ಅಕೇಶಿಯ
ಟೆಂಪ್ಲೇಟು:Taxobox ಅಕೇಶಿಯ (ಟೆಂಪ್ಲೇಟು:Pron-en) ಫ್ಯಾಬಸಿಯೆ ಕುಟುಂಬಕ್ಕೆ ಸೇರಿದ ಮಿಮೋಸೋಯ್ಡಿ ಉಪಪ್ರಭೇದ ಪೊದೆಗಳು ಹಾಗು ಮರಗಳ ಕುಲಕ್ಕೆ ಸೇರಿದೆ. ಇದರ ಅಸ್ತಿತ್ವವನ್ನು ಸ್ವೀಡಿಶ್‌ನ ಸಸ್ಯವಿಜ್ಞಾನಿ ಕಾರ್ಲ್ ಲಿನ್ನಯಯುಸ್ 1773ರಲ್ಲಿ ಮೊದಲ ಬಾರಿಗೆ ಆಫ್ರಿಕಾದಲ್ಲಿ ಪತ್ತೆ ಮಾಡಿದರು. ಆಸ್ಟ್ರೇಲಿಯನ್ ಪ್ರಭೇಧವಲ್ಲದ ಹಲವು ಮರಗಳು ಮುಳ್ಳಿನಿಂದ ಕೂಡಿರುತ್ತವೆ, ಆದರೆ ಬಹುತೇಕ ಆಸ್ಟ್ರೇಲಿಯನ್ ಅಕೇಶಿಯಗಳಲ್ಲಿ ಮುಳ್ಳುಗಳಿರುವುದಿಲ್ಲ. ಇವುಗಳು ಬೀಜಕೋಶದಿಂದ ಹುಟ್ಟುತ್ತವೆ, ಜೊತೆಗೆ ಸಸ್ಯರಸ ಹಾಗು ಎಲೆಗಳು ವಿಶೇಷವಾಗಿ ದೊಡ್ಡ ಪ್ರಮಾಣದ ಟ್ಯಾನಿನ್ ಗಳನ್ನು (ಚರ್ಮ ಹದ ಮಾಡಲು ಹಾಗೂ ಶಾಯಿಯನ್ನು ತಯಾರಿಸಲು ಮರದ ತೊಗಟೆಗಳಿಂದ ತೆಗೆದ ಬಂಧಕ ವಸ್ತು) ಉತ್ಪಾದಿಸುತ್ತವೆ. ಮರಕ್ಕೆ ಅದರ ಕುಲದ ಹೆಸರು ακακία(ಅಕಾಕಿಯ) ನಿಂದ ವ್ಯತ್ಪತ್ತಿಯಾಗಿದೆ. ಹಿಂದಿನ ಗ್ರೀಕ್ ಸಸ್ಯವಿಜ್ಞಾನಿ-ವೈದ್ಯ ಪೆಡನಿಯಸ್ ಡಿಯೋಸ್ಕೋರೈಡೆಸ್(ಸುಮಾರು 40-90) ಔಷಧೀಯ ಮರವಾದ A. ನಿಲೋಟಿಕಾ ಗೆ ತಮ್ಮ ಪುಸ್ತಕ ಮಟೆರಿಯ ಮೆಡಿಕಾ ನಲ್ಲಿ ಈ ಹೆಸರನ್ನು ನೀಡಿದ್ದಾರೆ.[೧] ಮರವು ಈ ಹೆಸರನ್ನು ಗ್ರೀಕ್ ನಿಂದ ತನ್ನ ವಿಶಿಷ್ಟವಾದ ಮುಳ್ಳುಗಳಿಂದಾಗಿ ಪಡೆದುಕೊಂಡಿದೆ, ακις (ಅಕಿಸ್, ಮುಳ್ಳು ).[೨] ಮರವು ನೈಲ್ ನದಿಯ ತಟದುದ್ದಕ್ಕೂ ವ್ಯಾಪಕವಾಗಿ ಬೆಳೆದಿರುವ ಕಾರಣದಿಂದಾಗಿ ನಿಲೋಟಿಕ ಎಂಬ ಪ್ರಭೇದ ಹೆಸರನ್ನು ಲಿನ್ನಯುಸ್ ನೀಡಿದ್ದಾರೆ. ಅಕೇಶಿಯಗಳನ್ನು ಮುಳ್ಳಿನಮರಗಳು, ಸಿಳ್ಳೆಯಂತೆ ಶಬ್ದಮಾಡುವ ಮುಳ್ಳು ಗಳು ಅಥವಾ ವಾಟಲ್‌ಗಳು (ತಡಿಕೆಗಳು) ಎಂದೂ ಸಹ ಕರೆಯಲಾಗುತ್ತದೆ, ಇದರಲ್ಲಿ ಎಲ್ಲೊ-ಫೀವರ್ ಅಕೇಶಿಯ ಹಾಗು ಅಂಬ್ರೆಲಾ ಅಕೇಶಿಯಗಳೂ ಸೇರಿವೆ. ಕಳೆದ 2005ರವರೆಗೂ, ವಿಶ್ವವ್ಯಾಪಿಯಾಗಿ ಸರಿಸುಮಾರು ಅಕೇಶಿಯದ 1300 ಪ್ರಭೇದಗಳು ಇವೆಯೆಂದು ಭಾವಿಸಲಾಗಿದೆ. ಇದರಲ್ಲಿ ಸುಮಾರು 960 ಅಕೇಶಿಯಗಳು ಆಸ್ಟ್ರೇಲಿಯ ಮೂಲದ್ದಾಗಿದೆ, ಉಳಿದ ಅಕೇಶಿಯಗಳು ಎರಡೂ ಖಗೋಳಾರ್ಧದ ಉಷ್ಣವಲಯದಿಂದ ಸಮಶೀತೋಷ್ಣ ಪ್ರದೇಶಗಳ ಸುತ್ತಮುತ್ತ ಹರಡಿಕೊಂಡಿವೆ, ಇದರಲ್ಲಿ ಯುರೋಪ್, ಆಫ್ರಿಕಾ, ದಕ್ಷಿಣ ಏಷ್ಯ ಹಾಗು ಅಮೇರಿಕಾಗಳು ಸೇರಿವೆ. ಆದಾಗ್ಯೂ, ಈ ಕುಲವನ್ನು ಐದು ಭಾಗಗಳಾಗಿ ವಿಂಗಡಿಸಲಾಗಿದೆ, ಅಕೇಶಿಯ ಎಂಬ ಹೆಸರನ್ನು ಆಸ್ಟ್ರೇಲಿಯನ್ ಪ್ರಭೇದಗಳಿಗೆ ಉಳಿಸಿಕೊಳ್ಳಲಾಗಿದೆ, ಹಾಗು ಆಸ್ಟ್ರೇಲಿಯಾದ ಹೊರಗಿರುವ ಬಹುತೇಕ ಸಸ್ಯ ಪ್ರಭೇದಗಳನ್ನು ವಚೆಲ್ಲಿಯ ಹಾಗು ಸೆನೆಗಲಿಯ ಎಂದು ವಿಂಗಡಿಸಲಾಗಿದೆ.
ವರ್ಗೀಕರಣ



ಅಕೇಶಿಯ ಕುಲದ ಸಸ್ಯವು ಸ್ಪಷ್ಟವಾಗಿ ಏಕಜೈವಿಕಕುಲದ್ದಾಗಿಲ್ಲ. ಈ ಶೋಧನೆಯಿಂದಾಗಿ ಅಕೇಶಿಯ ಸಸ್ಯದ ಐದು ಹೊಸ ಕುಲಗಳ ಹುಟ್ಟಿಗೆ ಕಾರಣವಾಗಿದೆ. ಇದನ್ನು ಅಕೇಶಿಯ ಪ್ರಭೇದಗಳ ಪಟ್ಟಿಯಲ್ಲಿ ಚರ್ಚಿಸಲಾಗಿದೆ. ಸಾಧಾರಣ ರೂಢಿಯಲ್ಲಿ, "ಅಕೇಶಿಯ" ಎಂಬ ಪದವನ್ನು ಸಾಂಧರ್ಬಿಕವಾಗಿ ರೋಬಿನಿಯ ಕುಲದ ಸಸ್ಯ ಪ್ರಭೇದಗಳೊಂದಿಗೆ ತಪ್ಪಾಗಿ ಬಳಕೆ ಮಾಡಲಾಗುತ್ತದೆ, ಇದೂ ಸಹ ಬಟಾಣಿ ಗಿಡದ ಕುಟುಂಬಕ್ಕೆ ಸೇರುತ್ತದೆ. ಅಮೆರಿಕನ್ ಪ್ರಭೇದ ರೋಬಿನಿಯ ಸ್ಯುಡೋಅಕೇಶಿಯ ಸ್ಥಳೀಯವಾಗಿ ಬ್ಲ್ಯಾಕ್ ಲೋಕಸ್ಟ್ ಎಂದು ಪರಿಚಿತವಾಗಿದೆ, ಇದನ್ನು ಕೆಲವೊಂದು ಬಾರಿ "ನಕಲಿ ಅಕೇಶಿಯ" ಎಂದು ಯುನೈಟೆಡ್ ಕಿಂಗ್ಡಮ್ ನ ಬೇಸಾಯದಲ್ಲಿ ಕರೆಯಲಾಗುತ್ತದೆ.
ಭೌಗೋಳಿಕ
ದಕ್ಷಿಣತುದಿಯಲ್ಲಿರುವ ಸಸ್ಯಕುಲದ ಪ್ರಭೇದಗಳೆಂದರೆ ಅಕೇಶಿಯ ಡೆಲ್ಬಾಟ (ಸಿಲ್ವರ್ ವಾಟಲ್), ಅಕೇಶಿಯ ಲೊಂಗಿಫೋಲಿಯ (ಕೋಸ್ಟ್ ವಾಟಲ್ ಅಥವಾ ಸಿಡ್ನಿ ಗೋಲ್ಡನ್ ವಾಟಲ್), ಅಕೇಶಿಯ ಮೆಯರ್ನ್ಸೀ (ಬ್ಲ್ಯಾಕ್ ವಾಟಲ್), ಹಾಗು ಅಕೇಶಿಯ ಮೆಲನೋಜೈಲೋನ್ (ಬ್ಲ್ಯಾಕ್ ವುಡ್)ಗಳು ಆಸ್ಟ್ರೇಲಿಯಾದ ತಾಸ್ಮೇನಿಯನಲ್ಲಿ 43°30'Sವರೆಗೂ ವ್ಯಾಪಿಸಿದೆ, ಅಕೇಶಿಯ ಕಾವೆನ್ (ಎಸ್ಪಿನಿಲ್ಲೋ ನೆಗ್ರೋ ) ಅರ್ಜೆಂಟೀನದ ಚುಬುತ್ ಪ್ರಾಂತ್ಯದ ಈಶಾನ್ಯ ದಿಕ್ಕಿನ ದೂರದ ದಕ್ಷಿಣದವರೆಗೂ ಕಂಡುಬರುತ್ತದೆ. ಆಸ್ಟ್ರೇಲಿಯನ್ ಪ್ರಭೇದಗಳನ್ನು ಸಾಮಾನ್ಯವಾಗಿ ವಾಟಲ್ ಗಳೆಂದು ಕರೆಯಲಾಗುತ್ತದೆ, ಆದರೆ ಆಫ್ರಿಕನ್ ಹಾಗು ಅಮೆರಿಕನ್ ಪ್ರಭೇದಗಳನ್ನು ಅಕೇಶಿಯಗಳೆಂದು ಕರೆಯಲಾಗುತ್ತದೆ.

