ಬೆಸ್ಸೆಲನ ಉತ್ಪನ್ನಗಳು

testwikiದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಬೆಸ್ಸೆಲನ ಉತ್ಪನ್ನಗಳು ಎಂದರೆ ಗಣಿತದಲ್ಲಿ ಬರುವ Jn, J-n ಎಂಬ ಉತ್ಪನ್ನಗಳು. exp[12x(t1t)] ಎಂಬ ಉತ್ಪನ್ನವನ್ನು x ನ ಎಲ್ಲ ಬೆಲೆಗಳಿಗೂ t ಯ ಧನ ಮತ್ತು ಋಣ ಘಾತಗಳ ಶ್ರೇಣಿಯಾಗಿ ವಿಸ್ತರಿಸಬಹುದು. n ಧನ ಪೂರ್ಣಾಂಕವಾದರೆ ಈ ಶ್ರೇಣಿಯಲ್ಲಿ tnಗುಣಕವನ್ನು Jn(x) ಎಂದು ವ್ಯಾಖ್ಯಿಸುತ್ತೇವೆ. (-1) t-n ಗುಣಕವೂ Jn(x) ಆಗಿರುತ್ತದೆ. ಆದ್ದರಿಂದ

exp[12x(t1t)]=J0(x)+tJ1(x)++tnJn(x)+

                                  t1J1(x)+t2J2(x)++(1)ntnJn(x)+

n ಧನ ಪೂರ್ಣಾಂಕ (positive integer) ಅಥವಾ ಸೊನ್ನೆಯಾದರೆ

Jn(x)=xn2nn!{1x222.1(n+1)+x424.1.2.(n+1)(n+2)}

n ಋಣ ಪೂರ್ಣಾಂಕವಾಗಿ n=1-m ಆದರೆ

Jn(x)=r=m(1)r(12x)2rsr!(rm)!

          =s=0(1)m+s(12x)m+2s(m+s)!s!...............(2)

ಇದರಿಂದಲೂ J-m(x) = (-1)mJm(x) ಎಂದು ಸ್ಪಷ್ಟವಾಗುತ್ತದೆ.[]

Jn ಮತ್ತು J-m(x) ನ್ನು ವ್ಯಾಖ್ಯಿಸುವ ಶ್ರೇಣಿಗಳು x ನ ಎಲ್ಲ ಬೆಲೆಗಳಿಗೂ ಅಭಿಸರಣ (ಕನ್ವರ್ಜೆಂಟ್) ಆಗಿರುತ್ತವೆ. Jn ಮತ್ತು J-m ಗಳನ್ನು ಬೆಸ್ಸೆಲನ ಗುಣಕಗಳು (Bessel multipliers) ಎಂದು ಕರೆಯುವುದುಂಟು. ಇಲ್ಲಿ n, m ಧನ ಪೂರ್ಣಾಂಕಗಳು. ಆದರೆ ಬೇರೊಂದು ಪ್ರತೀಕ ಉಪಯೋಗಿಸುತ್ತ

Jn(x)=r=0(1)rπ(n+r)π(r)(x2)n+2s.............(3)

Jn(x)=r=0(1)rπ(n+r)π(r)(x2)n+2x..............(4)

ಎಂದೂ ಬರೆಯಬಹುದು. ಇಲ್ಲಿ π(n) ಎಂಬುದು ಗೌಸನ ಉತ್ಪನ್ನ. ಆಯಿಲರನ ಗ್ಯಾಮಾ ಉತ್ಪನ್ನಗಳಲ್ಲಿ π(x) = Γ(x+1). ಈ ರೂಪದಲ್ಲಿ, ಮೇಲಣ ಶ್ರೇಣಿಗಳನ್ನು Jn ಮತ್ತು J-n ಸಾರ್ವತ್ರಿಕ ರೂಪಗಳೆಂದು ವ್ಯಾಖ್ಯಿಸಬಹುದು. ಇಲ್ಲಿ n ಯಾವುದೇ ಸಂಖ್ಯೆ ಆಗಿರಬಹುದು, ಪೂರ್ಣಾಂಕವೇ ಆಗಿರಬೇಕಾಗಿಲ್ಲ. ಹೀಗೆ ವ್ಯಾಖ್ಯಿಸಿದ Jn ಮತ್ತು J-n ಗಳೇ ಬೆಸ್ಸೆಲನ ಉತ್ಪನ್ನಗಳು.

