ್ಚಿಸಲು ಅನುವು ಮಾಡಿಕೊಟ್ಟಿತು. ಆದರೆ ನಂತರ BMI ವಿವಾದಾಸ್ಪದವಾಯಿತು. ಏಕೆಂದರೆ ವೈದ್ಯರನ್ನೂ ಒಳಗೊಂಡಂತೆ ಅನೇಕ ಜನರು ವೈದ್ಯಕೀಯ ರೋಗನಿರ್ಣಯ ಮಾಡುವುದಕ್ಕಾಗಿ ಅದರ ಸ್ಪಷ್ಟ ಸಂಖ್ಯಾತ್ಮಕ ಪ್ರಮಾಣವನ್ನು ಅವಲಂಬಿಸತೊಡಗಿದರು. ಆದರೆ ಅದು BMIಯ ಗುರಿಯಾಗಿರಲಿಲ್ಲ; ಇದು ಹೆಚ್ಚಾಗಿ ಕುಳಿತೇ ಇರುವವರನ್ನು (ದೈಹಿಕವಾಗಿ ಸಕ್ರಿಯವಾಗಿರದವರು) ಸರಾಸರಿ ಶರೀರ ರಚನೆಯನ್ನು ಹೊಂದಿರುವವರಿಂದ ವಿಂಗಡಿಸುವುದಕ್ಕಾಗಿ ಬಳಸಲು ಮಾಡಿದ ಸರಳ ಮಾಪನವಾಗಿದೆ.[] ಇವರಿಗೆ ಪ್ರಸ್ತುತವಿರುವ ಮೌಲ್ಯಗಳು ಈ ಕೆಳಗಿನಂತಿವೆ: 18.5ರಿಂದ 25ರವರೆಗಿನ BMI ಉತ್ತಮ ತೂಕವಿರುವುದನ್ನು ಸೂಚಿಸುತ್ತದೆ; BMIಯು 18.5ಕ್ಕಿಂತ ಕಡಿಮೆ ಇದ್ದರೆ ವ್ಯಕ್ತಿಯು ಕಡಿಮೆ-ತೂಕ ಹೊಂದಿದ್ದಾನೆಂದು ಹಾಗೂ 25ಕ್ಕಿಂತ ಹೆಚ್ಚಿಗೆ ಇದ್ದರೆ ಹೆಚ್ಚು-ತೂಕ ಹೊಂದಿರುವನೆಂದೂ ನಿರೂಪಿಸುತ್ತದೆ; 17.5ಕ್ಕಿಂತ ಕಡಿಮೆ ಇರುವ BMI ವ್ಯಕ್ತಿಯು ಆಹಾರಮಾಂದ್ಯ ಅಥವಾ ಸಂಬಂಧಿತ ಕಾಯಿಲೆಯನ್ನು ಹೊಂದಿರುವನೆಂದು ಹೇಳುತ್ತದೆ; 30ಕ್ಕಿಂತ ಹೆಚ್ಚಿನ ಸಂಖ್ಯೆಯು ಬೊಜ್ಜು ಇರುವ ಬಗ್ಗೆ ಸೂಚಿಸುತ್ತದೆ. (40ಕ್ಕಿಂತ ಹೆಚ್ಚಿದ್ದರೆ ರೋಗಗ್ರಸ್ತ ಬೊಜ್ಜು).

ಒಂದು ನಿರ್ದಿಷ್ಟ ಎತ್ತರದಲ್ಲಿ, BMIಯು ತೂಕಕ್ಕೆ ಸಮಾನ ಅನುಪಾತದಲ್ಲಿರುತ್ತದೆ. ಒಂದು ನಿರ್ದಿಷ್ಟ ತೂಕದಲ್ಲಿ, BMIಯು ಎತ್ತರದ ವರ್ಗ ಕ್ಕೆ ವಿಲೋಮಾನುಪಾತದಲ್ಲಿರುತ್ತದೆ. ಆದ್ದರಿಂದ ದೇಹದ ಎಲ್ಲಾ ಅಳತೆಗಳು ದ್ವಿಗುಣಗೊಂಡರೆ ಹಾಗೂ ತೂಕವು ನೈಸರ್ಗಿಕವಾಗಿ ಎತ್ತರದ ಮ‌ೂರು ಪಟ್ಟು ಹೆಚ್ಚಾದರೆ, BMI ಅದೇ ರೀತಿ ಇರದೆ ಎರಡು ಪಟ್ಟಾಗುತ್ತದೆ. ಇದು ಎತ್ತರದ ವ್ಯಕ್ತಿಗಳಲ್ಲಿ ಅವರ ನಿಜವಾದ ದೇಹದ ತೂಕದೊಂದಿಗೆ ಹೋಲಿಸಿದರೆ ವಿಲಕ್ಷಣವಾಗಿ ಕಂಡುಬರುವ ತುಂಬಾ ಹೆಚ್ಚಿನ ಪ್ರಮಾಣದ BMI ಇರುವಂತೆ ಮಾಡುತ್ತದೆ. ಈ ದೋಷವು, ಹೆಚ್ಚಿನ ಎತ್ತರದ ವ್ಯಕ್ತಿಗಳು ಬರಿಯ "ದೊಡ್ಡದಾದ" ಕುಳ್ಳ ವ್ಯಕ್ತಿಗಳಲ್ಲ, ಅವರ ಎತ್ತರದ ಅನುಪಾತದೊಂದಿಗೆ ಅಲ್ಪಪ್ರಮಾಣದ ಸಂಬಂಧ ಹೊಂದಿರುತ್ತಾರೆ ಎಂಬ ವಿಷಯದಿಂದ ಭಾಗಶಃ ಸರಿದೂಗಿಸಲ್ಪಡುತ್ತದೆ. ದೇಹದ ತೂಕವನ್ನು ವರ್ಗಮಾಡುವುದರ ಬದಲು (BMI ಮಾಡುವಂತೆ) ಅಥವಾ ಮ‌ೂರುಪಟ್ಟು ಮಾಡುವುದರ ಬದಲು (ಪಾಂಡೆರಲ್ ಸೂಚಿ ಮಾಡುವಂತೆ), 2.3ರಿಂದ 2.7ರ ನಡುವಿನ ಘಾತವೊಂದನ್ನು ಬಳಸುವುದು ಹೆಚ್ಚು ಸೂಕ್ತವಾದುದು ಎಂದು ಪರಿಗಣಿಸಲಾಗಿದೆ.[]

