ಎನ್ರಿಕೊ ಫರ್ಮಿ

testwikiದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಟೆಂಪ್ಲೇಟು:Infobox scientist ಎನ್ರಿಕೊ ಫರ್ಮಿ ೧೯೦೧ ಸೆಪ್ಟೆಂಬರ್ ೨೬ ರಂದು ಇಟಲಿಯಲ್ಲಿ ಹುಟ್ಟಿದ ಫರ್ಮಿ ೧೯೨೨ರಲ್ಲಿ ಪಿಎಚ್ ಡಿ ಪದವಿ ಗಳಿಸಿದ. ರೋಮ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕನಾಗಿ ಕೆಲಸ ಮಾಡಿದ. ಸಂಶೋಧನೆಗಳನ್ನು ನಡೆಸುತ್ತ ಬಂದ. ನಿಧಾನವಾಗಿ ಚಲಿಸುವ ಒಂದು ನ್ಯೂಟ್ರಾನಿನಿಂದ ಮೂಲವಸ್ತುವನ್ನು ತಾಕಿಸಿದಾಗ ಅದು ವಿಕರಣಕಾರಿಯಾಗಿ ವಿಕರಣಗಳನ್ನು ಹೊರಸೂಸಬಲ್ಲುದಾಗುತ್ತದೆ ಎಂಬುದನ್ನು ಕಂಡುಕೊಂಡ ಫರ್ಮಿ ಮಂದಗತಿಯಲ್ಲಿ ಚಲಿಸುವ ನ್ಯೂಟ್ರಾನುಗಳು ಸುಲಭವಾಗಿ ನ್ಯೂಕ್ಲಿಯಸ್xಗಳನ್ನು ಪರಿವರ್ತಿಸುತ್ತವೆ ಎಂದೂ ತಿಳಿಸಿದ.

Beta decay. A neutron decays into a proton, and an electron is emitted. In order for the total energy in the system to remain the same, Pauli and Fermi postulated that a neutrino (ν¯e) was also emitted

ಇತಿವೃತ್ತ

  • ೧೯೩೮ರಲ್ಲಿ ಅಮೆರಿಕಗೆ ವಲಸೆಹೋದ ಫರ್ಮಿ ಕೊಲಂಬಿಯಾ ವಶ್ವವಿದ್ಯಾನಿಲಯದಲ್ಲಿ ವಿದಳನಸರಣಿ ಕುರಿತು ಕೆಲಸ ಆರಂಭಿಸಿದ.ಯುರೇನಿಯಂ ಅನ್ನು ನ್ಯೂಟ್ರಾನುಗಳಿಂದ ತಾಡಿಸಿ ಅದನ್ನು ಎರಡು ಹೋಳುಗಳಾಗಿ ಒಡೆಯುವಂತೆ ಮಾಡಿದ. ಈ ಕ್ರಿಯೆಗೆ ವಿದಳನ ಎಂದು ಹೆಸರು. ವಿದಳನ ನಡೆದಾಗ ಅಪಾರ ಶಕ್ತಿಯೊಂದಿಗೆ ಎರಡು ಅ‍ಥವಾ ಮೂರು ನ್ಯೂಟ್ರಾನುಗಳು ಬಿಡುಗಡೆಯಾಗುತ್ತವೆ.
  • ಈ ಬಿಡುಗಡೆಯಾದ ನ್ಯೂಟ್ರಾನುಗಳನ್ನು ಮತ್ತೆ ವಿದಳನ ಕ್ರಿಯೆಗೆ ತೊಡಗಿಸಿದರೆ ನಾಲ್ಕು ನ್ಯೂಟ್ರಾನುಗಳು, ಮತ್ತೆ ಅವುಗಳಿಂದ ಎಂಟು ಹೀಗೆ ಮುಂದುವರಿದು ಶಕ್ತಿಯನ್ನು ಒಂದೇ ಸಮನಾಗಿ ಉತ್ಪಾದಿಸಬಹುದಾಗಿರುತ್ತದೆ. ವಿದಳನೆ ಕ್ರಿಯೆಗಳ ಇಂತಹ ಸರಣಿ ಅಥವಾ ಸರಪಳಿ, ಶಕ್ತಿ ಉತ್ಪಾದನೆಗೆ ಒಂದು ಉಚಿತ ಮಾರ್ಗವಾಗಿದೆ. ಇದಕ್ಕಾಗಿ ರಿಯಾಕ್ಟರ್ ಎಂಬ ಸಾಧನವನ್ನು ಬಳಸಲಾಗುತ್ತದೆ.
  • ಫರ್ಮಿ ಇಂತಹ ರಿಯಾಕ್ಟರೊಂದನ್ನು ಮೊದಲ ಬಾರಿಗೆ ಚಿಕಾಗೋದಲ್ಲಿ ತಯಾರಿಸುವ ಸಾಹಸ ಮಾಡಿದ. ರಿಯಾಕ್ಟರಿನಲ್ಲಿ ವಿದಳನದಿಂದ ಶಕ್ತಿ ಉತ್ಪಾದಿಸಿದ. ನ್ಯೂಟ್ರಾನುನಳು ಪ್ರಚೋದಿಸುವ ನ‍್ಯೂಕ್ಲಿಯರ್ ಕ್ರೀಯೆಗಳ ಅಧ್ಯಯನ ನಡೆಸಿದ ಫರ್ಮಿಯ ತಂಡ ಮುಂದೆ ಅಣುಬಾಂಬಿನ ತಯಾರಿಕೆಗೂ ತೊಡಗಿತು. ಅಮೆರಿಕಾ ಅಧ್ಯಕ್ಷ ರೊಸ್‍ವೆಲ್ಟ್ ರ ಆದೇಶದಂತೆ ಫರ್ಮಿ ರಹಸ್ಯವಾಗಿ ಲಾಸ್ ಅಲಾಮಸ್ ಒಂದು ಬಾಂಬ್ ತಯಾರಿಸಿ ಯಶ‍ಸ್ವಿಯಾದ.
  • ಆದರೆ ಎರಡನೇ ಮಹಾಯುದ್ದ ಕಾಲದಲ್ಲಿ ಜಪಾನಿನ ಹಿರೋಷಿಮ ಮತ್ತು ನಾಗಸಾಕಿ ನಗರಗಳ ಮೇಲೆ ಹಾಕಿದ್ದು ಶಾಂತಿಪ್ರಿಯರಿಗೆ ಅಸಮಾಧಾನ ತಂದಿತು. ೧೯೩೮ರಲ್ಲಿಯೇ ಫರ್ಮಿಗೆ ನೊಬೆಲ್ ಬಹುಮಾನ ಲಭಿಸಿತು. ೧೯೪೬ರ ಮಾರ್ಚ ೧೯ರಂದು ಅಮೆರಿಕಾ ಸಂಯುಕ್ತ ಸಂಸ್ಥನೆಗಳ ಕಾಂಗ್ರೇಸ್ ಪಾರಿತೊಷಕ ನೀಡಿತು. ೧೯೫೪ ನವೆಂಬರ್ ೨೮ರಂದು ಚಿಕಾಗೊನಲ್ಲಿ ಫರ್ಮಿ ತೀರಿಕೊಂಡ. ಅವನ ಹೆಸರನ್ನು ಫರ್ಮಿಯಮ್ ಎಂಬ ಮೂಲವಸ್ತುವಿಗೆ ಇಟ್ಟು ಗೌರವಿಸಿತು.

ಬಾಹ್ಯ ಸಂಪರ್ಕಗಳು

ಉಲ್ಲೇಖಗಳು

ಟೆಂಪ್ಲೇಟು:Reflist