ಈ ಉತ್ಪನ್ನಗಳನ್ನು ಸಂಪೂರ್ಣವಾಗಿ ಬೇರೊಂದು ವಿಧಾನದಿಂದ ಪರಿಚಯ ಮಾಡಿಕೊಡಬಹುದು:

d2ydx2+1xdydx+(1n2x2)y=0................(5)

ಎಂಬುದು ದ್ವಿತೀಯ ವರ್ಗದ (second order) ಒಂದು ಸರಳ ಅವಕಲ ಸಮೀಕರಣ. ಇದಕ್ಕೆ ಬೆಸ್ಸೆಲನ ಸಮೀಕರಣ (Bessel's equation) ಎಂದು ಹೆಸರು. ಸರಳ ಅವಕಲ ಸಮೀಕರಣಗಳನ್ನು ಬಿಡಿಸುವ ವಿಧಾನ ಅನುಸರಿಸಿ, ಬೆಸ್ಸೆಲನ ಸಮೀಕರಣ ಸಂಪೂರ್ಣ ಪರಿಹಾರ, n ಪೂರ್ಣಾಂಕವಲ್ಲದಾಗ

y = AJn(x) + BJ-n(x)..............(6)

ಆಗಿರುತ್ತದೆ. ಇಲ್ಲಿ A, B ಯಾವುವೇ ಸ್ಥಿರಾಂಕಗಳು. ಈ ಪ್ರಕಾರ Jn ಮತ್ತು J-n ಗಳ ಬೆಲೆಗಳು ಮೇಲೆ ಕೊಟ್ಟಿರುವ (3), (4) ಅನಂತರ ಶ್ರೇಣಿಗಳೇ ಆಗಿರುತ್ತವೆ. n ಧನ ಪೂರ್ಣಾಂಕವಾದರೆ Jn ನ ಬೆಲೆ (1) ರಲ್ಲಿರುವ ಶ್ರೇಣಿ. ಆದರೆ n ಧನ ಪೂರ್ಣಾಂಕವಾದಾಗ J-n ಶ್ರೇಣಿ Jn ನ ಒಂದು ಗುಣಕ. ಇದರಂತೆಯೇ n ಋಣ ಪೂರ್ಣಾಂಕವಾದಾಗ Jn ಶ್ರೇಣಿ J-n ನ ಒಂದು ಗುಣಕ. n=0 ಆದಾಗ ಎರಡು ಶ್ರೇಣಿಗಳೂ ಒಂದಾಗುತ್ತವೆ. ಆದ್ದರಿಂದ n ಪೂರ್ಣಾಂಕ ಅಥವಾ ಸೊನ್ನೆಯಾದಾಗ ಬೆಸ್ಸೆಲನ ಸಮೀಕರಣಕ್ಕೆ (6) ಒಂದು ಪರಿಹಾರ ಮಾತ್ರ ಕೊಡುತ್ತದೆ. ಬೇರೊಂದು ಪರಿಹಾರವನ್ನು ಬೇರೆ ವಿಧಾನಗಳಿಂದ ಪಡೆಯಬೇಕು.

ಈ ರೀತಿಯಾಗಿ Jn(x) ಎಂಬ ಉತ್ಪನ್ನ n ನ ಎಲ್ಲ ಬೆಲೆಗಳೂ ವ್ಯಾಖ್ಯಿಸಲ್ಪಟ್ಟಿರುವುದಾದರೂ n ಧನ ಪೂಣಾಂಕವಿರುವ Jn ಗೆ ಅತಿಶಯ ಪ್ರಾಮುಖ್ಯ ಉಂಟು. ಗಣಿತದ ಅನೇಕ ಶಾಖೆಗಳಲ್ಲಿ ಇದರ ವ್ಯಾಪಕತ್ವ ಕಂಡುಬರುತ್ತದೆ.