ಅಕೇಶಿಯ ಅಲ್ಬಿಡಾ, ಅಕೇಶಿಯ ಟೋರ್ಟಿಲಿಸ್ ಹಾಗು ಅಕೇಶಿಯ ಇರಾಕೆನ್ಸಿಸ್ ಗಳು ಸಿನೈ ಮರುಭೂಮಿ ಹಾಗು ಜೋರ್ಡನ್ ಕಣಿವೆಯಲ್ಲಿ ವ್ಯಾಪಕವಾಗಿ ಬೆಳೆದಿರುವುದು ಕಂಡುಬರುತ್ತದೆ. ಇದು ಉಷ್ಣವಲಯದ ಭೂಖಂಡದ ವಾತಾವರಣದ ಸವಾನ್ನ ಸಸ್ಯರಾಶಿಯಲ್ಲಿ ಕಂಡುಬರುತ್ತದೆ. ಇದು ವೆಸ್ಟ್ ಇಂಡಿಸ್ ನ ಮೊಂಟ್ಸೆರ್ರಾಟ್‌ನಲ್ಲೂ ವ್ಯಾಪಕವಾಗಿ ಬೆಳೆಯುತ್ತದೆ. ಸ್ಥಳೀಯವಾಗಿ ಅಲ್ಲಿ ಇದು 'ಕುಶ' ಎಂಬ ಹೆಸರಿನಿಂದ ಪರಿಚಿತವಾಗಿದೆ.
ವರ್ಣನೆ
ಸಾಧಾರಣವಾಗಿ ಅಕೇಶಿಯದ ಎಲೆಗಳು ಸಂಯುಕ್ತ ಜೋಡಿಪರ್ಣಗಳನ್ನು ಹೊಂದಿರುತ್ತವೆ. ಆದಾಗ್ಯೂ, ಕೆಲವು ಪ್ರಭೇದಗಳಲ್ಲಿ, ವಿಶೇಷವಾಗಿ ಆಸ್ಟ್ರೇಲಿಯನ್ ಹಾಗು ಪೆಸಿಫಿಕ್ ದ್ವೀಪಗಳ ಪ್ರಭೇದಗಳಲ್ಲಿ, ಪರ್ಣಕಗಳು ಮುಚ್ಚಿಕೊಂಡಿರುತ್ತದೆ. ಹಾಗು ಎಲೆಯ ದಂಟುಗಳು (ಪರ್ಣವೃಂತಗಳು) ಲಂಬವಾಗಿ ಚಪ್ಪಟೆಯಾಕಾರದಲ್ಲಿರುತ್ತವೆ, ಜೊತೆಗೆ ಇವು ಎಲೆಗಳಿಗೆ ಸಹಕಾರಿಯಾಗಿದೆ. ಇದನ್ನು ವೃಂತಗಳು (ಚಪ್ಪಟೆಯಾದ ಎಲೆಯ ಕಾವು) ಎಂದು ಕರೆಯಲಾಗುತ್ತದೆ. ವೃಂತಗಳ ಲಂಬಾಕಾರದ ಸ್ಥಾನವು ಅವುಗಳನ್ನು ತೀವ್ರವಾದ ಸೂರ್ಯ ಬೆಳಕಿನಿಂದ ರಕ್ಷಿಸುತ್ತದೆ, ಅವುಗಳ ತುದಿಯು ಆಕಾಶದೆಡೆಗೆ ಹಾಗೂ ಭೂಮಿಯೆಡೆಗೆ ಚಾಚಿಕೊಂಡಿರುತ್ತವೆ ಹಾಗು ಸಮತಲವಾದ ಎಲೆಗಳ ಮೇಲೆ ಬೀಳುವ ಬೆಳಕನ್ನು ನಿರೋಧಿಸಿದಂತೆ ಅದು ಪೂರ್ಣವಾಗಿ ಬೆಳಕನ್ನು ನಿರೋಧಿಸುವುದಿಲ್ಲ. ಕೆಲವು ಪ್ರಭೇದಗಳಲ್ಲಿ (ಉದಾಹರಣೆಗೆ ಅಕೇಶಿಯ ಗ್ಲುಕಾಪ್ಟೆರ ) ಒಟ್ಟಾರೆಯಾಗಿ ಎಲೆಗಲಾಗಲಿ ಅಥವಾ ವೃಂತಗಳಾಗಲಿ ಇರುವುದಿಲ್ಲ, ಆದರೆ ಇದಕ್ಕೆ ಬದಲಾಗಿ ಚಪ್ಪಟೆ ಕಾಂಡಗಳನ್ನು ಹೊಂದಿರುತ್ತವೆ, ಪರಿವರ್ತಿತ ಎಲೆ ಮಾದರಿಯ ದ್ಯುತಿಸಂಶ್ಲೇಷಕ ಕಾಂಡಗಳು ಎಲೆಗಳ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತವೆ.

ಸಣ್ಣ ಹೂವುಗಳು ಐದು ಸಣ್ಣದಾದ ದಳಗಳನ್ನು ಹೊಂದಿರುತ್ತವೆ, ಇವುಗಳು ಬಹುತೇಕವಾಗಿ ಉದ್ಧವಾದ ಕೇಸರಗಳಿಂದ ಮುಚ್ಚಿರುತ್ತವೆ. ಜೊತೆಗೆ ಇದು ದಟ್ಟವಾದ ಗೋಳಾಕಾರದ ಅಥವಾ ಸಿಲಿಂಡರಾಕಾರದ ಗೊಂಚಲುಗಳಿಂದ ಜೋಡಣೆಯಾಗಿರುತ್ತವೆ; ಹಲವು ಪ್ರಭೇದಗಳಲ್ಲಿ ಇದು ಹಳದಿ ಅಥವಾ ಕೆನೆ ಬಣ್ಣದಿಂದ ಕೂಡಿರುತ್ತವೆ, ಕೆಲವು ಪ್ರಭೇದಗಳು ಬಿಳಿ ಬಣ್ಣದ್ದಾಗಿರುತ್ತವೆ, ಕೆಲವೊಂದು ನೇರಳೆ ಬಣ್ಣದಲ್ಲೂ ಸಹ ಇರುತ್ತವೆ (ಅಕೇಶಿಯ ಪರ್ಪರಿಯಪೆಟಲ ) ಅಥವಾ ಕೆಂಪು (ಅಕೇಶಿಯ ಲೆಪ್ರೋಸ ಸ್ಕಾರ್ಲೆಟ್ ಬ್ಲೇಜ್). ಅಕೇಶಿಯ ಹೂವುಗಳನ್ನು ಅಲ್ಬಿಜಿಯ ಕುಲದಿಂದ ವ್ಯತ್ಯಾಸ ಗುರುತಿಸಬಹುದು. ಇವುಗಳ ಕೇಸರಗಳು ಬುಡದಲ್ಲಿ ಅಂಟಿಕೊಂಡಿರುವುದಿಲ್ಲ. ಅಲ್ಲದೆ, ಮಿಮೋಸ ಹೂವುಗಳಿಗಿಂತ ಭಿನ್ನವಾಗಿ, ಅಕೇಶಿಯ ಹೂವುಗಳು 10ಕ್ಕಿಂತ ಹೆಚ್ಚಿನ ಕೇಸರಗಳನ್ನು ಹೊಂದಿದೆ.[೩] ವಿಶೇಷವಾಗಿ ಶುಷ್ಕ ಪ್ರದೇಶದಲ್ಲಿ ಬೆಳೆಯುವ ಸಸ್ಯಗಳು ಸಾಮಾನ್ಯವಾಗಿ ಗಡುಸಾದ ರಚನೆಯನ್ನು ಹೊಂದಿರುತ್ತವೆ. ಕೆಲವೊಂದು ಬಾರಿ ಇವುಗಳು ಚಿಕ್ಕದಾದ, ಕಠಿಣವಾದ ಹಾಗು ಮೊನಚಾದ ಕೊಂಬೆಗಳನ್ನು ಹೊಂದಿರುತ್ತವೆ, ಅಥವಾ ಕೆಲವೊಂದು ಬಾರಿ ಎಲೆ-ವೃಂತಪರ್ಣಗಳನ್ನು ಹೊಂದಿರುತ್ತವೆ. ಅಕೇಶಿಯ ಅರ್ಮಟ ಎಂಬುದು ಆಸ್ಟ್ರೇಲಿಯಾದ ಕಾಂಗರೂ-ಮುಳ್ಳಾಗಿದೆ ಹಾಗು ಅಕೇಶಿಯ ಏರಿಯೋಲೋಬ ಆಫ್ರಿಕಾದ ಕ್ಯಾಮಲ್ ಮುಳ್ಳಾಗಿದೆ. ಅಕೇಶಿಯ ಬೀಜಗಳನ್ನು ಚಿಗುರೊಡೆಸುವುದು ಬಹಳ ಕಷ್ಟಕರವಾಗುತ್ತದೆ. ವಿವಿಧ ತಾಪಮಾನಗಳಲ್ಲಿ (ಸಾಮಾನ್ಯವಾಗಿ ಸುಮಾರು 80 °Cನಷ್ಟು) ಬೀಜವನ್ನು ಹುದುಗಿಸಿಡುವುದರಿಂದ ಹಾಗು ಬೀಜದ ಸಿಪ್ಪೆಯನ್ನು ಕೈಯಿಂದ ಸುಲಿಯುವುದರಿಂದ ಸರಾಸರಿ ಶೇಕಡಾ 80ವರೆಗೆ ಇಳುವರಿ ಸುಧಾರಣೆಯಾಗಬಹುದೆಂದು ಸಂಶೋಧನೆಯು ಪತ್ತೆಹಚ್ಚಿದೆ.[೪]
ಸಹಜೀವನ