BMI ಪ್ರೈಮ್‌

BMI ಪ್ರೈಮ್‌ ಒಂದು BMI ವ್ಯವಸ್ಥೆಯ ಸರಳ ಪರಿವರ್ತನೆ, ಇದು ನಿಜವಾದ BMI ಮತ್ತು ಗರಿಷ್ಠ BMIಯ (ಪ್ರಸ್ತುತವಾಗಿ BMI 25ರಲ್ಲಿ ನಿರೂಪಿಸಿದ) ಅನುಪಾತವಾಗಿದೆ. ಅರ್ಥ ವಿವರದ ನಿರೂಪಣೆಯಂತೆ BMI ಪ್ರೈಮ್‌ಅನ್ನು ದೇಹದ ತೂಕ ಮತ್ತು BMI 25ರಲ್ಲಿ ಅಂದಾಜು ಮಾಡಿದ ದೇಹದ ಗರಿಷ್ಠ ಮಿತಿಯ ತೂಕದ ಅನುಪಾತ ಎಂದೂ ಹೇಳಬಹುದು. ಇದು ಎರಡು ಬೇರೆ ಬೇರೆ BMI ಮೌಲ್ಯಗಳ ಅನುಪಾತವಾಗಿರುವುರಿಂದ BMI ಪ್ರೈಮ್‌ ಒಂದು ಅಳತೆಯಿಲ್ಲದ ಸಂಖ್ಯೆ. ಅಲ್ಲದೇ ಇದು ಏಕಮಾನವನ್ನು ಹೊಂದಿಲ್ಲ. 0.74ಕ್ಕಿಂತ ಕಡಿಮೆ BMI ಪ್ರೈಮ್‌ ಹೊಂದಿರುವವರು ಕಡಿಮೆ-ತೂಕದವರು; 0.74ರಿಂದ 0.99ರ ಮಧ್ಯೆ ಇರುವವರು ಉತ್ತಮ ಸಮಪ್ರಮಾಣದ ತೂಕ ಹೊಂದಿರುವವರು; ಹಾಗೂ 1.00 ಅಥವಾ ಅದಕ್ಕಿಂತ ಹೆಚ್ಚು ಇದ್ದರೆ ಅವರು ಅಧಿಕ-ತೂಕ ಹೊಂದಿರುತ್ತಾರೆ. BMI ಪ್ರೈಮ್‌ ವೈದ್ಯಕೀಯವಾಗಿ ಬಹುಪಯುಕ್ತವಾಗಿದೆ. ಏಕೆಂದರೆ ಗರಿಷ್ಠ ಮಟ್ಟದ ತೂಕದ ಮಿತಿಗಳಿಗಿಂತ ರೋಗಿಗಳು ಯಾವ ಶೇಕಡಾವಾರಿನಲ್ಲಿ ವ್ಯತ್ಯಾಸ ಹೊಂದಿದ್ದಾರೆಂಬುದನ್ನು ಕ್ಷಣಮಾತ್ರದಲ್ಲಿ ಹೇಳಬಹುದು. ಉದಾಹರಣೆಗಾಗಿ, BMI 34 ಇರುವ ವ್ಯಕ್ತಿಯ BMI ಪ್ರೈಮ್‌ 34/25 = 1.36ನಷ್ಟಿರುತ್ತದೆ ಹಾಗೂ ಇದು ಅವನ ಅಥವಾ ಅವಳ ಗರಿಷ್ಟ ತೂಕದ ಮಿತಿಗಿಂತ 36%ನಷ್ಟು ಹೆಚ್ಚಿಗೆ ಇರುತ್ತದೆ. ಏಷ್ಯಾದ ಜನರಲ್ಲಿ (ಕೆಳಗಿನ ಅಂತಾರಾಷ್ಟ್ರೀಯ ವ್ಯತ್ಯಾಸ ವಿಭಾಗ ನೋಡಿ.) 25ರ ಬದಲಿಗೆ 23ರ ಗರಿಷ್ಠ ಮಿತಿಯ BMIಅನ್ನು ಛೇದವಾಗಿ ಬಳಸಿಕೊಂಡು BMI ಪ್ರೈಮ್‌ಅನ್ನು ಲೆಕ್ಕಮಾಡಬೇಕು. ಗರಿಷ್ಠ ಮಿತಿಯ BMI ಮೌಲ್ಯಗಳು ವ್ಯತ್ಯಾಸಗೊಳ್ಳುವವರಲ್ಲಿ ಸುಲಭ ಹೋಲಿಕೆಗೆ BMI ಪ್ರೈಮ್‌ ಅನುವು ಮಾಡಿಕೊಡುತ್ತದೆ.[]

ವರ್ಗೀಕರಣದ ವಿಭಾಗಗಳು

ವ್ಯಕ್ತಿಯ ದೇಹದ ತೂಕವು ಅವನ ಅಥವಾ ಅವಳ ಎತ್ತರಕ್ಕೆ ಬೇಕಾಗುವಷ್ಟಕ್ಕಿಂತ ಎಷ್ಟು ವ್ಯತ್ಯಾಸ ಹೊಂದಿದೆ ಎಂಬುದನ್ನು ನಿರ್ಣಯಿಸಲು BMIಅನ್ನು ಹೆಚ್ಚಾಗಿ ಬಳಸಲಾಗುತ್ತದೆ. ದೇಹದ ಕೊಬ್ಬಿಗೆ (ಕೊಬ್ಬುಳ್ಳ ಅಂಗಾಂಶ ) ಕಾರಣವಾಗುವ ಅತೀ ಹೆಚ್ಚಿನ ತೂಕ ಅಥವಾ ತೂಕದ ಕೊರತೆ ಹಾಗೂ ದಷ್ಟಪುಷ್ಟ ಸ್ಥಿತಿಯಂತಹ ಇತರ ಅಂಶಗಳೂ ಸಹ BMIಗೆ ಗಮನಾರ್ಹ ಪರಿಣಾಮ ಬೀರಬಹುದು. (ಕೆಳಗಿನ ವಿವರಣೆ ಮತ್ತು ಹೆಚ್ಚು-ತೂಕವನ್ನು ಗಮನಿಸಿ). 18.5ಕ್ಕಿಂತ ಕಡಿಮೆ ಮಟ್ಟದ BMI ಇರುವವರು ಕಡಿಮೆ-ತೂಕ ಹೊಂದಿರುತ್ತಾರೆ. ಅಲ್ಲದೇ ಅವರಲ್ಲಿ ಅಪೌಷ್ಟಿಕತೆ, ತಿನ್ನುವ ಕಾಯಿಲೆ ಅಥವಾ ಇತರ ಆರೋಗ್ಯ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದಾಗ್ಯೂ 25ಕ್ಕಿಂತ ಅಧಿಕ BMIಅನ್ನು ಹೆಚ್ಚು-ತೂಕ ಎಂದೂ 30ಕ್ಕಿಂತ ಹೆಚ್ಚಿನದನ್ನು ಬೊಜ್ಜು ಮೈ ಎಂದೂ ಪರಿಗಣಿಸಲಾಗುತ್ತದೆ ಎಂಬುದನ್ನು WHO[] ವಿವರಿಸಿದೆ. BMI ಮೌಲ್ಯಗಳ ಈ ವ್ಯಾಪ್ತಿಯನ್ನು ವಯಸ್ಕರಿಗೆ ಅನ್ವಯಿಸಿದಾಗ ಸಂಖ್ಯಾಶಾಸ್ತ್ರೀಯ ವರ್ಗಗಳಾಗಿ ಮಾತ್ರ ತರ್ಕಬದ್ದವಾಗಿರುತ್ತವೆ, ಆರೋಗ್ಯದ ಬಗ್ಗೆ ಯಾವುದೇ ಅಂದಾಜುಗಳನ್ನು ಇದು ನೀಡುವದಿಲ್ಲ.

