ಯಾಕೋಬೀಯನ್

testwikiದಿಂದ
ಬದಲಾವಣೆ ೦೭:೨೪, ೧೯ ಮೇ ೨೦೨೪ ರಂತೆ imported>Kartikdn ಇವರಿಂದ (ಯಾಕೋಬೀಯನ್)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಯಾಕೋಬೀಯನ್ ಎನ್ನುವುದು ಒಂದು ಗಣಿತೋತ್ಪನ್ನn ಉತ್ಪನ್ನಗಳ ಗಣವೊಂದರ ಉತ್ಪನ್ನ. ಇಲ್ಲಿ n ಧನಪೂರ್ಣಾಂಕ (positive integer). ಇದರ ಮೌಲ್ಯ x ಬಿಂದುವಿನಲ್ಲಿ ಒಂದು ನಿರ್ಧಾರಕವಾಗಿರುತ್ತದೆ (ಡಿಟರ್‌ಮಿನೆಂಟ್). ಈ ನಿರ್ಧಾರಕದ ಸಾಲುಗಳು, x ಬಿಂದುವಿನಲ್ಲಿ ಮೌಲ್ಯಮಾಪಿತಗೊಂಡಿದ್ದು, ಪ್ರತಿಯೊಂದೂ ಉತ್ಪನ್ನದ n ಆಂಶಿಕವ್ಯುತ್ಪನ್ನಗಳಾಗಿರುತ್ತವೆ. ಜರ್ಮನಿಯ ಗಣಿತವಿದ ಕಾರ್ಲ್ ಗುಸ್ಟಾವ್ ಜೇಕಬ್ ಯಾಕೋಬೀ (1804-1851) ಗೌರವಾರ್ಥ ಈ ಉತ್ಪನ್ನವನ್ನು ಯಾಕೋಬೀಯನ್ ಎಂದು ಕರೆಯುವುದಿದೆ.[]

ಗಣಿತೀಯವಾಗಿ ನಿರೂಪಿಸುವುದಾದರೆ, fi(x1, x2, ........... , xn), i = 1, 2, ............. , n ಎಂಬುದು n ಉತ್ಪನ್ನಗಳಾಗಿರಲಿ. ಉತ್ಪನ್ನಗಳ ಯಾಕೋಬೀಯನನ್ನು

|f1x1f1x2f1x3f1xnf2x1f2x2f2x3f2xnfnx1fnx2fnx3fnxn|

ಎಂಬ ನಿರ್ಧಾರಕದಿಂದ ನಮೂದಿಸಲಾಗುವುದು. ಇದನ್ನು

D(f1,f2,f3,,fn)D(x1,x2,x3,,xn)

ಎಂದಾಗಲಿ ಇಲ್ಲವೆ

(f1,f2,f3,,fn)(x1,x2,x3,,xn)

ಎಂದಾಗಲಿ ಬರೆಯುವುದಿದೆ.[][]

ಎರಡು ಉತ್ಪನ್ನಗಳಿಗೆ ಅಂದರೆ, f(x, y) ಮತ್ತು g(x, y) ಗಳಿಗೆ ಸಂಬಂಧಿಸಿದಂತೆ ನಿರ್ಧಾರಕ

|fxfygxgy|

ಎಂದಾಗುತ್ತದೆ. ಇದೇ ಈ ಉತ್ಪನ್ನಗಳ ಯಾಕೋಬೀಯನ್. ಇದನ್ನು

D(f,g)D(x,y)

ಎಂದೂ ಬರೆಯುವುದಿದೆ.

ಉಲ್ಲೇಖಗಳು

ಟೆಂಪ್ಲೇಟು:ಉಲ್ಲೇಖಗಳು

ಹೊರಗಿನ ಕೊಂಡಿಗಳು