ಸೆಂಟ್ರಲ್ ಅಮೆರಿಕನ್ ಅಕೇಶಿಯ ಸ್ಫಯೇರೋಸೆಫಲ, ಅಕೇಶಿಯ ಕಾರ್ನಿಗೆರ, ಹಾಗು ಅಕೇಶಿಯ ಕಾಲ್ಲಿನ್ಸೀ (ಇವೆಲ್ಲವೂ ಒಟ್ಟಾರೆಯಾಗಿ ಬುಲ್ ಥಾರ್ನ್ ಅಕೇಶಿಯಗಳೆಂದು ಕರೆಯಲಾಗುತ್ತದೆ), ಮುಳ್ಳಿನ ಮಾದರಿಯ ದೊಡ್ಡ ವೃಂತಪರ್ಣವು ಟೊಳ್ಳಾಗಿರುವುದರ ಜೊತೆಗೆ ಹಲವಾರು ಪ್ರಭೇದಗಳ ಸ್ಯೂಡೋಮೈರ್ಮೆಕ್ಸ್ ಇರುವೆಗಳಿಗೆ ಆಶ್ರಯ ನೀಡಿದೆ. ಇವುಗಳು ಎಲೆಯ-ಕಾಂಡದ ಮೇಲಿರುವ ರಸವನ್ನು ಜೊತೆಗೆ ಪರ್ಣಕಗಳ ತುದಿಯಲ್ಲಿ ಸಂಗ್ರಹವಾಗಿರುವ ಬೆಲ್ತಿಯನ್ ಬಾಡೀಸ್ ಎಂಬ ಸಣ್ಣ, ಮೇದಸ್ಸು ಸಮೃದ್ಧವಾಗಿರುವ ಆಹಾರಾಂಶಗಳನ್ನು ಸೇವಿಸುತ್ತವೆ. ಇದಕ್ಕೆ ಬದಲಾಗಿ, ಇರುವೆಗಳು ಸಸ್ಯಾಹಾರಿಗಳ ವಿರುದ್ಧ ಸಸ್ಯಕ್ಕೆ ರಕ್ಷಣೆಯನ್ನು ಒದಗಿಸುತ್ತವೆ.[೫] ಇರುವೆಗಳ ಕೆಲವು ಪ್ರಭೇದಗಳು ಅಕೇಶಿಯ ಸುತ್ತ ಬೆಳೆಯುವ ಅದರ ವಿರೋಧಿ ಸಸ್ಯಗಳ ವಿರುದ್ಧವೂ ಸಹ ಹೋರಾಡುತ್ತದೆ, ತೊಂದರೆಯನ್ನುಂಟು ಮಾಡುವ ಸಸ್ಯದ ಎಲೆಗಳನ್ನು ತಮ್ಮ ದವಡೆಯಿಂದ ಕಚ್ಚಿ ಹಾಕಿ ಅವುಗಳನ್ನು ಅಂತಿಮವಾಗಿ ಸಾಯಿಸುತ್ತವೆ. ಇರುವೆಗೆ ಸಂಬಂಧಿಸಿದ ಇತರ ಪ್ರಭೇದಗಳು ತಮ್ಮ ಪೋಷಕ ಸಸ್ಯಕ್ಕೆ ಯಾವುದೇ ಪ್ರಯೋಜನವನ್ನು ಒದಗಿಸುವುದಿಲ್ಲ. ಇರುವೆಗಳ ಜೊತೆಗೆ ಇದೇ ರೀತಿಯಾದ ಪರಸ್ಪರಾವಲಂಬನೆಗಳು ಆಫ್ರಿಕಾದ ಅಕೇಶಿಯ ಮರಗಳಲ್ಲಿಯೂ ಸಹ ನಡೆಯುತ್ತದೆ, ಉದಾಹರಣೆಗೆ ಅಕೇಶಿಯದ ಸಿಳ್ಳೆಯಂತೆ ಶಬ್ದ ಮಾಡುವ ಮುಳ್ಳು. ಅಕೇಶಿಯಗಳು ಇರುವೆಗಳಿಗೆ ಮುಳ್ಳುಗಳಲ್ಲಿ ಆಶ್ರಯವನ್ನು ಒದಗಿಸುತ್ತವೆ ಹಾಗು ತಮ್ಮನ್ನು ಅವಲಂಬಿಸಿರುವ ಕ್ರೆಮಟೋಗಸ್ಟೆರ್ ಮಿಮೊಸೆ ಪ್ರಭೇದದ ಇರುವೆಗಳಿಗೆ ಹೂವಿನ ಹೊರಗಿರುವ ಮಕರಂದ ಗ್ರಂಥಿಗಳಿಂದ ಮಕರಂದ ಒದಗಿಸುತ್ತವೆ. ಇದಕ್ಕೆ ಪ್ರತಿಯಾಗಿ, ಇರುವೆಗಳು ಸಸ್ಯಗಳನ್ನು ಆಕ್ರಮಿಸುವ ದೊಡ್ಡ ಸಸ್ತನಿ ವರ್ಗದ ಸಸ್ಯಾಹಾರಿಗಳ ಮೇಲೆ ದಾಳಿ ಮಾಡುವ ಮೂಲಕ ಅದನ್ನು ರಕ್ಷಿಸುತ್ತವೆ ಜೊತೆಗೆ ಸಸ್ಯಕ್ಕೆ ಹಾನಿಯುಂಟುಮಾಡುವ ಕಾಂಡ ಕೊರೆಯುವ ಜೀರುಂಡೆಗಳಿಂದಲೂ ರಕ್ಷಿಸುತ್ತವೆ.
ಉಪದ್ರವಕಾರಿ ಕೀಟಗಳು
ಆಸ್ಟ್ರೇಲಿಯಾದಲ್ಲಿ, ಅಕೇಶಿಯ ಪ್ರಭೇದ ಸಸ್ಯಗಳನ್ನು ಕೆಲವೊಂದು ಬಾರಿ A. ಲಿಂಗಿವೆರೆನ್ ಸೇರಿದಂತೆ ಯೆನೆಟಸ್ ಕುಲದ ಹೆಪಿಯಾಲಿಡ್ ಪತಂಗದ ಮರಿಹುಳುಗಳು ಆಹಾರದ ಸಸ್ಯವಾಗಿ ಬಳಸುತ್ತವೆ. ಇವುಗಳು ಕಾಂಡವನ್ನು ಮಟ್ಟಸವಾಗಿ ನಂತರ ಕೆಳಕ್ಕೆ ಲಂಬವಾಗಿ ಕೊರೆಯುತ್ತವೆ. ಅಕೇಶಿಯ ವನ್ನು ಆಹಾರವಾಗಿ ಬಳಸುವ ಇತರ ಲೆಪಿಡೋಪ್ಟೆರ ಮರಿಗಳೆಂದರೆ ಬ್ರೌನ್-ಟೈಲ್, ಎಂಡೋಕ್ಲಿಟ ಮಲಬಾರಿಕಸ್ ಹಾಗು ಟರ್ನಿಪ್ ಜೀರುಂಡೆ. ಎಲೆಗಳನ್ನು ತಿನ್ನುವ ಕೆಲವು ಬುಕ್ಕುಲಟ್ರಿಸಿಡ್ ಜೀರುಂಡೆಗಳೂ ಸಹ ಅಕೇಶಿಯ ಸಸ್ಯವನ್ನು ಅದರಲ್ಲೂ ವಿಶೇಷವಾಗಿ ಅಕೇಶಿಯ ಹೊರ್ರಿಡ ವನ್ನು ಆಹಾರಕ್ಕೆ ಅವಲಂಬಿಸುತ್ತದೆ ಹಾಗು ಬುಕ್ಕುಲಾಟ್ರಿಕ್ಸ್ ಫ್ಲೆಕ್ಸುಒಸ ವಿಶೇಷವಾಗಿ ಅಕೇಶಿಯ ನಿಲೋಟಿಕ ವನ್ನು ಆಹಾರಕ್ಕೆ ಅವಲಂಬಿಸುತ್ತದೆ. ಉಪದ್ರವಕಾರಿ ಕೀಟಗಳು ಹಾಗು ಮೇಯುವ ಪ್ರಾಣಿಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅಕೇಶಿಯಗಳು ಹಲವು ಜೈವಿಕ ಸಂಯುಕ್ತಗಳನ್ನು ಒಳಗೊಂಡಿದೆ.[೬]
ಉಪಯೋಗಗಳು
ಆಹಾರದಲ್ಲಿ ಬಳಕೆ

ಅಕೇಶಿಯ ಬೀಜಗಳನ್ನು ಸಾಮಾನ್ಯವಾಗಿ ಆಹಾರದಲ್ಲಿ ಹಾಗು ವಿವಿಧ ಇತರ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ.
ಬರ್ಮಾ, ಲಾವೋಸ್ ಹಾಗು ಥೈಲ್ಯಾಂಡ್ ನಲ್ಲಿ, ಅಕೇಶಿಯ ಪೆನ್ನಾಟ ದ ಗರಿತುಂಬಿರುವ ಎಳೆಯ ಬಳ್ಳಿಗಳನ್ನು (ಅಲ್ಲಿ ಇದನ್ನು ಸಾಮಾನ್ಯವಾಗಿ ಚಾ-ಒಮ್, ชะอม ಹಾಗು ಸು ಪೌಟ್ ಯ್ವೆಟ್ ಎಂದು ಬರ್ಮೀಸ್ ನಲ್ಲಿ ಕರೆಯಲಾಗುತ್ತದೆ) ಸೂಪ್ ಗಳು, ಕರಿಗಳು, ಆಮ್ಲೆಟ್‌ಗಳು, ಹಾಗು ಹುರಿದ ಪದಾರ್ಥಗಳಲ್ಲಿ ಬಳಸಲಾಗುತ್ತದೆ.