ವರ್ಗದ ವಿಭಾಗ BMI ವ್ಯಾಪ್ತಿ– ಕೆಜಿ/ಮೀ2 BMI ಪ್ರೈಮ್‌ ಈ BMI ನೊಂದಿಗೆ ಟೆಂಪ್ಲೇಟು:Convert ವ್ಯಕ್ತಿಯ ದ್ರವ್ಯರಾಶಿ (ತೂಕ)
ತುಂಬಾ ಕಡಿಮೆ-ತೂಕ 16.5ಕ್ಕಿಂತ ಕಡಿಮೆ 0.66ಕ್ಕಿಂತ ಕಡಿಮೆ ಟೆಂಪ್ಲೇಟು:Convertಗಿಂತ ಕೆಳಗೆ
ಕಡಿಮೆ-ತೂಕ 16.5ರಿಂದ 18.4ರವರೆಗೆ 0.66ರಿಂದ 0.73ರವರೆಗೆ ಟೆಂಪ್ಲೇಟು:Convertರ ಮಧ್ಯ
ಸಾಮಾನ್ಯ ಸ್ಥಿತಿ 18.5ರಿಂದ 24.9ರವರೆಗೆ 0.74ರಿಂದ 0.99ರವರೆಗೆ ಟೆಂಪ್ಲೇಟು:Convertರ ಮಧ್ಯ
ಹೆಚ್ಚು-ತೂಕ 25ರಿಂದ 30ರವರೆಗೆ 1.0ರಿಂದ 1.2ರವರೆಗೆ ಟೆಂಪ್ಲೇಟು:Convertರ ಮಧ್ಯ
ಬೊಜ್ಜು ಮೈ ವರ್ಗ I 30.1ರಿಂದ 34.9ರವರೆಗೆ 1.21ರಿಂದ 1.4ರವರೆಗೆ ಟೆಂಪ್ಲೇಟು:Convertರ ಮಧ್ಯೆ
ಬೊಜ್ಜು ಮೈ ವರ್ಗ II 35ರಿಂದ 40ರವರೆಗೆ 1.41ರಿಂದ 1.6ರವರೆಗೆ ಟೆಂಪ್ಲೇಟು:Convertರ ಮಧ್ಯೆ
ಬೊಜ್ಜು ಮೈ ವರ್ಗ III 40ಕ್ಕಿಂತ ಹೆಚ್ಚು 1.6ಕ್ಕಿಂತ ಹೆಚ್ಚು ಟೆಂಪ್ಲೇಟು:Convertಗಿಂತ ಹೆಚ್ಚು

1994ರ U.S. ನ್ಯಾಷನಲ್ ಹೆಲ್ತ್ ಆಂಡ್ ನ್ಯೂಟ್ರಿಶನ್ ಎಕ್ಸಾಮಿನೇಶನ್ ಸರ್ವೆಯು ಅಮೇರಿಕಾದ 59%ನಷ್ಟು ಪುರುಷರು ಮತ್ತು 49%ನಷ್ಟು ಮಹಿಳೆಯರು 25ಕ್ಕಿಂತ ಹೆಚ್ಚು BMIಅನ್ನು ಹೊಂದಿದ್ದಾರೆಂಬುದನ್ನು ಸೂಚಿಸುತ್ತದೆ. ರೋಗಸೂಚಕ ಸ್ಥೂಲಕಾಯತೆಯು — 40 ಅಥವಾ ಅದಕ್ಕಿಂತ ಹೆಚ್ಚಿನ BMI — 2%ನಷ್ಟು ಪುರುಷರಲ್ಲಿ ಮತ್ತು 4%ನಷ್ಟು ಮಹಿಳೆಯರಲ್ಲಿ ಕಂಡುಬಂದಿದೆ. ಕಳೆದ 2007ರಲ್ಲಿನ ಹೊಸ ಸಮೀಕ್ಷೆಯೊಂದು, BMI ಹೆಚ್ಚಾಗುವುದು ಮುಂದುವರಿದು 26%ನಷ್ಟು ಬೊಜ್ಜು ಮೈಯ ವರ್ಗದಲ್ಲಿರುವುದರೊಂದಿಗೆ 63%ನಷ್ಟು ಅಮೇರಿಕನ್ನರು ಹೆಚ್ಚು-ತೂಕ ಹೊಂದಿದ್ದಾರೆ. (30 ಅಥವಾ ಅದಕ್ಕಿಂತ ಹೆಚ್ಚು BMI) ಎಂದು ಸೂಚಿಸಿದೆ. ಮಹಿಳೆಯರಲ್ಲಿ ಕಡಿಮೆ-ತೂಕವಿದೆ ಎಂದು ಹೇಳುವ ಪರಿಮಾಣದ ಬಗ್ಗೆ ವಿವಿಧ ರೀತಿಯ ಅಭಿಪ್ರಾಯಗಳಿವೆ. ವೈದ್ಯರು 18.5ರಿಂದ 20ರವರೆಗೆ BMI ಇರುವ ಯಾವುದೇ ಮಿತಿಯನ್ನು ಅತೀ ಕಡಿಮೆ ತೂಕ ಎಂದು ಹೇಳಿದರೆ, ಹೆಚ್ಚಾಗಿ 19ರಷ್ಟು ಹೊಂದಿರುವವರನ್ನು ಅತಿಕಡಿಮೆ ತೂಕವಿರುವವರು ಎನ್ನುತ್ತಾರೆ. 15ರ ಸಮೀಪದ BMIಅನ್ನು ಸಾಮಾನ್ಯವಾಗಿ ಹೊಟ್ಟೆಗಿಲ್ಲದ ಸ್ಥಿತಿ ಸೂಚಿಸಲು ಬಳಸಲಾಗುತ್ತದೆ. ಇದರಿಂದ ಅನೇಕ ಆರೋಗ್ಯ ಸಂಬಂಧಿತ ಅಪಾಯಗಳು ಕಾಣಿಸಿಕೊಳ್ಳಬಹುದು. 17.5ಕ್ಕಿಂತ ಕಡಿಮೆ BMI ಹೊಂದಿರುವುದು ಆಹಾರಮಾಂದ್ಯದ ಮೂಲಕ ರೋಗ ನಿರ್ಣಯ ಮಾಡುವ ಒಂದು ಸಾಧಾರಣ ಮಾನದಂಡವಾಗಿದೆ.

ವಯಸ್ಸಿಗನುಗುಣವಾಗಿ BMI

2ರಿಂದ 20 ವರ್ಷದ ಗಂಡುಮಕ್ಕಳ ವಯಸ್ಸಿನ ಶೇಕಡಕಗಳ BMI.
2ರಿಂದ 20 ವರ್ಷದ ಹೆಣ್ಣುಮಕ್ಕಳ ವಯಸ್ಸಿನ ಶೇಕಡಕಗಳ BMI.

BMIಅನ್ನು ಮಕ್ಕಳಲ್ಲಿ ಭಿನ್ನರೀತಿಯಲ್ಲಿ ಬಳಸಲಾಗುತ್ತದೆ. ಇದನ್ನು ಮೊದಲು ವಯಸ್ಕರಲ್ಲಿ ಮಾಡುವಂತೆಯೇ ಲೆಕ್ಕ ಮಾಡಿ ನಂತರ ಅದೇ ವಯಸ್ಸಿನ ಇತರ ಮಕ್ಕಳ ಮಾದರಿ ಮೌಲ್ಯಗಳೊಂದಿಗೆ ಹೋಲಿಸಲಾಗುತ್ತದೆ. ಕಡಿಮೆ-ತೂಕ ಮತ್ತು ಹೆಚ್ಚು-ತೂಕಕ್ಕೆ ಮಿತಿಗಳನ್ನು ಹೊಂದಿಸುವ ಬದಲು BMI ಶೇಕಡವು ಒಂದೇ ರೀತಿಯ ಲಿಂಗ ಮತ್ತು ವಯಸ್ಸಿನ ಮಕ್ಕಳೊಂದಿಗೆ ಹೋಲಿಕೆ ಮಾಡುತ್ತದೆ.[] ಶೇಕಡ 5ಕ್ಕಿಂತ ಕಡಿಮೆ ಇರುವ BMIಅನ್ನು ಕಡಿಮೆ-ತೂಕ ಎಂದೂ, 95ನೇ ಶೇಕಡಕಕ್ಕಿಂತ ಹೆಚ್ಚಿನದನ್ನು ಬೊಜ್ಜು ಮೈ ಎಂದೂ ಪರಿಗಣಿಸಲಾಗುತ್ತದೆ. 85ನೇ ಶೇಕಡಕದಿಂದ 95ನೇ ಶೇಕಡಕದ ನಡುವೆ BMIಅನ್ನು ಹೊಂದಿರುವ ಮಕ್ಕಳನ್ನು ಹೆಚ್ಚು-ತೂಕವಿರುವವರೆಂದು ತಿಳಿಯಲಾಗುತ್ತದೆ.