ಮುಖ್ಯ ಗುಣಗಳು

Jn(x) ನ ಕೆಲವು ಮುಖ್ಯ ಗುಣಗಳಿವು. n ಪೂಣಾಂಕವಾಗಿರಬೇಕಾಗಿಲ್ಲ.

  1. J0(x)=1x222+x422.42x622.42.62+
  2. Jn1(x)+Jn+1(x)=2nxJn(x).[] ಇದಕ್ಕೆ Jn ನ ಪುನರಾವರ್ತಕ ಸೂತ್ರ (recurrence formula) ಎಂದು ಹೆಸರು. Jn-1 ಮತ್ತು Jn ನ ಸಹಾಯದಿಂದ ಮುಂದಿನ ಉತ್ಪನ್ನ Jn+1 ನ್ನು ಪಡೆಯಬಹುದು.
  3. Jn(x)=nxJn(x)Jn+1(x)
  4. Jn(x)=12{Jn1(x)Jn+1(x)}
  5. Jn(x)=Jn1(x)nxJn(x)
  6. J12(x)=212x12π12{1x22.3+x42.3.4.5}=(2πx)12sinx
  7. Jk+12(x)=(1)k(2x)k+12π12×dkd(x2)n(sinxx), k= ಧನ ಪೂರ್ಣಾಂಕ.
  8. cosx=J0(x)2J2(x)+2J4(x), sinx=2J1(x)2J3(x)+2J5(x)
  9. n ಧನ ಪೂರ್ಣಾಂಕವಾದಾಗ, Jn(x)=1π0π(cosnθxsinθ)dθ
  10. 0eaxJ0(bx)dx=(a2+b2)12
  11. Jn dJndxJn dJndx=2πxsinnπ

ಅವಿಚ್ಛಿನ್ನ ಅವಕಲನಾಂಕವಿರುವ (continuous differential coefficient) ಯಾವುದೇ ಉತ್ಪನ್ನ f(x) ನ್ನು (0,π) ಅವಧಿಯಲ್ಲಿ, ಬೆಸ್ಸಲನ ಉತ್ಪನ್ನಗಳ ಶ್ರೇಣಿಯಾಗಿ ವಿಸ್ತರಿಸಬಹುದು:

f(x)=a0+a1J0(x)+a2J0(2x)+

ಇಲ್ಲಿ a0=f(0)+1π0πu012πf(usinθ)dθdu

a0=2π0πucos nu012πf(usinθ)dθ du,n>0

ಬೆಸ್ಸಲನ ಉತ್ಪನ್ನದ ಶೂನ್ಯಗಳು

φ(x) = 0 ಆಗುವಂಥ ಯಾವುದೇ x ನ ಬೆಲೆಗೆ ಸಾಮಾನ್ಯ ಬೀಜಗಣಿತದಲ್ಲಿ ಉತ್ಪನ್ನದ ಮೂಲ (root of a function) ಎಂದು ಹೆಸರಿದೆ. ಪ್ರೌಢವಿಶ್ಲೇಷಣ ಗಣಿತದಲ್ಲಿ ಇದನ್ನು ಉತ್ಪನ್ನದ ಶೂನ್ಯ ಎನ್ನುತ್ತೇವೆ. ಬೆಸ್ಸೆಲನ ಉತ್ಪನ್ನದ ಶೂನ್ಯಗಳಿಗೆ ಸ್ವಾರಸ್ಯಕರ ಗುಣಗಳಿವೆ.