ಜೇನುಹುಳವು ಅಕೇಶಿಯ ಹೂವನ್ನು ಬಳಸಿಕೊಂಡು ಆಹಾರ ಸಂಗ್ರಹಿಸುವ ಮಕರಂದವನ್ನು ಒಂದು ಸವಿ ತಿನಿಸೆಂದು ಪರಿಗಣಿಸಲಾಗುತ್ತದೆ. ಇದನ್ನು ಅದರ ಮಧುರವಾದ ಹೂವಿನ ಸ್ವಾದ, ಮೃದುವಾದ ಅದರ ರಚನೆ ಹಾಗು ಗಾಜಿನಂತೆನೋಟಕ್ಕೆ ಹೆಸರುವಾಸಿಯಾಗಿದೆ. ಸ್ಫಟಿಕೀಕರಣಗೊಳ್ಳದ ಕೆಲವೇ ಕೆಲವು ಮಧುಗಳಲ್ಲಿ ಅಕೇಶಿಯ ಮಧುವು ಒಂದಾಗಿದೆ.[೭]
ಮೆಕ್ಸಿಕೋನಲ್ಲಿ ಇದರ ಬೀಜಗಳನ್ನು ಗುವಾಜೆಸ್ ಎಂದು ಕರೆಯಲಾಗುತ್ತದೆ. ಗುವಾಜೆಸ್ ಅಥವಾ ಹುವಾಜೆಸ್ ಅಕೇಶಿಯ ಮರದ ಮಟ್ಟಸವಾದ, ಹಸಿರು ಬೀಜಕೋಶಗಳನ್ನು ಹೊಂದಿರುತ್ತವೆ. ಕೆಲವೊಂದು ಬಾರಿ ಬೀಜಕೋಶಗಳು ತೆಳುವಾದ ಹಸಿರು ಬಣ್ಣ ಅಥವಾ ಕಡುಗೆಂಪು ಬಣ್ಣವನ್ನು ಹೊಂದಿರುತ್ತದೆ-ಎರಡರ ಸ್ವಾದವು ಒಂದೇ ರೀತಿಯಲ್ಲಿರುತ್ತದೆ. ಗುವಾಜೆ ಬೀಜಗಳು ಒಂದು ಸಣ್ಣ ಲಿಮ ದ್ವಿದಳ ಧಾನ್ಯದ ಗಾತ್ರದಲ್ಲಿರುತ್ತದೆ ಜೊತೆಗೆ ಇದನ್ನು ಗುವಾಕಾಮೋಲ್ ನ ಜೊತೆಯಲ್ಲಿ ಹಸಿಯಾಗಿ ತಿನ್ನಲಾಗುತ್ತದೆ, ಮತ್ತೆ ಕೆಲವೊಂದು ಬಾರಿ ಬೇಯಿಸಿ ಅದರಿಂದ ಸಾಸ್ ತಯಾರಿಸಲಾಗುತ್ತದೆ. ಇವುಗಳಿಂದ ಪನಿಯಾಣವನ್ನೂ ಸಹ ತಯಾರಿಸಬಹುದು. ಭೂಮಿಯಡಿಯ ಬೀಜಗಳನ್ನು ಸ್ವಲ್ಪ ಮಟ್ಟಿಗಿನ ಬೆಳ್ಳುಳ್ಳಿಯ ಸ್ವಾದವನ್ನು ಮೋಲ್(ಸಾಸ್)ಗೆ ನೀಡುವಲ್ಲಿ ಬಳಕೆಯಾಗುತ್ತದೆ. ಇದನ್ನು ಗುವಾಕ್ಸಮೋಲ್ (ಹುವಾಕ್ಸಾಮೋಲ್) ಎಂದು ಕರೆಯಲಾಗುತ್ತದೆ. ಒಣಗಿದ ಬೀಜಗಳನ್ನು ಹುರಿದು ಅದಕ್ಕೆ ಉಪ್ಪು ಹಚ್ಚಿ ಸ್ನಾಕ್(ಲಘು ಆಹಾರ)ನಂತೆ ತಿನ್ನಲಾಗುತ್ತದೆ. ಇದನ್ನು "ಕಾಕಾಲಾಸ್" ಎಂದು ಕರೆಯಲಾಗುತ್ತದೆ. ಮೆಕ್ಸಿಕನ್ ನ ವಿಶೇಷ ಮಾರುಕಟ್ಟೆಗಳಲ್ಲಿ ತಾಜಾ ಅಥವಾ ಒಣಗಿದ ಇಡಿಯಾದ ಉದ್ದದ ಬೀಜಗಳನ್ನು ಖರೀದಿಸಬಹುದಾಗಿದೆ.
ಮೊದಲ ಬಾರಿಗೆ ಗೊತ್ತಿರುವಂತೆ ಹೇರಳವಾಗಿದ್ದ ಸಸ್ಯಾಹಾರಿ ಜೇಡ ಬಗ್ಹೀರ ಕಿಪ್ಲಿಂಗಿಯು ಮಧ್ಯ ಅಮೆರಿಕ ಹಾಗು ಮೆಕ್ಸಿಕೋನಲ್ಲಿ ಕಂಡುಬರುತ್ತದೆ. ಇದು ಪ್ರೋಟೀನ್ ನ ಅಧಿಕ ಅಂಶಗಳನ್ನು ಹೊಂದಿರುವ ಬೆಲ್ತಿಯನ್ ಬಾಡೀಸ್ ಎಂದು ಕರೆಯಲಾಗುವ ಅಕೇಶಿಯ ಸಸ್ಯದ ತುದಿಯನ್ನು ಸೇವಿಸುತ್ತಿದ್ದುದ್ದನ್ನು 2009ರಲ್ಲಿ ಮೊದಲ ಬಾರಿಗೆ ದಾಖಲಿಸಿಕೊಂಡು ಚಿತ್ರೀಕರಣ ಮಾಡಲಾಯಿತು. ಒಟ್ಟಾರೆ ಇತರ 40,000 ಜೇಡದ ಪ್ರಭೇದಗಳು ಪ್ರಮುಖವಾಗಿ ಮಾಂಸಾಹಾರಿಗಳೆಂದು ಪರಿಗಣಿಸಲಾಗಿದೆ.
ಅಕೇಶಿಯವನ್ನು ಸಿಟ್ರಸ್ ಮೃದು ಪಾನೀಯವಾದ ಸನ್ ಡ್ರಾಪ್, ಫ್ರೆಸ್ಕಾನಲ್ಲಿ, RC ಕೋಲದಲ್ಲಿ, ಬಾರ್ಕ್ಸ್ ನ ಬೇರಿನ ಬಿಯರ್, ಫುಲ್ ತ್ರಾಟಲ್ ಅನ್ಲೆಡೆಡ್ ಎನರ್ಜಿ ಡ್ರಿಂಕ್, ಸ್ಟ್ರಾಬೆರಿ-ಲೆಮೊನೆಡ್ ಪವರೆಡ್ ಹಾಗು ಲಕೆರೋಲ್ ಪಾಸ್ಟಿಲ್ಲೇ ಕ್ಯಾಂಡಿಗಳು, ಅಲ್ಟೋಯಿಡ್ ಮಿಂಟ್ ಗಳು, ಲಾಂಗರ್ಸ್ ಪೈನಾಪಲ್ ಕೊಕೊನಟ್ ಜ್ಯೂಸ್, ರಿಗ್ಲೇಸ್ ಎಕ್ಲಿಪ್ಸ್ ಚೂಯಿಂಗ್ ಗಮ್ ಹಾಗು M&Ms ಪ್ರೆಟ್ಜೆಲ್ ಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.
ಗೋಂದು
ಅಕೇಶಿಯದ ಮರದ ವಿವಿಧ ಪ್ರಭೇದಗಳು ಗೋಂದನ್ನು ಉತ್ಪಾದಿಸುತ್ತವೆ. ನೈಜ ಗಮ್ ಅರಾಬಿಕ್ ಅಕೇಶಿಯ ಸೆನೆಗಲ್ ನ ಉತ್ಪನ್ನವಾಗಿದೆ. ಇದು ಶುಷ್ಕ ಉಷ್ಣವಲಯದ ಪಶ್ಚಿಮ ಆಫ್ರಿಕಾದ ಸೆನೆಗಲ್ ನಿಂದ ಉತ್ತರ ನೈಜೀರಿಯವರೆಗೂ ವಿಪುಲವಾಗಿ ಕಂಡುಬರುತ್ತದೆ. ಅಕೇಶಿಯ ಅರೇಬಿಕ, ಭಾರತದಲ್ಲಿ ಕಂಡುಬರುವ ಗಮ್-ಅರೇಬಿಕ್ ಮರವಾಗಿದೆ. ಆದರೆ ಇದು ನೈಜ ಗಮ್-ಅರೇಬಿಕ್‌ಗಿಂತ ಕೆಳ ಮಟ್ಟದ ಗೋಂದನ್ನು ಉತ್ಪತ್ತಿ ಮಾಡುತ್ತದೆ.

ಔಷಧೀಯ ಉಪಯೋಗಗಳು
ಹಲವು ಅಕೇಶಿಯ ಮರದ ಪ್ರಭೇದಗಳು ಪ್ರಮುಖವಾಗಿ ಸಾಂಪ್ರದಾಯಿಕ ಔಷಧ ಪದ್ಧತಿಯಲ್ಲಿ ಬಳಕೆಯಾಗುತ್ತದೆ. ಹೆಚ್ಚಿನ ಬಳಕೆಗಳು ವಿಜ್ಞಾನವನ್ನು ಆಧರಿಸಿದೆ. ಏಕೆಂದರೆ ಹಲವಾರು ಪ್ರಭೇದಗಳಲ್ಲಿ ಪತ್ತೆಯಾದ ರಾಸಾಯನಿಕ ಸಂಯುಕ್ತಗಳು ಔಷಧೀಯ ಗುಣಗಳನ್ನು ಹೊಂದಿದೆ.ಟೆಂಪ್ಲೇಟು:Citation needed ಆಯುರ್ವೇದ ಔಷಧ ಪದ್ಧತಿಯಲ್ಲಿ, ಅಕೇಶಿಯ ನಿಲೋಟಿಕ ಶೀಘ್ರ ಸ್ಖಲನವನ್ನು ಗುಣಪಡಿಸಲು ನೆರವಾಗುವ ಪರಿಹಾರೋಪಾಯವೆಂದು ಪರಿಗಣಿಸಲಾಗಿದೆ. 19ನೇ ಶತಮಾನದ ಇಥಿಯೋಪಿಯನ್ ವೈದ್ಯಕೀಯ ಗ್ರಂಥವು ಇಥಿಯೋಪಿಯಾದಲ್ಲಿ ಬೆಳೆಯುವ ಅಕೇಶಿಯ ಪ್ರಭೇದಿಂದ (ಇದನ್ನು ಗ್ರಾರ್ ಎಂದು ಕರೆಯಲಾಗುತ್ತದೆ) ತಯಾರಾದ ಔಷಧದ ಗುಟುಕನ್ನುತಾಚ ದ ಬೇರಿನೊಂದಿಗೆ ಮಿಶ್ರಣ ಮಾಡಿ ನಂತರ ಕುದಿಸಿ, ರೇಬಿಸ್ ಕಾಯಿಲೆಯನ್ನು ಗುಣಪಡಿಸಲು ಬಳಸಲಾಗುತ್ತಿತ್ತು.[೮] ಟ್ಯಾನಿಕ್ ಆಸಿಡ್ ಅಧಿಕವಾಗಿರುವ ಆಸ್ಟ್ರಿನ್ಜೆಂಟ್ ಔಷಧವನ್ನು ಕಾಟೆಚು ಅಥವಾ ಕುಟ್ಚ್ ಎಂದು ಕರೆಯಲಾಗುತ್ತದೆ, ಇದನ್ನು ಹಲವಾರು ಪ್ರಭೇದಗಳಿಂದ ಸಂಗ್ರಹಿಸಲಾಗುತ್ತದೆ, ಆದರೆ ವಿಶೇಷವಾಗಿ ಅಕೇಶಿಯ ಕಾಟೆಚು ನಿಂದ ತಯಾರಿಸಲಾಗುತ್ತದೆ, ಮರದ ತೊಗಟೆಯನ್ನು ಕುದಿಸುವುದರೆ ಜೊತೆಗೆ ದ್ರಾವಣವನ್ನು ಆವಿಗೊಳಿಸಿ ಅದರಿಂದ ಸಾರವನ್ನು ಸಂಗ್ರಹಿಸಲಾಗುತ್ತದೆ.[೯]