ಸುಮಾರು 12ರಿಂದ 16 ವರ್ಷ ವಯಸ್ಸಿನ ಹೆಣ್ಣುಮಕ್ಕಳು ಅದೇ ವಯಸ್ಸಿನ ಗಂಡುಮಕ್ಕಳಿಗಿಂತ ಸರಾಸರಿ 1.0 ಕೆಜಿ/ಮೀ2ನಷ್ಟು ಹೆಚ್ಚು BMI ಹೊಂದಿರುತ್ತಾರೆ ಎಂದು ಬ್ರಿಟನ್‌ನಲ್ಲಿನ ಇತ್ತೀಚಿನ ಅಧ್ಯಯನಗಳು ಸೂಚಿಸಿವೆ.[]

ಅಂತಾರಾಷ್ಟ್ರೀಯ ವ್ಯತ್ಯಾಸಗಳು

ಒಂದೇ ನೇರದ ಪರಿಮಾಣದಲ್ಲಿ ಸೂಚಿಸಿದ ಈ ವ್ಯತ್ಯಾಸಗಳು ಕಾಲದಿಂದ ಕಾಲಕ್ಕೆ ಮತ್ತು ರಾಷ್ಟ್ರದಿಂದ ರಾಷ್ಟ್ರಕ್ಕೆ ಬದಲಾಗುತ್ತಿರುತ್ತವೆ. ಅಲ್ಲದೇ ಪ್ರಪಂಚದ ಅನುಲಂಬವಾಗಿ ನಡೆಸುವ ಸಮೀಕ್ಷೆಗಳನ್ನು ಸಮಸ್ಯಾತ್ಮಕವಾಗಿ ಮಾಡುತ್ತವೆ. 1998ರಲ್ಲಿ U.S. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸಾಮಾನ್ಯ/ಹೆಚ್ಚು-ತೂಕ-ತಡೆಯುವ ಪ್ರಮಾಣವನ್ನು BMI 27.8ರಿಂದ BMI 25ಕ್ಕೆ ಕಡಿಮೆ ಮಾಡುವ ಮ‌ೂಲಕ U.S.ನ ಅರ್ಥನಿರೂಪಣೆಗಳನ್ನು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶನ ಸೂತ್ರಗಳೊಂದಿಗೆ ಸೇರಿಸಿದೆ. ಇದು ಹಿಂದೆ "ಆರೋಗ್ಯವಂತ"ರೆಂದು ಇದ್ದ ಸರಿಸುಮಾರು 25 ದಶಲಕ್ಷ ಅಮೇರಿಕಾದವರನ್ನು "ಹೆಚ್ಚು-ತೂಕ" ಹೊಂದಿರುವವರೆಂದು ಮರುಹೆಸರಿಸುವಂತೆ ಮಾಡಿತು.[] ಇದು ಆಗ್ನೇಯ ಏಷ್ಯಾದವರ ದೇಹ ರೀತಿಗೆ ಸಾಮಾನ್ಯ/ಹೆಚ್ಚು-ತೂಕ ಮಿತಿಯನ್ನು BMI 23ರ ಮೌಲ್ಯಕ್ಕೆ ಕಡಿಮೆ ಮಾಡುವಂತೆಯ‌ೂ ಸೂಚಿಸುತ್ತದೆ. ವಿವಿಧ ದೇಹ ಪ್ರಕಾರಗಳ ವೈದ್ಯಕೀಯ ಅಧ್ಯಯನಗಳಿಂದ ಇನ್ನಷ್ಟು ಪರಿಶೋಧನೆಗಳು ಬೆಳಕಿಗೆ ಬರಬಹುದೆಂಬ ನಿರೀಕ್ಷಿಸುತ್ತದೆ.

ಸಿಂಗಾಪುರದಲ್ಲಿ BMI ತಡೆಯ ಅಳತೆಗಳನ್ನು 2005ರಲ್ಲಿ, ತೂಕದ ಬದಲಿಗೆ ಆರೋಗ್ಯ ಅಪಾಯಗಳಿಗೆ ಮಹತ್ವ ಕೊಟ್ಟು ಪುನಃಪರಿಶೀಲಿಸಲಾಯಿತು. 18.5ರಿಂದ 22.9ರ ನಡುವೆ BMI ಇರುವ ವಯಸ್ಕರಲ್ಲಿ ಹೃದಯ ಕಾಯಿಲೆ ಮತ್ತು ಮಧುಮೇಹದಂತಹ ಇತರ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಂಭವ ಕಡಿಮೆ ಇರುತ್ತದೆ. 23ರಿಂದ 27.4ರ ನಡುವೆ BMI ಇರುವವರಲ್ಲಿ ಅಪಾಯಗಳುಂಟಾಗುವ ಸಂಭವ ಮಧ್ಯಮ ಪ್ರಮಾಣದಲ್ಲಿರುತ್ತದೆ. ಅಲ್ಲದೇ 27.5 ಮತ್ತು ಅದಕ್ಕಿಂತ ಹೆಚ್ಚಿನ BMI ಇರುವವರಲ್ಲಿ ಹೃದಯ ಸಂಬಂಧಿ ಕಾಯಿಲೆ ಮತ್ತು ಇತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಂಭವ ಜಾಸ್ತಿ ಇರುತ್ತದೆ.[೧೦]

ವಿಭಾಗ BMI ವ್ಯಾಪ್ತಿ – ಕೆಜಿ/ಮೀ2
ಬಡಕಲು ಸ್ಥಿತಿ 14.9ಕ್ಕಿಂತ ಕಡಿಮೆ
ಕಡಿಮೆ-ತೂಕ 15ರಿಂದ 18.4ರವರೆಗೆ
ಸಾಮಾನ್ಯ ಸ್ಥಿತಿ 18.5ರಿಂದ 22.9ರವರೆಗೆ
ಹೆಚ್ಚು-ತೂಕ 23ರಿಂದ 27.5ರವರೆಗೆ
ಬೊಜ್ಜು 27.6ರಿಂದ 40ರವರೆಗೆ
ರೋಗಗ್ರಸ್ತವಾಗಿ ಬೊಜ್ಜು 40ಕ್ಕಿಂತ ಹೆಚ್ಚು

