ವ್ಯಾಸ (ಜ್ಯಾಮಿತಿ)

testwikiದಿಂದ
ಬದಲಾವಣೆ ೧೯:೪೦, ೧೧ ಜುಲೈ ೨೦೧೯ ರಂತೆ imported>Kartikdn ಇವರಿಂದ
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ವರ್ತುಲದಲ್ಲಿ ನೀಲಿ ರೇಖೆಯು ವ್ಯಾಸವಾಗಿದೆ.

ರೇಖಾಗಣಿತದಲ್ಲಿ, ಒಂದು ವೃತ್ತದ ವ್ಯಾಸ ಎಂದರೆ ವೃತ್ತದ ಕೇಂದ್ರಬಿಂದುವಿನ ಮೂಲಕ ಸಾಗುವ ಮತ್ತು ಅದರ ಅಂತ್ಯಬಿಂದುಗಳು ವೃತ್ತದ ಮೇಲೆ ನೆಲೆಸಿರುವ ಯಾವುದೇ ನೇರ ರೇಖಾ ಖಂಡವಾಗಿದೆ.[] ಇದನ್ನು ವೃತ್ತದ ಅತ್ಯಂತ ಉದ್ದನೆಯ ಚಾಪಕರ್ಣ ಎಂದೂ ವ್ಯಾಖ್ಯಾನಿಸಬಹುದು. ಈ ಎರಡೂ ವ್ಯಾಖ್ಯಾನಗಳು ಗೋಳದ ವ್ಯಾಸಕ್ಕೂ ಸಮಂಜಸವಾಗಿವೆ.

ಹೆಚ್ಚು ಆಧುನಿಕ ಬಳಕೆಯಲ್ಲಿ, ವ್ಯಾಸದ ಉದ್ದವನ್ನು ಕೂಡ ವ್ಯಾಸವೆಂದೇ ಕರೆಯಲಾಗುತ್ತದೆ. ಈ ಅರ್ಥದಲ್ಲಿ ಒಬ್ಬರು ವ್ಯಾಸದ ಬಗ್ಗೆ ಮಾತನಾಡುತ್ತಿರುತ್ತಾರೆ, ಒಂದು ವ್ಯಾಸದ (ಸ್ವತಃ ರೇಖೆಯನ್ನು ಸೂಚಿಸುವ ಪದ) ಬಗ್ಗೆ ಅಲ್ಲ, ಏಕೆಂದರೆ ವೃತ್ತ ಅಥವಾ ಗೋಳದ ಎಲ್ಲ ವ್ಯಾಸಗಳು ಸಮಾನ ಉದ್ದವನ್ನು ಹೊಂದಿರುತ್ತವೆ, ಮತ್ತು ಇದು ತ್ರಿಜ್ಯದ (r) ಎರಡರಷ್ಟಿರುತ್ತದೆ.

d=2rr=d2.

ದೀರ್ಘವೃತ್ತಕ್ಕೆ, ಸಾಮಾನ್ಯ ಪರಿಭಾಷೆಯು ಭಿನ್ನವಾಗಿದೆ. ದೀರ್ಘವೃತ್ತದ ವ್ಯಾಸವು ದೀರ್ಘವೃತ್ತದ ಕೇಂದ್ರಬಿಂದುವಿನ ಮೂಲಕ ಸಾಗುವ ಯಾವುದೇ ಚಾಪಕರ್ಣವಾಗಿರುತ್ತದೆ.[]

ಉಲ್ಲೇಖಗಳು

ಟೆಂಪ್ಲೇಟು:Reflist