ಅಲಂಕಾರಿಕ ಬಳಕೆ
ಕೆಲವು ಪ್ರಭೇದಗಳನ್ನು ತೋಟಗಳಲ್ಲಿ ಅಲಂಕಾರಿಕವಾಗಿ ವ್ಯಾಪಕವಾಗಿ ಬಳಸಲಾಗುತ್ತದೆ; ಬಹುಶಃ ಅತ್ಯಂತ ಜನಪ್ರಿಯವಾದುದೆಂದರೆ ಅಕೇಶಿಯ ಡೆಲ್ಬಾಟ (ಸಿಲ್ವರ್ ವಾಟಲ್), ಜೊತೆಗೆ ಇದು ತನ್ನ ಆಕರ್ಷಕವಾದ ಮಾಸಲು ಬೂದು ಹಸಿರು ಅಥವಾ ನೀಲಿಯಿಂದ ಹಿಡಿದು ಬೆಳ್ಳಿ ಬಣ್ಣದ ಎಲೆಗಳನ್ನು ಹಾಗು ಗಾಢ ಹಳದಿ ಬಣ್ಣದ ಹೂಗಳನ್ನು ಹೊಂದಿದೆ; ಇದನ್ನು ಅದಕ್ಕೆ ಸಂಬಂಧಿಸಿದ ಕುಲಕ್ಕೆ ಸೇರಿದ ಮಿಮೋಸ ದ ಜೊತೆಗೆ ತಪ್ಪಾಗಿ ಅರ್ಥೈಸಿ, ಕೃಷಿ ಮಾಡುವ ಕೆಲವು ಪ್ರದೇಶಗಳಲ್ಲಿ ಇದನ್ನು ಮಿಮೋಸ ಎಂದು ಕರೆಯಲಾಗುತ್ತದೆ. ಮತ್ತೊಂದು ಅಲಂಕಾರಿಕ ಅಕೇಶಿಯವೆಂದರೆ ಅಕೇಶಿಯ ಜಂತ್ಹೋಫ್ಲ್ಯೋಯಿಯ (ಫೀವರ್ ಟ್ರೀ). ದಕ್ಷಿಣ ಯೂರೋಪಿನ ಹೂವಾಡಿಗರು ಅಕೇಶಿಯ ಬೈಲೆಯಾನ, ಅಕೇಶಿಯ ಡೆಲ್ಬಾಟ, ಅಕೇಶಿಯ ಪಿಕ್ನಂಥಾ ಹಾಗು ಅಕೇಶಿಯ ರೆಟಿನೋಡ್ಸ್ ಗಳನ್ನು ಕೀಳುವ ಹೂಗಳಾಗಿ ಬಳಸುತ್ತಾರೆ. ಜೊತೆಗೆ ಅಲ್ಲಿ ಇದನ್ನು ಸಾಮಾನ್ಯವಾಗಿ ಮಿಮೋಸ ಎಂದು ಕರೆಯಲಾಗುತ್ತದೆ.[೧೦] ಅಲಂಕಾರಿಕ ಪ್ರಭೇದ ಅಕೇಶಿಯಗಳನ್ನು ಮನೆಯ ಒಡೆಯರು ಹಾಗು ಭೂದೃಶ್ಯ ವಿನ್ಯಾಸಕರು ತಮ್ಮ ಮನೆಯ ಸುರಕ್ಷತೆಗೆ ಸಹ ಬಳಕೆ ಮಾಡುತ್ತಾರೆ. ಚೂಪಾದ ಮುಳ್ಳುಗಳನ್ನು ಹೊಂದಿರುವ ಕೆಲವು ಪ್ರಭೇದಗಳು ಖಾಸಗಿ ಸ್ವಾಮ್ಯದ ಜಾಗದಲ್ಲಿ ಅನಧಿಕೃತ ವ್ಯಕ್ತಿಗಳು ಪ್ರವೇಶಿಸದಂತೆ ತಡೆಯುತ್ತವೆ, ಜೊತೆಗೆ ಇವುಗಳನ್ನು ಕಿಟಕಿಗಳು ಹಾಗು ನೀರು ಕೊಳವೆಗಳ ಸಮೀಪ ನೆಟ್ಟರೆ ಕಳ್ಳರು ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸುವುದನ್ನು ತಡೆಯುತ್ತದೆ. ಅಕೇಶಿಯ ಸಸ್ಯಗಳ ಸೌಂದರ್ಯೋಪಾಸಕ ಗುಣಲಕ್ಷಣಗಳು, ಅವರ ಮನೆಯ ಸುರಕ್ಷತೆ ಗುಣಗಳ ಜೊತೆಗೆ ಕೃತಕ ಬೇಲಿಗಳು ಹಾಗು ಗೋಡೆಗಳಿಗೆ ಪರ್ಯಾಯವಾಗಿ ಬಳಕೆಯಾಗುತ್ತದೆ.
ಬಣ್ಣಗಳು
ಪ್ರಾಚೀನ ಇಜಿಪ್ಷಿಯನ್ನರು ಅಕೇಶಿಯವನ್ನು ಬಣ್ಣದಲ್ಲಿ ಬಳಕೆ ಮಾಡುತ್ತಿದ್ದರು.[೧೧]
ಸುಗಂಧದ್ರವ್ಯ

ಅಕೇಶಿಯ ಫಾರ್ನೆಸಿಯಾನ ವನ್ನು ಅದರ ಗಾಢವಾದ ಪರಿಮಳದಿಂದಾಗಿ ಸುಗಂಧ ದ್ರವ್ಯದ ಕೈಗಾರಿಕೆಯಲ್ಲಿ ಬಳಸಲಾಗುತ್ತದೆ. ಅಕೇಶಿಯವನ್ನು ಸುಗಂಧ ದ್ರವ್ಯವಾಗಿ ಶತಮಾನಗಳ ಹಿಂದಿನಿಂದಲೂ ಬಳಸಲಾಗುತ್ತಿದೆ. ಬೈಬಲ್ ನಲ್ಲಿ, ಅಕೇಶಿಯ ಮರವನ್ನು ಪರಿಮಳ ದ್ರವ್ಯದ ರೂಪದಲ್ಲಿ ಬಳಕೆ ಮಾಡುತ್ತಿದ್ದುದು ಹಲವಾರು ಬಾರಿ ಉಲ್ಲೇಖಿಸಲಾಗಿದೆ.
ಸಂಕೇತ ಹಾಗೂ ಧಾರ್ಮಿಕಾಚರಣೆಯಲ್ಲಿ ಬಳಕೆ
ಅಕೇಶಿಯವನ್ನು ಫ್ರೀಮೇಸನರಿ(ಫ್ರೀಮೇಸನ್ ಸಂಘ)ಯ ಸಂಕೇತವಾಗಿ ಪರಿಶುದ್ಧತೆ ಹಾಗು ಆತ್ಮದ ಸಹಿಷ್ಣುತೆಯನ್ನು ಬಿಂಬಿಸಲು ಬಳಸಲಾಗುತ್ತದೆ. ಜೊತೆಗೆ ಪುನರುತ್ಥಾನ ಹಾಗು ಅಮರತ್ವವನ್ನು ಸೂಚಿಸುವ ಶವಸಂಸ್ಕಾರಕ್ಕೆ ಸಂಬಂಧಿಸಿದ ಸಂಕೇತವಾಗಿ ಬಳಸಲಾಗುತ್ತದೆ. ಜೆರುಸಲೇಮ್ ನಲ್ಲಿ ಕಿಂಗ್ ಸಾಲೋಮನ್ ದೇವಾಲಯವನ್ನು ನಿರ್ಮಿಸಿದ ಹಿರಮ್ ಅಬಿಫ್ಫ್ ನ ಶವಸಂಸ್ಕಾರದಿಂದ ಮರವು ತನ್ನ ಪ್ರಾಮುಖ್ಯತೆಯನ್ನು ಪಡೆಯಿತು. ಅಕೇಶಿಯದ ಹಲವಾರು ಭಾಗಗಳು ಧಾರ್ಮಿಕ ವಿಧಿಗೆ ಪರಿಮಳ ದ್ರವ್ಯವಾಗಿ ಬಳಸಲಾಯಿತು (ಮುಖ್ಯವಾಗಿ ತೊಗಟೆ, ಬೇರು ಹಾಗು ರಾಳ). ಅಕೇಶಿಯವನ್ನು ಪರಿಮಳ ದ್ರವ್ಯವಾಗಿ ಭಾರತ, ನೇಪಾಳ, ಟಿಬೆಟ್ ಹಾಗು ಚೀನಾದಲ್ಲಿ ಮುಖ್ಯವಾಗಿ ಬಳಸಲಾಗುತ್ತದೆ. ಅಕೇಶಿಯ ತೊಗಟೆಯ ಹೊಗೆಯು ರಾಕ್ಷಸರು ಹಾಗು ಪಿಶಾಚಿಗಳನ್ನು ದೂರವಿರಿಸುತ್ತದೆಂದು ಹೇಳಲಾಗಿದೆ. ಜೊತೆಗೆ ಇದು ದೇವತೆಗಳನ್ನು ಒಳ್ಳೆಯ ಚಿತ್ತಸ್ಥಿತಿಯಲ್ಲಿರಿಸುತ್ತದೆಂದೂ ಸಹ ಹೇಳಲಾಗುತ್ತದೆ. ಅಕೇಶಿಯದ ಬೇರುಗಳು ಹಾಗು ರಾಳಗಳನ್ನು ರೊಡೋಡೆನ್ಡ್ರಾನ್, ಅಕೋರಸ್, ಸೈಟಿಸುಸ್, ಸಾಲ್ವಿಯ ಹಾಗು ಪರಿಮಳದ ಇತರ ಅಂಶಗಳಲ್ಲಿ ಬಳಸಲಾಗುತ್ತದೆ. ಅಕೇಶಿಯ ಹಣ್ಣಿನಿಂದ ತಯಾರಿಸಿದ ಆಲ್ಕೊಹಾಲಿನ ಪಾನೀಯವು ಮನುಷ್ಯರು ಹಾಗು ಆನೆಗಳಿಗೆ ಇಷ್ಟವಾಗುತ್ತದೆ.[೧೨] ಈಸ್ಟನ್ ಬೈಬಲ್ ನಿಘಂಟಿನ ಪ್ರಕಾರ, ಅಕೇಶಿಯ ಮರವು "ಬೆಂಕಿಯಾಡುತ್ತಿರುವ ಪೊದೆ"ಯಾಗಿದ್ದಿರಬಹುದು (ಎಕ್ಸೋಡಸ್ 3:2)). ಇದನ್ನು ಮೋಸಸ್ ಮರುಭೂಮಿಯಲ್ಲಿ ಕಂಡರು.[೧೩] ಅಲ್ಲದೆ, ಮೋಸಸ್ ಗೆ ದೇವರು ಡೇರೆಯನ್ನು ನಿರ್ಮಿಸಲು ಸೂಚನೆಗಳನ್ನು ನೀಡಿದಾಗ, ಅವರು "ಅಕೇಶಿಯ ಮರದಿಂದ ಪೆಟ್ಟಿಗೆಯನ್ನು ನಿರ್ಮಿಸಿ" ಹಾಗು "ಅಕೇಶಿಯ ಮರದಿಂದ ಮೇಜನ್ನು ಮಾಡಿ" ಎಂದು ಆಜ್ಞೆ ಮಾಡುತ್ತಾರೆ (ಎಕ್ಸೋಡಸ್ 25:10 & 23, ಪರಿಷ್ಕೃತ ಸ್ಟ್ಯಾಂಡರ್ಡ್ ರೂಪಾಂತರ) ರಷ್ಯಾ, ಇಟಲಿ ಹಾಗು ಇತರ ರಾಷ್ಟ್ರಗಳಲ್ಲಿ ಹಳದಿ ಮಿಮೊಸಸ್ ಗಳನ್ನು (ಇತರ ಹೂವುಗಳೊಂದಿಗೆ) ಅಂತಾರಾಷ್ಟ್ರೀಯ ಮಹಿಳಾ ದಿನದಂದು (ಮಾರ್ಚ್ 8) ಮಹಿಳೆಯರಿಗೆ ಉಡುಗೊರೆಯಾಗಿ ನೀಡುವುದು ಸಂಪ್ರದಾಯದಲ್ಲಿದೆ. ಈ "ಮಿಮೊಸಾ"ಗಳು ವಾಸ್ತವವಾಗಿ ಅಕೇಶಿಯ ಡೆಲ್ಬಾಟ ದವಾಗಿರುತ್ತವೆ (ಸಿಲ್ವರ್ ವಾಟಲ್).