ಅಳವಡಿಕೆಗಳು

ಸಂಖ್ಯಾಶಾಸ್ತ್ರೀಯ ಸಾಧನ

ಶಾರೀರಿಕ ದ್ರವ್ಯರಾಶಿ ಸೂಚಿಯನ್ನು ಹೆಚ್ಚಾಗಿ ಸಾಮಾನ್ಯ ದ್ರವ್ಯರಾಶಿಗೆ ಸಂಬಂಧ ಹೊಂದಿರುವ ಗುಂಪುಗಳ ನಡುವಿನ ಪರಸ್ಪರ ಸಂಬಂಧದ ಸಾಧನವಾಗಿ ಬಳಸಲಾಗುತ್ತದೆ. ಇದು ಸ್ಥೂಲತೆಯನ್ನು ಅಂದಾಜು ಮಾಡುವ ಅಸ್ಪಷ್ಟ ಬಗೆಯಾಗಿ ಕಾರ್ಯನಿರ್ವಹಿಸುತ್ತದೆ. ಶಾರೀರಿಕ ದ್ರವ್ಯರಾಶಿ ಸೂಚಿಯ ಎರಡು ರೀತಿಯ ಉಪಯೋಗಗಳೆಂದರೆ - ಇದನ್ನು ಸಾಮಾನ್ಯ ಗಣನೆಯಲ್ಲಿ ಸುಲಭವಾಗಿ ಬಳಸಬಹುದು. ಅದರಿಂದ ಪಡೆದ ಮಾಹಿತಿಯು ಎಷ್ಟು ನಿಖರವಾದುದು ಮತ್ತು ಯುಕ್ತವಾದುದು ಎಂಬುದನ್ನು ಮಿತಿಗೊಳಿಸುತ್ತದೆ. ಸಾಮಾನ್ಯವಾಗಿ ಸೂಚಿಯಲ್ಲಿ ತಪ್ಪುಗಳು ಅತಿಸಣ್ಣ ಪ್ರಮಾಣದಲ್ಲಿರುವುದರಿಂದ, ಅದು ಕುಳಿತೇ ಇರುವ ಅಥವಾ ಹೆಚ್ಚು-ತೂಕ ಹೊಂದಿರುವವರ ರೀತಿಯ ಬಗ್ಗೆ ಕಂಡುಹಿಡಿಯಲು ಹೆಚ್ಚು ಸೂಕ್ತವಾದುದು.[೧೧]

ಈ ಸರ್ವೆಸಾಮಾನ್ಯ ಪರಸ್ಪರ ಸಂಬಂಧವು ನಿರ್ದಿಷ್ಟವಾಗಿ, ಸ್ಥೂಲಕಾಯ ಅಥವಾ ಇತರ ಅನೇಕ ಸ್ಥಿತಿಗಳಿಗೆ ಸಂಬಂಧಿಸಿದ ಒಮ್ಮತ ಮಾಹಿತಿ ಪಡೆಯಲು ಉಪಯುಕ್ತವಾಗಿದೆ. ಏಕೆಂದರೆ ಪರಿಹಾರವೊಂದನ್ನು ಗೊತ್ತುಪಡಿಸಲು ಸಾಧ್ಯವಾಗುವ ಭಾಗಶಃ-ನಿಖರ ನಿರೂಪಣೆ ಅಥವಾ ಲೆಕ್ಕ ಮಾಡಬಹುದಾದ ಗುಂಪಿಗಾಗಿ RDAಅನ್ನು ರಚಿಸಲು ಇದನ್ನು ಬಳಸಬಹುದು. ಮಕ್ಕಳು ಹೆಚ್ಚಾಗಿ ಕಾರ್ಯಚಟುವಟಿಕೆಯಿಂದ ಇರುವುದರಿಂದ ಅವರ ಬೆಳವಣಿಗೆಗೆ ಇದು ಹೆಚ್ಚು ತಕ್ಕುದಾಗಿದೆ.[೧೨]

ಮಕ್ಕಳ ಬೆಳವಣಿಗೆಯನ್ನು ಸಾಮಾನ್ಯವಾಗಿ BMI-ಅಳತೆ ಮಾಡಿದ ಬೆಳವಣಿಗೆ ಕೋಷ್ಟಕದಲ್ಲಿ ದಾಖಲು ಮಾಡಲಾಗುತ್ತದೆ. ಸ್ಥೂಲಕಾಯತೆಯನ್ನು ಮಗುವಿನ BMI ಮತ್ತು ಕೋಷ್ಟಕದಲ್ಲಿರುವ BMI ನಡುವಿನ ವ್ಯತ್ಯಾಸದಿಂದ ಲೆಕ್ಕಾಚಾರ ಮಾಡಬಹುದು. ಆದರೂ ಈ ವಿಧಾನವು ದೇಹ ರಚನೆಯ ಅಡಚಣೆಗೆ ದುಷ್ಪ್ರಭಾವ ಬೀರುತ್ತದೆ: ಪ್ರಾಥಮಿಕವಾಗಿ ಗುಜ್ಜಾರಿಯಾಗಿ ಬೆಳೆಯುವ ಹೆಚ್ಚಿನ ಮಕ್ಕಳನ್ನು ಅವರ ದೇಹ ರಚನೆ ಹೇಗಿದ್ದರೂ ಬೊಜ್ಜಿನ ಮೈಯನ್ನು ಹೊಂದಿರುವವರೆಂದು ವರ್ಗೀಕರಿಸಬೇಕಾಗುತ್ತದೆ. ವೈದ್ಯಕೀಯ ವೃತ್ತಿಪರರು ಮಗುವಿನ ದೇಹ ರಚನೆಯನ್ನು ಗಣನೆಗೆ ತೆಗೆದುಕೊಂಡು ಡೆನ್ಸಿಟೊಮೆಟ್ರಿಯಂತಹ ಸೂಕ್ತ ತಂತ್ರಜ್ಞಾನ ಬಳಸಬೇಕು. ಈ ತಂತ್ರಜ್ಞಾನಕ್ಕೆ ಉದಾ. DEXA ಅಥವಾ DXA ಎಂದು ಹೇಳುವ ಡ್ಯುಯೆಲ್ ಎನರ್ಜಿ X-ರೇ ಎಬ್ಸೋರ್ಪ್ಟಿಯೊಮೆಟ್ರಿ.

ವೈದ್ಯಕೀಯ ಬಳಕೆ

WHO 1980ರ ಆರಂಭದವರೆಗೆ ಸ್ಥೂಲಕಾಯತೆಯ ಅಂಕಿಅಂಶಗಳನ್ನು ದಾಖಲು ಮಾಡಿಕೊಳ್ಳಲು BMIಅನ್ನು ಪ್ರಮಾಣಕವಾಗಿ ಬಳಸುತ್ತಿತ್ತು. ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ BMIಅನ್ನು, ಆಹಾರಮಾಂದ್ಯ ಮತ್ತು ಅತಿಹಸಿವೆಯಂತಹ ತಿನ್ನುವ ಕಾಯಿಲೆಗಳಿಂದ ಬಳಲುವವರರಲ್ಲಿ ಕಡಿಮೆ-ತೂಕವನ್ನು ಅಳೆಯುವ ಮಾಪನವಾಗಿ ಉಪಯೋಗಿಸಲಾಗುತ್ತದೆ.ಟೆಂಪ್ಲೇಟು:Fact

BMIಅನ್ನು ಶೀಘ್ರ ಮತ್ತು ದುಬಾರಿ ಸಾಧನಗಳಿಲ್ಲದೆಯೇ ಲೆಕ್ಕಾಚಾರ ಮಾಡಬಹುದು. ಆದರೂ BMI ವಿಭಾಗಗಳು ರಚನೆಯ ಗಾತ್ರ ಮತ್ತು ದಷ್ಟಪುಷ್ಟ ಸ್ಥಿತಿಯಂತಹ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.[೧೧] ಈ ವಿಭಾಗಗಳು ಕೊಬ್ಬು, ಮ‌ೂಳೆ, ಮೃದ್ವಸ್ಥಿ, ನೀರಿನ ತೂಕ ಮತ್ತು ಇತರೆಗಳ ಬದಲಾಗುವ ಅನುಪಾತಗಳನ್ನು ಪರಿಗಣಿಸುವುದರಲ್ಲಿಯ‌ೂ ವಿಫಲವಾಗಿವೆ.