n ಯಾವುದೇ ವಾಸ್ತವ ಸಂಖ್ಯೆಯಾದರೆ Jn(x) ಗೆ ಅನಂತ ಸಂಖ್ಯೆಯಲ್ಲಿ ಶೂನ್ಯಗಳಿವೆ.[] ಎಲ್ಲ ಶೂನ್ಯಗಳೂ ವಾಸ್ತವಸಂಖ್ಯೆಗಳು. Jn(x) ನ ಎರಡು ಧನ ಶೂನ್ಯಗಳ ನಡುವೆ Jn+1(x) ನ ಒಂದು ಶೂನ್ಯವೂ Jn-1(x) ನ ಒಂದು ಶೂನ್ಯವೂ ಇವೆ. ಆದ್ದರಿಂದ Jn, Jn-1 ನ ಶೂನ್ಯಗಳು ಪರಸ್ಪರ ಪ್ರತ್ಯೇಕಿಸುತ್ತವೆ. n>12 ಆದಾಗ Jn(x) ಆಸನ್ನ ಶೂನ್ಯಗಳ ನಡುವಣ ಅವಧಿ π ಗಿಂತ ಅಧಿಕ, ಆದರೆ ದೊಡ್ಡ ಶೂನ್ಯಗಳ ನಡುವಣ ಅವಧಿಯನ್ನು π ಗಿಂತ ಕೋರಿದಷ್ಟು ಕಡಿಮೆಯಾಗಿ ಮೀರುವಂತೆ ಆಯಬಹುದು.

ಧನ x-ಅಕ್ಷದ ಮೇಲೆ π ಉದ್ದದ ಪ್ರತಿಯೊಂದು ಅವಧಿಯಲ್ಲೂ J(x) ನ ಒಂದು ಶೂನ್ಯವಿದೆ.

ಬೆಸ್ಸೆಲನ ಅವಕಲ ಸಮೀಕರಣಕ್ಕೆ (6) ರಲ್ಲಿ ಕೊಟ್ಟಿರುವ ಉಕ್ತಿ n ಪೂರ್ಣಾಂಕವಲ್ಲದಾಗ ಸಂಪೂರ್ಣ ಪರಿಹಾರ n ಕೊಡುತ್ತದೆ. ಪೂರ್ಣಾಂಕವಾದಾಗ ಇದರಿಂದ Jn ಎಂಬ ಒಂದೇ ಪರಿಹಾರ ಉಂಟಾಗುತ್ತದೆ. ಸಮೀಕರಣದ ಇನ್ನೊಂದು ಪರಿಹಾರವನ್ನು ಇಲ್ಲಿ ಬರೆಯುವೆವು.

n=0 ಆದಾಗ ಇನ್ನೊಂದು ಪರಿಹಾರ

y0=J0logx+2{J212J4+13J614J8+15J10}

ಆದ್ದರಿಂದ, d2ydx2+1xdydx+y=0

ಎಂಬ ಅವಕಲ ಸಮೀಕರಣದ ಪರಿಹಾರ

y = AJ + By

n ಸೊನ್ನೆಯಲ್ಲದ ಪೂರ್ಣಾಂಕವಾದಾಗ ಬೆಸ್ಸೆಲನ ಅವಕಲ ಸಮೀಕರಣದ ಸಂಪೂರ್ಣ ಪರಿಹಾರ

y = AJn + Byn

ಇಲ್ಲಿ, yn=logxr=1(1)rn+2rr(n+r)Jn+2r

         12π(n)p=0n11np(2x)npJpπ(p)

y0, yn ಉತ್ಪನ್ನಗಳು x=0 ಬಿಂದುವಿನಲ್ಲಿ ಕ್ರಮವಾಗಿಲ್ಲವೆಂಬುದು ಸ್ಪಷ್ಟವಾಗಿದೆ.

ಟಿಪ್ಪಣಿಗಳು

ಟೆಂಪ್ಲೇಟು:ಉಲ್ಲೇಖಗಳು

ಉಲ್ಲೇಖಗಳು

ಟೆಂಪ್ಲೇಟು:Refbegin

ಟೆಂಪ್ಲೇಟು:Refend

ಹೊರಗಿನ ಕೊಂಡಿಗಳು

ಟೆಂಪ್ಲೇಟು:Refbegin

ಟೆಂಪ್ಲೇಟು:Refend

  1. Abramowitz and Stegun, p. 358, 9.1.5.
  2. Abramowitz and Stegun, p. 361, 9.1.27.
  3. Bessel, F. (1824), article 14.