ಟ್ಯಾನಿನ್

ವಾಟಲ್‌ಗಳೆಂದು ಕರೆಯಲ್ಪಡುವ ಹಲವು ಆಸ್ಟ್ರೇಲಿಯನ್ ಪ್ರಭೇದ ತೊಗಟೆಗಳು ಟ್ಯಾನಿಕ್ ಆಮ್ಲದಿಂದ ಸಮೃದ್ಧವಾಗಿದೆ ಜೊತೆಗೆ ರಫ್ತಿನ ಒಂದು ಪ್ರಮುಖ ಪದಾರ್ಥವಾಗಿದೆ; ಪ್ರಮುಖ ಪ್ರಭೇದಗಳಲ್ಲಿ ಅಕೇಶಿಯ ಪಿಕ್ನಂಥಾ (ಗೋಲ್ಡನ್ ವಾಟಲ್), ಅಕೇಶಿಯ ಡೆಕರೆನ್ಸ್ (ಟ್ಯಾನ್ ವಾಟಲ್), ಅಕೇಶಿಯ ಡೆಲ್ಬಾಟ (ಸಿಲ್ವರ್ ವಾಟಲ್) ಹಾಗು ಅಕೇಶಿಯ ಮೆಯರ್ನ್ಸೀ (ಬ್ಲ್ಯಾಕ್ ವಾಟಲ್)ಗಳು ಸೇರಿವೆ. ಬ್ಲ್ಯಾಕ್ ವಾಟಲ್ ದಕ್ಷಿಣ ಆಫ್ರಿಕಾದ ಜಮೀನುಗಳಲ್ಲಿ ಬೆಳೆಯಲಾಗುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ಪರಿಚಿತವಾದ ಬಹುತೇಕ ಆಸ್ಟ್ರೇಲಿಯನ್ ಅಕೇಶಿಯ ಪ್ರಭೇದಗಳು ತಮ್ಮ ಸ್ವಾಭಾವಿಕವಾದ ಆಕ್ರಮಣಶೀಲ ಪ್ರಸರಣದಿಂದಾಗಿ ಅಪಾರವಾದ ಸಮಸ್ಯೆಗೆ ಎಡೆ ಮಾಡಿಕೊಟ್ಟಿದೆ. ಅಕೇಶಿಯ ನಿಲೋಟಿಕ ದ ಬೀಜಕೋಶಗಳು (ನೆಬ್-ನೆಬ್ ಹೆಸರಿನಡಿಯಲ್ಲಿ), ಹಾಗು ಇತರ ಆಫ್ರಿಕನ್ ಪ್ರಭೇದ ಸಸ್ಯಗಳೂ ಸಹ ಟ್ಯಾನಿನ್ ನಿಂದ ಸಮೃದ್ಧವಾಗಿದೆ ಹಾಗು ಚರ್ಮಕಾರರು ಬಳಸುತ್ತಾರೆ.
ಮರ

ಆಸ್ಟ್ರೇಲಿಯಾದ ಕೆಲವು ಅಕೇಶಿಯ ಪ್ರಭೇದ ಮರಗಳು ನಾಟವಾಗಿ ಪ್ರಯೋಜನಕ್ಕೆ ಬರುತ್ತದೆ, ಉದಾಹರಣೆಗೆ ಆಸ್ಟ್ರೇಲಿಯದ ಅಕೇಶಿಯ ಮೆಲನೋಜೈಲಾನ್ (ಕಪ್ಪುಕಟ್ಟಿಗೆ), ಇದು ಗಾತ್ರದಲ್ಲಿ ಬಹಳ ದೊಡ್ಡದಿರುತ್ತದೆ; ಇದರ ಮರವನ್ನು ಪೀಠೋಪಕರಣಗಳನ್ನು ತಯಾರಿಸಲು ಬಳಸಲಾಗುತ್ತದೆ, ಜೊತೆಗೆ ಇದಕ್ಕೆ ಅಧಿಕ ಪಾಲಿಶ್‌ನ ಅಗತ್ಯವಿರುತ್ತದೆ; ಹಾಗು ಅಕೇಶಿಯ ಒಮಲೋಫಿಲ್ಲ (ಮ್ಯಾಲ್ ವುಡ್, ಇದೂ ಸಹ ಆಸ್ಟ್ರೇಲಿಯನ್ ಪ್ರಭೇದದ್ದು), ಇದರ ಸುವಾಸನೆಭರಿತ ನಾಟವನ್ನು ಅಲಂಕಾರಗಳಿಗೆ ಬಳಸುತ್ತಾರೆ. ಅಕೇಶಿಯ ಸೇಯಲ್ ನ್ನು ಬೈಬಲ್ ನಲ್ಲಿ ಶಿತ್ತಃ-ಮರವೆಂದು ಪರಿಗಣಿಸಲಾಗುತ್ತದೆ, ಇದು ಶಿತ್ತಿಂ-ಮರವನ್ನು ಒದಗಿಸುತ್ತದೆ. ಬುಕ್ ಆಫ್ ಎಕ್ಸೋಡಸ್ ಪ್ರಕಾರ, ಇದನ್ನು ಆರ್ಕ್ ಆಫ್ ಕಾವೆನಂಟ್ ನ ನಿರ್ಮಾಣದಲ್ಲಿ ಬಳಸಲಾಗಿತ್ತು. ಹವಾಯಿಯನ್ ದ್ವೀಪಗಳ ಅಕೇಶಿಯ ಕೊಅ ಹಾಗು ರಿಯೂನಿಯನ್ ದ್ವೀಪದ ಅಕೇಶಿಯ ಹೆಟೆರೋಫಿಲ್ಲ ಎರಡೂ ಉತ್ಕೃಷ್ಟ ದರ್ಜೆಯ ನಾಟ(ಮರದ ದಿಮ್ಮಿ)ವನ್ನು ನೀಡುವ ಮರವಾಗಿದೆ. ಸಮೃದ್ಧತೆ ಹಾಗು ಪ್ರಾದೇಶಿಕ ಸಂಸ್ಕೃತಿಯನ್ನು ಅವಲಂಬಿಸಿ, ಕೆಲವು ಅಕೇಶಿಯ ಪ್ರಭೇದಗಳನ್ನು (ಉದಾಹರಣೆಗೆ ಅಕೇಶಿಯ ಫುಮೋಸ) ಸಾಂಪ್ರದಾಯಿಕವಾಗಿ ಸ್ಥಳೀಯ ಕಟ್ಟಿಗೆಗಳಾಗಿ ಬಳಸಲಾಗುತ್ತದೆ.[೧೪]

| ವಿವಿಧ ಅಕೇಶಿಯ ಪ್ರಭೇದಗಳ ಅಂದಾಜು ಮರಗಳ ಸಾಂದ್ರತೆ | |||
| ಅಗಲ="175pt" | |||
| ಪ್ರಭೇದಗಳು | |||
| ಅಕೇಶಿಯ ಅಕುಮಿನಾಟ | |||
| ಅಕೇಶಿಯ ಅಮೈಥೆಥೋಫಿಲ್ಲ | |||
| ಅಕೇಶಿಯ ಕಾಟೆಚು | |||
| ಅಕೇಶಿಯ ಕಾಂಫುಸ | |||
| ಅಕೇಶಿಯ ಯೆರಿಯೋಲೋಬ | |||
| ಅಕೇಶಿಯ ಗಾಲ್ಪಿನೀ | |||
| ಅಕೇಶಿಯ ಗೊಯೆಟ್ಜೀ | |||
| ಅಕೇಶಿಯ ಕರೂ | |||
| ಅಕೇಶಿಯ ಲೆಯುಕೋಫ್ಲೋಯೆಯ | |||
| ಅಕೇಶಿಯ ಮೆಲನೋಜೈಲಾನ್ | |||
| ಅಕೇಶಿಯ ಮೆಲ್ಲಿಫೆರ ಉಪಪ್ರಭೇದ ಮೆಲ್ಲಿಫೆರ | |||
| ಅಕೇಶಿಯ ನಿಲೋಟಿಕ | |||
| ಅಕೇಶಿಯ ನಿಲೋಟಿಕ ಉಪಪ್ರಭೇದ ಅಡ್‌ಸ್ಟ್ರಿನ್ಗೆನ್ಸ್ | |||
| ಅಕೇಶಿಯ ನಿಲೋಟಿಕ ಉಪಪ್ರಭೇದ ನಿಲೋಟಿಕ | |||
| ಅಕೇಶಿಯ ಪೊಲ್ಯಕಾಂತ ಉಪಪ್ರಭೇದ ಕಂಪಿಲಕಾಂಥ | |||
| ಅಕೇಶಿಯ ಸೈಬಿರಿಯಾನ |
ಇಂಡೋನೇಷಿಯ (ಮುಖ್ಯವಾಗಿ ಸುಮಾತ್ರ) ಹಾಗು ಮಲೇಶಿಯದಲ್ಲಿ (ಮುಖ್ಯವಾಗಿ ಸರವಾಕ್ ಪ್ರದೇಶದಲ್ಲಿ) ಅಕೇಶಿಯ ಮಂಗಿಯಂ ನನ್ನು ತೋಟಗಳಲ್ಲಿ ಬೆಳೆಯಲಾಗುತ್ತದೆ. ಇದರ ತಿಳ್ಳುಮರವನ್ನು ಕಾಗದ ತಯಾರಿಕೆಯಲ್ಲಿ ಬಳಸಲಾಗುತ್ತದೆ.