ಇದರ ಹೊರತಾಗಿ BMI ವಿಭಾಗಗಳನ್ನು ಕ್ರಮಬದ್ಧವಾಗಿ, ಕ್ರೀಡಾಪಟುಗಳು, ಮಕ್ಕಳು, ಹಿರಿಯರು, ಅಶಕ್ತರಾದವರು ಮತ್ತು ನೈಸರ್ಗಿಕವಾಗಿ ಗುಜ್ಜಾರಿ ಅಥವಾ ಸಣಕಲಾಗಿರುವವರು (ಸಾಧಾರಣ ದೇಹ ರಚನೆಯನ್ನು ಹೊಂದಿರದವರು) ಹಾಗೂ ಹೆಚ್ಚಾಗಿ ಕುಳಿತೇ ಇರುವವರು "ಕಡಿಮೆ-ತೂಕ," "ಹೆಚ್ಚು-ತೂಕ" ಅಥವಾ "ಬೊಜ್ಜು" ಮೈಯನ್ನು ಹೊಂದಿದ್ದಾರೆಯೇ ಎಂಬುದನ್ನು ಅನೇಕ ಪರಿಮಿತಿಗಳೊಂದಿಗೆ ಅಳತೆ ಮಾಡಲು ಯೋಗ್ಯ ಸಾಧನವೆಂದು ಪರಿಗಣಿಸಲಾಗುತ್ತದೆ.

ವಿಶೇಷವಾಗಿ ಕ್ರೀಡಾಪಟುಗಳಲ್ಲಿರುವ ಒಂದು ಪ್ರಮುಖ ತೊಂದರೆ ಎಂದರೆ ಕೊಬ್ಬಿಗಿಂತ ಸ್ನಾಯು ಹೆಚ್ಚು ಸಾಂದ್ರತೆಯಿಂದ ಕೂಡಿರುತ್ತದೆ. ಕೆಲವು ವೃತ್ತಿಪರ ಕ್ರೀಡಾಪಟುಗಳು ಅವರ BMI ಪ್ರಕಾರ "ಹೆಚ್ಚು-ತೂಕ" ಅಥವಾ "ಬೊಜ್ಜನ್ನು" ಹೊಂದಿರುತ್ತಾರೆ – ಅವರನ್ನು "ಹೆಚ್ಚು-ತೂಕ" ಅಥವಾ "ಬೊಜ್ಜು" ಹೊಂದಿರುವವರೆಂದು ಪರಿಗಣಿಸುವ ಸಂಖ್ಯೆಯನ್ನು ಎಣಿಕೆಯ ಕೆಲವು ಮಾರ್ಪಡಿಸಿದ ಆವೃತ್ತಿಯಿಂದ ಮೇಲ್ಮುಖವಾಗಿ ಹೊಂದಿಸಬೇಕು. ಮಕ್ಕಳಲ್ಲಿ ಮತ್ತು ಹಿರಿಯರಲ್ಲಿ ಮ‌ೂಳೆಯ ಸಾಂದ್ರತೆಯಲ್ಲಿರುವ ಹಾಗೂ ಮ‌ೂಳೆ ಮತ್ತು ಒಟ್ಟು ತೂಕದ ಅನುಪಾತದಲ್ಲಿರುವ ವ್ಯತ್ಯಾಸಗಳು ಇವರನ್ನು ಕಡಿಮೆ-ತೂಕ ವನ್ನು ಹೊಂದುವಂತೆ ಮಾಡುವ ಸಂಖ್ಯೆ ನೀಡಬಹುದು. ಹಾಗಾಗಿ ಈ ಸಂಖ್ಯೆಯನ್ನು ಕೆಳಮುಖವಾಗಿ ಸರಿಹೊಂದಿಸಬೇಕು.

ವೈದ್ಯಕೀಯ ಆರ್ಥಿಕ ನೆರವಿನ ಒಪ್ಪಂದ

ಖಾಸಗಿ ಆರೋಗ್ಯ ವಿಮಾ ಯೋಜನೆಗಳ ವೈದ್ಯಕೀಯ ಆರ್ಥಿಕ ನೆರವಿನ ಒಪ್ಪಂದಗಳು ಹೆಚ್ಚಾಗಿರುವ ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ, ಹೆಚ್ಚಿನ ಖಾಸಗಿ ಆರೋಗ್ಯ ವಿಮೆಯನ್ನು ನೀಡುವವರು ವಿಮೆಯ ದರಗಳನ್ನು ಹೆಚ್ಚಿಸಲು ಅಥವಾ ಹೆಚ್ಚಿನ ಅಪಾಯ ಇರುವವರಿಗೆ ವಿಮೆ ನೀಡುವುದನ್ನು ನಿರಾಕರಿಸಲು ನಿರ್ದಿಷ್ಟ ಗರಿಷ್ಠ BMIಅನ್ನು ತಡೆಸಾಧನವಾಗಿ ಬಳಸುತ್ತಾರೆ. ಈ ಮ‌ೂಲಕ ಇತರ ಎಲ್ಲಾ ಚಂದಾದಾರರಿಗೆ 'ಸಾಮಾನ್ಯ' BMI ವ್ಯಾಪ್ತಿಯಲ್ಲಿ ನೇರವಾಗಿ ವಿಮಾರಕ್ಷಣೆಯ ಬೆಲೆ ಕಡಿಮೆ ಮಾಡುತ್ತದೆ. ಆರೋಗ್ಯ ವಿಮೆ ನೀಡುವ ಪ್ರತಿಯೊಬ್ಬನಿಗೂ ತಡೆಸಾಧನವನ್ನು ಬೇರೆ ಬೇರೆ ರೀತಿಯಲ್ಲಿ ಕಂಡುಹಿಡಿಯಲಾಗುತ್ತದೆ. ಭಿನ್ನ ನೀಡುಗರು ಹೆಚ್ಚಾಗಿ ವಿವಿಧ ಶ್ರೇಣಿಯ ಸ್ವೀಕಾರಾರ್ಹತೆಯನ್ನು ಹೊಂದಿರುತ್ತಾರೆ. ಹೆಚ್ಚಿನವರು ಒಂದು ನಿರ್ದಿಷ್ಟ ಸ್ವೀಕಾರಾರ್ಹ ಮಿತಿಗಿಂತ ಮೇಲೆ, ಬೆಲೆಯನ್ನು ಲೆಕ್ಕಿಸದೆ ಅಂಗೀಕಾರಾರ್ಹತೆಯನ್ನು ನಿರಾಕರಿಸಿದ ಗರಿಷ್ಠ BMI ಮಿತಿಯವರೆಗೆ ಪ್ರತಿ ಅನಿಯಂತ್ರಿತ ಶ್ರೇಣಿಯ BMI ಸೂಚ್ಯಾಂಕಗಳಿಗೆ ದಂಡತೆರಿಗೆಯನ್ನು ತುಂಬುತ್ತಾರೆ. ಇದರಲ್ಲಿ ಚಂದಾದಾರರು ಸಾಮಾನ್ಯವಾಗಿ ತಿಂಗಳ ವಿಮೆಯ ಕಂತಿನ ಶೇಕಡಾವಾರು ಲೆಕ್ಕದಲ್ಲಿ ಹೆಚ್ಚುವರಿ ದಂಡ ಪಾವತಿಸುತ್ತಾರೆ. ಇದು ಗುಂಪು ವಿಮೆ ಪಾಲಿಸಿಗಳಿಗೆ ತದ್ವಿರುದ್ಧವಾಗಿದೆ. ಇದರಲ್ಲಿ ವೈದ್ಯಕೀಯ ಆರ್ಥಿಕ ನೆರವಿನ ಒಪ್ಪಂದದ ಅವಶ್ಯಕತೆ ಇರುವುದಿಲ್ಲ. ಅಲ್ಲದೇ BMIಅನ್ನು ಅಥವಾ ವೈಯಕ್ತಿಕ ಆರೋಗ್ಯ ಯೋಜನೆಗೆ ಅಸ್ವೀಕಾರ ಮಾಡುವ ಇತರ ಅಪಾಯಕಾರಿ ಅಂಶಗಳನ್ನು ಲೆಕ್ಕಿಸದೆ ವಿಮಾ ಅಂಗೀಕಾರ್ಹತೆಯು ವಿಮೆ ಮಾಡಿದ ಗುಂಪಿನ ಒಬ್ಬ ಸದಸ್ಯನಾಗಲು ಬಯಸುವವನಿಗೆ ಖಾತರಿಯಾಗುತ್ತದೆಟೆಂಪ್ಲೇಟು:Fact.

ಪರಿಮಿತಿಗಳು ಮತ್ತು ನ್ಯೂನತೆಗಳು

BMIಯಲ್ಲಿನ ದೋಷವು ಗಮನಾರ್ಹವಾದುದು. ಅದು ಹೆಚ್ಚು ವ್ಯಾಪಕ ಹಾಗೂ ಆರೋಗ್ಯದ ಪರಿಮಾಣ ನಿರ್ಧರಿಸುವುದರಲ್ಲಿ BMI ಉಪಯೋಗಕಾರಿಯಲ್ಲ ಎಂದು ಕೆಲವರು ವಾದಿಸುತ್ತಾರೆ.[೧೩][೧೪] ಚಿಕಾಗೊ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಎರಿಕ್ ಆಲಿವರ್, BMIಯು ಜನರ ತೂಕದ ಯೋಗ್ಯವಾದ ಆದರೆ ನಿಖರವಲ್ಲದ ಅಳತೆ, ಅದಕ್ಕಾಗಿ ಅದನ್ನು ಪುನಃಪರಿಶೀಲಿಸಬೇಕಾಗಿದೆ ಎಂದು ಹೇಳಿದ್ದಾನೆ.[೧೫]

ವೈದ್ಯಕೀಯ ತಂಡವು BMIಯ ಕೆಲವು ನ್ಯೂನತೆಗಳನ್ನು ಗುರುತಿಸಿದೆ.[೧೬] BMIಯು ತೂಕ ಮತ್ತು ಎತ್ತರವನ್ನು ಮಾತ್ರ ಅವಲಂಬಿಸಿರುವುದರಿಂದ, ಇದು ಸ್ನಾಯು ಮತ್ತು ಮ‌ೂಳೆಯ ದ್ರವ್ಯರಾಶಿಯ ಹರಡಿಕೆಯ ಬಗ್ಗೆ ಊಹೆ ಮಾಡುತ್ತದೆ. ಅದರ ಮ‌ೂಲಕ ಹೆಚ್ಚು ಸಣಕಲು ದೇಹ ಹೊಂದಿರುವವರಲ್ಲಿ (ಉದಾ. ಕ್ರೀಡಾಪಟುಗಳು) ಸ್ಥೂಲತೆಯ ಬಗ್ಗೆ (ಗರಿಷ್ಠ)ಅಂದಾಜು ಮಾಡುತ್ತದೆ. ಅಲ್ಲದೇ ಕಡಿಮೆ ಸಣಕಲು ಶರೀರ ಸಾಂದ್ರತೆಯಿರುವವರಲ್ಲಿ ಕೆಳಮಟ್ಟದ ಅಂದಾಜು ಮಾಡುತ್ತದೆ.

ಅಮೇರಿಕಾದಲ್ಲಿನ 2005ರ ಅಧ್ಯಯನವೊಂದು, BMIಯ ಅರ್ಥನಿರೂಪಣೆಯ ಪ್ರಕಾರ ಹೆಚ್ಚು-ತೂಕ ಇರುವವರು ನಿಜವಾಗಿ ಸಾಮಾನ್ಯ ತೂಕವಿರುವವರಿಗಿಂತ ಕಡಿಮೆ ಸಾವಿನ ಸಂಭವನೀಯತೆ ಹೊಂದಿರುತ್ತಾರೆ ಎಂದು ತೋರಿಸಿಕೊಟ್ಟಿದೆ.[೧೭]

ಸುಮಾರು 250,000 ಮಂದಿಯನ್ನು ಒಳಗೊಂಡ 40 ಅಧ್ಯಯನಗಳ ವಿಶ್ಲೇಷಣೆಯೊಂದರಲ್ಲಿ, ಸಾಮಾನ್ಯ BMI ಹೊಂದಿರುವ ಪರಿಧಮನಿ ಕಾಯಿಲೆ ಇರುವ ರೋಗಿಗಳು "ಹೆಚ್ಚು-ತೂಕ" ಶ್ರೇಣಿಯಲ್ಲಿ (BMI 25–29.9) BMI ಹೊಂದಿರುವವರಿಗಿಂತ ಹೃದಯ ರಕ್ತನಾಳಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಹೆಚ್ಚಿನ ಸಾವಿನ ಅಪಾಯ ಹೊಂದಿರುತ್ತಾರೆ ಎಂಬುದು ಕಂಡುಬಂದಿದೆ.[೧೮] BMIಯ ಮಧ್ಯಮ ಪ್ರಮಾಣದಲ್ಲಿ (25–29.9), BMI ದೇಹದ ಕೊಬ್ಬಿನ ಪ್ರಮಾಣ ಮತ್ತು ಸಣಕಲು ದ್ರವ್ಯರಾಶಿಯ ನಡುವೆ ವ್ಯತ್ಯಾಸ ತೋರಿಸಲು ವಿಫಲವಾಗುತ್ತದೆ. ಈ ಅಧ್ಯಯನವು ಹೀಗೆಂದು ಫಲಿತಾಂಶ ನೀಡಿತು - "ನಿರ್ದಿಷ್ಟವಾಗಿ ಮಧ್ಯಮ ಪ್ರಮಾಣದ BMI ಹೊಂದಿರುವವರಲ್ಲಿ, ಪುರುಷರಲ್ಲಿ ಮತ್ತು ವಯಸ್ಸಾದವರಲ್ಲಿ ಸ್ಥೂಲಕಾಯತೆಯ ರೋಗನಿರ್ಧಾರ ಮಾಡುವಲ್ಲಿನ BMIಯ ನಿಖರತೆ ಸೀಮಿತವಾದುದು. ಈ ಫಲಿತಾಂಶಗಳು ಹೆಚ್ಚು-ತೂಕ/ಸಾಧಾರಣ ಬೊಜ್ಜು ಹೊಂದಿರುವವರು ಅನಿರೀಕ್ಷಿತ ರೀತಿಯಲ್ಲಿ ಆರೋಗ್ಯಕರವಾಗಿ ಜೀವಿಸುವ ಬಗ್ಗೆ ವಿವರಿಸಲು ಸಹಾಯ ಮಾಡಬಹುದು."[೧೯] ಕಡಿಮೆ-ತೂಕ ಹೊಂದಿರುವವರಲ್ಲಿ (BMI <20) ಅಥವಾ ತೀವ್ರ ಪ್ರಮಾಣದ ಬೊಜ್ಜು ಇರುವವರಲ್ಲಿ (BMI ≥35) ಹೃದಯ ರಕ್ತನಾಳ ಸಂಬಂಧಿ ಕಾಯಿಲೆಯಿಂದ ಉಂಟಾಗುವ ಸಾವಿನ ಸಂಭವ ಹೆಚ್ಚಾಗಿರುತ್ತದೆ.