ಭೂಮಿಯ ಸುಧಾರಿತ ಸ್ಥಿತಿ
ಅಕೇಶಿಯಗಳನ್ನು ಭೂಮಿಯ ಸವೆತವನ್ನು ತಡೆಗಟ್ಟಲು ನೆಡಬಹುದಾಗಿದೆ, ವಿಶೇಷವಾಗಿ ಗಣಿಗಾರಿಕೆ ಅಥವಾ ನಿರ್ಮಾಣದ ನಂತರ ಉಂಟಾಗುವ ಹಾನಿಯನ್ನು ತಡೆಗಟ್ಟಲು ಬೆಳೆಸಬಹುದಾಗಿದೆ.[೧೯]
ಪರಿಸರ ಆಕ್ರಮಣ
ಇದೇ ಕಾರಣಗಳಿಂದಾಗಿ ಇದನ್ನು ಭೂಸವೆತವನ್ನು ತಡೆಯುವ ಸಸ್ಯವೆಂದು ಹೇಳಲಾಗುತ್ತದೆ, ಸುಲಭವಾಗಿ ಹರಡುವ ಹಾಗು ಸ್ಥಿತಿಸ್ಥಾಪಕತ್ವದ ಕಾರಣದಿಂದಾಗಿ, ಕೆಲವು ಅಕೇಶಿಯಗಳ ಪ್ರಭೇದಗಳು, ಉದಾಹರಣೆಗೆ ಅಕೇಶಿಯ ಮೆಯರ್ನ್ಸೀ ಪ್ರಭೇದಗಳು ಆಕ್ರಮಣಕಾರಿ ಸಾಮರ್ಥ್ಯವನ್ನು ಪಡೆದಿದೆ. ವಿಶ್ವವ್ಯಾಪಿಯಾಗಿ ಪರಿಚಯಗೊಂಡ ಮೇಲೆ ಇದು ಎಲ್ಲ ಹುಲ್ಲುಗಾವಲನ್ನು ಜೊತೆಗೆ ತ್ಯಜಿಸಲಾದ ಕೃಷಿ ಪ್ರದೇಶಗಳನ್ನು ಆಕ್ರಮಿಸಿಕೊಂಡ ಸಸ್ಯವಾಯಿತು. ವಿಶೇಷವಾಗಿ ಸೌಮ್ಯ ಕರಾವಳಿ ಹಾಗು ದ್ವೀಪ ಪ್ರದೇಶಗಳಲ್ಲಿ ಹಿತಕರ ವಾತಾವರಣವು ಅದು ವ್ಯಾಪಕವಾಗಿ ಹಬ್ಬಲು ನೆರವಾಯಿತು. ಆಸ್ಟ್ರೇಲಿಯನ್/ನ್ಯೂಜಿಲೆಂಡ್ ವೀಡ್ ರಿಸ್ಕ್ ಅಸ್ಸೆಸ್ಮೆಂಟ್ ಇದನ್ನು "ಅಪಾಯಕಾರಿ ಸಸ್ಯ ಪ್ರಭೇದಗಳಲ್ಲಿ 15ನೇ ಅಂಕವನ್ನು ನೀಡಿದೆ" ಜೊತೆಗೆ ಇದನ್ನು ವಿಶ್ವದ 100 ಅತ್ಯಂತ ಆಕ್ರಮಣಕಾರಿ ಪ್ರಭೇದಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.[೨೦] ಅಕೇಶಿಯ ಪ್ರಭೇದ ಮರಗಳನ್ನು ನೆಡುವುದಕ್ಕೆ ಮುಂಚೆ ಪರಿಸರಕ್ಕೆ ಸಂಬಂಧಿಸಿದಂತೆ ವ್ಯಾಪಕ ಅಧ್ಯಯನಗಳನ್ನು ನಡೆಸಬೇಕು.ಏಕೆಂದರೆ ಇದು ಅತ್ಯಂತ ವೇಗವಾಗಿ ಬೆಳೆಯುವ ಸಸ್ಯವಾಗಿ, ಒಂದೊಮ್ಮೆ ಇದನ್ನು ಪರಿಚಯಿಸಿದರೆ, ಇದು ವೇಗವಾಗಿ ಹರಡಿಕೊಳ್ಳುತ್ತದೆ ಹಾಗು ಇದರ ನಿರ್ಮೂಲನೆ ಬಹಳ ಕಷ್ಟಕರ.
ಅಕೇಶಿಯ ದ ಸಸ್ಯರಸಾಯನ ವಿಜ್ಞಾನ
ಆಲ್ಕಲಾಯಿಡ್ಸ್

ಈ ಮುಂಚಿತವಾಗಿ ಹೇಳಿದಂತೆ, ಅಕೇಶಿಯಗಳು ಹಲವಾರು ಜೈವಿಕ ಸಂಯುಕ್ತಗಳನ್ನು ಒಳಗೊಂಡಿರುತ್ತವೆ. ಇದು ಅವುಗಳನ್ನು ಉಪದ್ರವಕಾರಿ ಕೀಟಗಳು ಹಾಗು ಮೇವಿನ ಪ್ರಾಣಿಗಳಿಂದ ರಕ್ಷಿಸುತ್ತವೆ.[೬] ಈ ಸಂಯುಕ್ತಗಳಲ್ಲಿ ಹಲವು ಮಾನವರಲ್ಲಿ ಮನಃಪ್ರಭಾವಕವನ್ನು ಉಂಟು ಮಾಡುತ್ತವೆ. ಅಕೇಶಿಯಗಳಲ್ಲಿ ಕಂಡುಬರುವ ಆಲ್ಕಲಾಯ್ಡ್ ಗಳಲ್ಲಿ ಡಿಮೆತಿಲ್ಟ್ರಿಪ್ಟಮಿನ್ (DMT), 5-ಮೆತ್ಹೋಕ್ಸೈಡಿಮೆತಿಲ್ಟ್ರಿಪ್ಟಮಿನ್ (5-MeO-DMT) ಹಾಗು N-ಮೆತಿಲ್ಟ್ರಿಪ್ಟಮಿನ್ (NMT)ಗಳು ಸೇರಿವೆ. ಸಸ್ಯದ ಎಲೆಗಳು, ಕಾಂಡಗಳು ಹಾಗು ಬೇರುಗಳನ್ನು ಕೆಲವೊಂದು ಬಾರಿ MAOI ಒಳಗೊಳ್ಳುವ ಸಸ್ಯದೊಂದಿಗೆ ಮದ್ಯವನ್ನು ತಯಾರಿಸಲಾಗುತ್ತದೆ. ಹಾಗೂ ಕಾಯಿಲೆಯ ಗುಣಪಡಿಸಲು, ಉತ್ಸವಾಚರಣೆಗಳಲ್ಲಿ ಅಥವಾ ಧಾರ್ಮಿಕ ಕ್ರಿಯೆಗಳಲ್ಲಿ ಬಳಸಲಾಗುತ್ತದೆ. ಇಜಿಪ್ಷಿಯನ್ ಪುರಾಣವು ಅಕೇಶಿಯ ಮರವನ್ನು ಜೀವನಕ್ಕೆ ಸಂಬಂಧಿಸಿದ ಮರದ ಗುಣಲಕ್ಷಣಗಳಿಂದ ಕೂಡಿದೆಯೆಂದು ಹೇಳುತ್ತದೆ (ಮಿಥ್ ಆಫ್ ಒಸಿರಿಸ್ ಅಂಡ್ ಇಸಿಸ್ ನ ಲೇಖನವನ್ನು ನೋಡಿ).
|
1.5%ವರೆಗೆ ಆಲ್ಕಲಾಯ್ಡ್ ಗಳನ್ನು ಹೊಂದಿದೆ, ಮುಖ್ಯವಾಗಿ ಟ್ರಿಪ್ಟಮಿನ್ ಗಳನ್ನು ಎಲೆಗಳಲ್ಲಿ ಹೊಂದಿರುತ್ತವೆ[೨೧] | ||
| β-ಮೀಥೈಲ್-ಫೇನೆತೈಲಮಿನ್, 2.4%ನಷ್ಟು ಎಲೆಗಳಲ್ಲಿ ಹೊಂದಿರುತ್ತವೆ[೨೨] | ||
| ಎಲೆಯ ಸಕ್ರಿಯ ತತ್ತ್ವಗಳು[೨೩] | ||
|
ಪಿಟುರಿಯಲ್ಲಿ ಬಳಕೆಯಾಗುವ ಬೂದಿ.[೨೪] ಒಣಗಿದ ಎಲೆಗಳ ರಾಶಿಯ ಸುಮಾರು 2-6%ನಷ್ಟು ಈಥರ್ ಸಾರಗಳು.[೨೫] ವಾಸ್ತವವಾಗಿ ಮನಃಪ್ರಭಾವಕವೇ ಎಂಬುದು ತಿಳಿದುಬಂದಿಲ್ಲ. | ||
| β-ಮೀಥೈಲ್-ಫೆನೆಥೈಲಮಿನ್,[೨೬] ಎಲೆಯಲ್ಲಿರುವ MNT ಹಾಗು DMT(1.1-10.2 ppm)[೨೭] | ||
| ಟ್ರಿಪ್ಟಮೈನ್ ಅಲ್ಕಲಾಯ್ಡ್ಸ್[೨೮]
ಬೀಜಗಳಲ್ಲಿರುವ ಟ್ರಿಪ್ಟಮೈನ್ ನ ಮಹತ್ವದ ಪ್ರಮಾಣ.[೨೯] | ||
| ಕಾಂಡದ ತೊಗಟೆಯಲ್ಲಿರುವ 5-MeO-DMT[೩೦] | ||
|
ಎಲೆಯಲ್ಲಿ 0.02% ಟ್ರಿಪ್ಟಮೈನ್ ಹಾಗು β-ಕಾರ್ಬೋಲಿನ್ಸ್, ಟೆಟ್ರಹೈಡ್ರೋಹರ್ಮನ್[೨೩][೩೧][೩೨] | ||
| DMT, ಅಮ್ಫೆಟಮೈನ್ಸ್, ಮೆಸ್ಕಾಲಿನ್, ನಿಕೋಟಿನ್[೩೪] | ||
| ಎಲೆ, ತೊಗಟೆಯಲ್ಲಿರುವ DMT[೩೫] ಹಾಗು ಇತರ ಟ್ರಿಪ್ಟಮೈನ್ಸ್ | ||
| ಟ್ರಿಪ್ಟಮೈನ್ಸ್ | ||
| ಎಲೆ, ತೊಗಟೆಯಲ್ಲಿರುವ DMT ಹಾಗು ಇತರ ಟ್ರಿಪ್ಟಮೈನ್ಸ್ | ||
| DMT[೩೬] | ||
| ಎಲೆ ಹಾಗು ಕಾಂಡದಲ್ಲಿ ಕಂಡುಬರುವ 0.3% ಆಲ್ಕಲಾಯ್ಡ್ಸ್, ಬಹುತೇಕ ಎಲ್ಲ N-ಮೀಥೈಲ್-ಟೆಟ್ರಹೈಡ್ರೋಹಾರ್ಮನ್, ಜೊತೆಗೆ ಟೆಟ್ರಹೈಡ್ರೋಹಾರ್ಮನ್ ನ ಟ್ರಿಪ್ಟಮೈನ್‌ನ ಕೆಲವು ಶೇಷಗಳು ಕಂಡುಬರುತ್ತವೆ[೩೭][೩೮][೩೯] | ||
| ನಿಕೋಟಿನ್[೪೦] | ||