ಕ್ರೀಡಾಪಟುಗಳ ದೇಹ ರಚನೆಯನ್ನು ಚರ್ಮದ ಪದರಗಳ ಅಳತೆಯಿಂದ ಅಥವಾ ದೇಹದಲ್ಲಿರುವ ನೀರಿನಾಂಶವನ್ನು ಅಳೆಯುವ ಮ‌ೂಲಕ ಕಂಡುಹಿಡಿದ ಶರೀರದ ಕೊಬ್ಬಿನ ಅಳತೆಗಳನ್ನು ಬಳಸಿಕೊಂಡು ಹೆಚ್ಚು ಉತ್ತಮ ಫಲಿತಾಂಶ ಪಡೆಯಬಹುದು. ಅದು ಮಾನವ ಶಕ್ತಿ ಬಳಕೆ ಮೂಲಕ ಮಾಡುವ ಅಳತೆಯ ಪರಿಮಿತಿಗಳು ಸ್ಥೂಲಕಾಯತೆಯನ್ನು ಅಳೆಯುವ ಶಾರೀರಿಕ ಗಾತ್ರ ಸೂಚಿಯಂತಹ ಹೊಸ, ಪರ್ಯಾಯ ವಿಧಾನಗಳ ಬೆಳವಣಿಗೆಗೆ ದಾರಿಮಾಡಿಕೊಟ್ಟವು. ಸ್ನಾಯುವಿನ ದ್ರವ್ಯರಾಶಿ(ಬಲ) ಹೆಚ್ಚಿಸಲು ತೀವ್ರ ತೂಕದ ಕುರಿತ ಪ್ರಯೋಗಕ್ಕೆ ಒಳಗಾದ ಅಮೇರಿಕಾದ ಫುಟ್ಬಾಲ್ ಮುಂಚೂಣಿ ಆಟಗಾರರ ಇತ್ತೀಚಿನ ಅಧ್ಯಯನಗಳು, ಸಾಮಾನ್ಯವಾಗಿ ಹೇಳುವ ಬೊಜ್ಜು, ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಮೊದಲಾದ ತೊಂದರೆಗಳಿಂದ ಅವರು ನರಳುತ್ತಿದ್ದಾರೆಂಬುದನ್ನು ತೋರಿಸಿಕೊಟ್ಟಿದೆ.[೨೦][೨೧]

ಇದರ ಮತ್ತೊಂದು ಪರಿಮಿತಿಯು ವಯಸ್ಸಾದಂತೆ ಎತ್ತರ ಕಡಿಮೆಯಾಗುವುದಕ್ಕೆ ಸಂಬಂಧಿಸಿದೆ. ಈ ಪರಿಸ್ಥಿತಿಯಲ್ಲಿ BMIಯು, ಯಾವುದೇ ಸದೃಶವಾದ ತೂಕದ ಏರುವಿಕೆಯಿಲ್ಲದೆಯೇ ಹೆಚ್ಚಾಗುತ್ತದೆ.

ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿನ ಸಾಂಸ್ಥಿಕ ಜೀವನಕ್ಕೆ ಒಳಪಡದ ನಾಗರಿಕರ ಮಾಹಿತಿ ಬಳಸಿಕೊಂಡು ರೊಮೆರೊ-ಕೊರಾಲ್ ಮತ್ತು ಇತರರು ಮಾಡಿದ ಅಧ್ಯಯನವೊಂದು, BMI-ನಿರೂಪಿತ ಸ್ಥೂಲಕಾಯತೆಯು 19.1%ನಷ್ಟು ಪುರುಷರಲ್ಲಿ ಮತ್ತು 24.7%ನಷ್ಟು ಮಹಿಳೆಯರಲ್ಲಿ ಕಂಡುಬಂದಿದೆ. ಆದರೆ ದೇಹದ ಕೊಬ್ಬಿನ ಶೇಕಡಾವಾರು ಪ್ರಮಾಣದಿಂದ ಅಳತೆಮಾಡಿದ ಸ್ಥೂಲಕಾಯತೆಯು 43.9%ನಷ್ಟು ಪುರುಷರಲ್ಲಿ ಮತ್ತು 52.3%ನಷ್ಟು ಮಹಿಳೆಯರಲ್ಲಿ ಕಂಡುಬಂದಿದೆ ಎಂದು ಗುರುತಿಸಿದೆ.[೨೨]

BMI ಸೂತ್ರದ ಛೇದದಲ್ಲಿರುವ 2ರ ಘಾತವು ಅನಿರ್ಬಂಧಿತವಾದುದು. ಇದು ಒಬ್ಬರ ಅತ್ಯುತ್ತಮ ತೂಕಕ್ಕೆ ಸಂಬಂಧವಿರುವ ತೂಕದ ವ್ಯತ್ಯಾಸಗಳ ಬದಲಿಗೆ ಗಾತ್ರದ ವ್ಯತ್ಯಾಸದೊಂದಿಗೆ ಮಾತ್ರ ಸಂಬಂಧ ಹೊಂದಿರುವ BMIಯಲ್ಲಿನ ಅಸ್ಥಿರತೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ. ಉದ್ದವಿರುವವರು ಕುಳ್ಳಗಿರುವವರ ಬರಿಯ ಬೆಳೆದ ರೂಪಾಂತರವಾಗಿದ್ದರೆ, ಅವರಲ್ಲಿ ತೂಕವು ಎತ್ತರದ ಘನದ ಪ್ರಮಾಣದಲ್ಲಿ (ಮ‌ೂರಪಟ್ಟು) ಹೆಚ್ಚಾಗುವುದರಿಂದ ಸೂಕ್ತ ಘಾತ 3 ಆಗಿರುತ್ತದೆ. ಸರಾಸರಿಯಲ್ಲಿ ಉದ್ದವಿರುವವರು ಅವರ ಎತ್ತರಕ್ಕೆ ತುಲನಾತ್ಮಕವಾಗಿ ಗಿಡ್ಡಯಿರುವವರಿಗಿಂತ ತೆಳ್ಳನೆಯ ಮೈಕಟ್ಟು ಹೊಂದಿರುತ್ತಾರೆ. ಶರೀರದ ವ್ಯತ್ಯಾಸಕ್ಕೆ ಸರಿಹೊಂದುವ ಘಾತವು 2 ಮತ್ತು 3ರ ಮಧ್ಯೆ ಇರುತ್ತದೆ. USAಯಲ್ಲಿ ಸಂಗ್ರಹಿಸಿದ ಮಾಹಿತಿಯನ್ನಾಧರಿಸಿದ ವಿಶ್ಲೇಷಣೆಯೊಂದು, 2.6ರ ಘಾತವು 2ರಿಂದ 19 ವರ್ಷ ವಯಸ್ಸಿನ ಮಕ್ಕಳಲ್ಲಿ ಅತ್ಯುತ್ತಮ ದೇಹರಚನೆ ನೀಡುತ್ತದೆ ಎಂದು ಸೂಚಿಸಿದೆ.[೨೩] ಇದರ ಬದಲಿಗೆ ರೂಢಿ ಮತ್ತು ಸರಳತೆಗಾಗಿ 2ರ ಘಾತವನ್ನು ಬಳಸಲಾಗುತ್ತದೆ.

BMIಯ ಸಂಭಾವ್ಯ ಪರ್ಯಾಯವಾಗಿ, ಕೊಬ್ಬು-ರಹಿತ ದ್ರವ್ಯರಾಶಿ ಸೂಚಿ (FFMI) ಮತ್ತು ಕೊಬ್ಬು ದ್ರವ್ಯರಾಶಿ ಸೂಚಿ (FMI) ಅಂಶಗಳು 1990ರ ಆರಂಭದಲ್ಲಿ ಪರಿಚಯಿಸಲ್ಪಟ್ಟವು.[೨೪]

ಇವನ್ನೂ ಗಮನಿಸಿ

ಹೆಚ್ಚಿನ ಓದಿಗಾಗಿ

ಆಕರಗಳು

ಟೆಂಪ್ಲೇಟು:Reflist

ಹೊರಗಿನ ಕೊಂಡಿಗಳು

ಟೆಂಪ್ಲೇಟು:Wiktionary