| ಎಲೆ, ಕಾಂಡ & ತೊಗಟೆಯಲ್ಲಿರುವ DMT & NMT 0.04% NMT ಹಾಗು 0.02% DMT ಕಾಂಡದಲ್ಲಿ ಕಂಡುಬರುತ್ತದೆ.[೨೩] ಅಲ್ಲದೆ N,N-ಡೈಮೀಥೈಲ್ಟ್ರಿಪ್ಟಮೈನ್ N-ಆಕ್ಸೈಡ್[೪೧] | ||
| β-ಮೀಥೈಲ್-ಫೀನಲ್‌ಎತಲಮೈನ್[೨೬] | ||
|
ಪಿಟುರಿಯಲ್ಲಿ ಬಳಕೆಯಾಗುವ ಬೂದಿ[೨೪][೪೨] ಮನಃಪ್ರಭಾವಕವೇ ಅಥವಾ ಅಲ್ಲವೇ ಎಂಬುದು ತಿಳಿದುಬಂದಿಲ್ಲ. | ||
| ಮನಃಪ್ರಭಾವಕ,[೪೨] ಟ್ರಿಪ್ಟಮೈನ್ಸ್[೧೨] | ||
| ಎಲೆ, ಕಾಂಡ[೨೩] ಹಾಗು ಬೀಜಗಳಲ್ಲಿರುವ ಟ್ರಿಪ್ಟಮೈನ್[೨೯] ಎಲೆ ಹಾಗು ಬೀಜಗಳಲ್ಲಿರುವ ಫೀನಲ್‌ಎತಲಮೈನ್[೨೯] | ||
| ಮನಃಪ್ರಭಾವಕ[೩೩] | ||
| ಮನಃಪ್ರಭಾವಕ[೩೩] | ||
| ಮನಃಪ್ರಭಾವಕ,[೩೩] ಆದರೆ 0.02%ಗಿಂತ ಕಡಿಮೆ ಆಲ್ಕಲಾಯ್ಡ್ಸ್(ಕ್ಷಾರಾಭ) ಗಳನ್ನೂ ಹೊಂದಿದೆ [೩೨] | ||
| ಹಣ್ಣಿನಲ್ಲಿ 5-MeO-DMT[೪೩] ಪತ್ತೆಯಾಗಿದೆ. β-ಮೀಥೈಲ್-ಫೀನಲ್‌ಎತಲಮೈನ್, ಹೂವು.[೪೪] ಒಣಗಿದ ಎಲೆಗಳ ರಾಶಿಯ ಸುಮಾರು 2-6%ನಷ್ಟು ಈಥರ್ ಸಾರಗಳು.[೨೫] ತೊಗಟೆ[೪೫] ಹಾಗು ಎಲೆಗಳಲ್ಲಿ ಆಲ್ಕಲಾಯ್ಡ್ಸ್ ಗಳಿರುತ್ತವೆ.[೪೬] ಮರದಲ್ಲಿ ಅಮ್ಫೆಟಮೈನ್ಸ್ ಹಾಗು ಮೆಸ್ಕಾಲಿನ್ ಗಳೂ ಸಹ ಕಂಡುಬರುತ್ತವೆ.[೧೨] | ||
| ಪುಲ್ಕೆ(ಮೆಕ್ಸಿಕೋ ದೇಶದ ಮದ್ಯ)ಗೆ ಸೇರಿಸಲಾಗುತ್ತದೆ, ಆದರೆ ಮನಃಪ್ರಭಾವಕವೇ ಇಲ್ಲವೇ ಎಂಬುದು ತಿಳಿದುಬಂದಿಲ್ಲ[೪೨] | ||
| ಟ್ರಿಪ್ಟಮೈನ್, ಫೀನಲ್‌ಎತಲಮೈನ್,[೪೭] ಹೂವುಗಳಲ್ಲಿ[೨೯] ಇತರ ಟ್ರಿಪ್ಟಮೈನ್ಸ್, ಫೀನಲ್‌ಎತಲಮೈನ್ಸ್[೪೮] | ||
|
ಫೀನಲ್‌ಎತಲಮೈನ್, ಒಣಗಿದ ಎಲೆಗಳಲ್ಲಿ ಹೋರ್ಡೆನಿನ್ 2:3 ಅನುಪಾತದಲ್ಲಿರುತ್ತದೆ, 0.6% ಒಟ್ಟಾರೆ [೨೨] | ||
|
ಹೋರ್ಡೆನಿನ್, ತೊಗಟೆಯಲ್ಲಿ 1.2%[೨೨] | ||
| ಮನಃಪ್ರಭಾವಕ[೪೨] | ||
| ಮನಃಪ್ರಭಾವಕ[೪೯] | ||
| DMT, NMT | ||
| ಮನಃಪ್ರಭಾವಕ | ||
|
ಪಿಟುರಿಯಲ್ಲಿ ಬಳಕೆಯಾಗುತ್ತದೆ, ಆದರೆ ಮನಃಪ್ರಭಾವಕವೇ ಅಲ್ಲವೇ ಎಂಬುದು ತಿಳಿದುಬಂದಿಲ್ಲ.[೪೨] | ||
|
1.5[೨೨]-1.88%[೫೦] ಆಲ್ಕಲಾಯ್ಡ್ ಗಳು, 92%ನಷ್ಟು ಫೀನಲ್ಎತಿಲಮನ್ ನನ್ನು ಒಳಗೊಂಡಿದೆ.[೨೨] 0.9% N-ಮೀಥೈಲ್-2-ಫೀನಲ್‌ಎತಿಲಮನ್ ಬೇರೆ ಬೇರೆ ಸಮಯದಲ್ಲಿ ಕಂಡುಬರುತ್ತದೆ.[೨೨] | ||
| DMT, ಎಲೆಯಲ್ಲಿ ಕಂಡುಬರುತ್ತದೆ [೨೩] | ||
| ಪಿಟುರಿಯಲ್ಲಿ ಬಳಕೆಯಾಗುತ್ತದೆ, ಆದರೆ ಮನಃಪ್ರಭಾವಕವೇ ಎಂಬುದು ತಿಳಿದುಬಂದಿಲ್ಲ.[೪೨] | ||
|
0.2% ಟ್ರಿಪ್ಟಮೈನ್ ತೊಗಟೆ, ಎಲೆಗಳು, ಕೆಲವೊಂದು ಹೂವುಗಳಲ್ಲಿ, ಫೀನಲ್‌ಎತಿಲಮನ್ ಹೂವುಗಳಲ್ಲಿ,[೪೭] 0.2% DMT ಸಸ್ಯದಲ್ಲಿ.[೫೧] ಹಿಸ್ಟಮೈನ್ ಆಲ್ಕಲಾಯ್ಡ್ಸ್.[೩೨] | ||
| ಎಲೆಗಳು, ತೊಗಟೆಯಲ್ಲಿ ಟ್ರಿಪ್ಟಮೈನ್[೨೯] | ||
| ಟ್ರಿಪ್ಟಮೈನ್[೨೯] | ||
| ಕಾಂಡದ ತೊಗಟೆಯಲ್ಲಿ ಸುಮಾರು 2:3 ಅನುಪಾತದಲ್ಲಿ 0.6%ನಷ್ಟಿರುವ NMT ಹಾಗು DMTಎರಡೂ ಎಲೆಗಳಲ್ಲಿರುತ್ತವೆ[೨೩] | ||
| ಮನಃಪ್ರಭಾವಕ[೪೨] | ||
| DMT, ತೊಗಟೆ ಹಾಗು ಎಲೆಯಲ್ಲಿ,[೫೨] ಆದರೆ ಒಟ್ಟಾರೆ 0.02%ಗಿಂತ ಕಡಿಮೆ ಆಲ್ಕಲಾಯ್ಡ್ ಗಳಿವೆ[೩೨] | ||
| DMT, ಎಲೆಯಲ್ಲಿ[೨೩] | ||
| DMT, ಎಲೆಯಲ್ಲಿ[೨೩] | ||
| ಮನಃಪ್ರಭಾವಕ, ಎಲೆಯಲ್ಲಿ DMT | ||
|
ಟ್ರಿಪ್ಟಮೈನ್, DMT, NMT, ಇತರ ಟ್ರಿಪ್ಟಮೈನ್ಸ್,[೫೩] ಒಣಗಿದ ತೊಗಟೆಯಲ್ಲಿ 0.4-0.5%ನಷ್ಟು, 0.07%ನಷ್ಟು ಕೊಂಬೆಯ ತುದಿಗಳಲ್ಲಿ.[೫೪] | ||
| ಮನಃಪ್ರಭಾವಕ[೩೩] | ||
| 0.3% DMT ಎಲೆಯಲ್ಲಿ, NMT[೨೩] | ||
|
ಎಲೆಯಲ್ಲಿ ಟ್ರಿಪ್ಟಮೈನ್,[೨೩] 0.5%ನಿಂದ 2%ನಷ್ಟು DMT ತಾಜಾ ತೊಗಟೆಯಲ್ಲಿ, ಫೀನಲ್‌ಎತಲಮೈನ್ ನ ಉಳಿಕೆಯ ಪ್ರಮಾಣಗಳು[೪೭] | ||
| ಎಲೆಯಲ್ಲಿ DMT [೨೩] ನಷ್ಟು ಹಾಗು ಎಲೆ, ತೊಗಟೆಯಲ್ಲಿ ಇತರ ಟ್ರಿಪ್ಟಮೈನ್ ಗಳು | ||
|
ಎಲೆಯಲ್ಲಿ 0.2%ಗೂ ಕಡಿಮೆ DMT, NMT; DMT ಹಾಗು ಇತರ ಟ್ರಿಪ್ಟಮೈನ್ ಗಳು ಎಲೆ, ತೊಗಟೆಯಲ್ಲಿ[೫೬] | ||
|
ಪಿಟುರಿಯಲ್ಲಿ ಬಳಕೆಯಾಗುವ ಬೂದಿ.[೨೪][೪೨] ಮನಃಪ್ರಭಾವಕವೇ ಅಲ್ಲವೇ ಎಂಬುದು ತಿಳಿದುಬಂದಿಲ್ಲ. | ||
| ಪಿಟುರಿಯಲ್ಲಿ ಬಳಕೆಯಾಗುವ ಬೂದಿ,[೪೨] ಆದರೆ ಒಟ್ಟಾರೆ ಆಲ್ಕಲಾಯ್ಡ್ಸ್ ಗಳು 0.02%ಗೂ ಕಡಿಮೆಯಿರುತ್ತವೆ.[೩೨] ಮನಃಪ್ರಭಾವಕವೇ ಎಂಬುದು ತಿಳಿದುಬಂದಿಲ್ಲ. | ||
| DMT, NMT,[೫೭] ನಿಕೋಟಿನ್,[೧೨] ಆದರೆ ಒಟ್ಟಾರೆ ಆಲ್ಕಲಾಯ್ಡ್ ಗಳಲ್ಲಿ 0.02%ಗೂ ಕಡಿಮೆ ಪ್ರಮಾಣವು ಪತ್ತೆಯಾಗಿದೆ [೩೨] | ||
|
DMT, NMT, ಟ್ರಿಪ್ಟಮೈನ್, ಅಮ್ಫೆಟಮೈನ್ಸ್, ಮೆಸ್ಕಾಲಿನ್, ನಿಕೋಟಿನ್ ಹಾಗು ಇತರೆ[೫೮] | ||
|
β-ಮೀಥೈಲ್-ಫೀನಲ್‌ಎತಲಮೈನ್[೨೬] | ||
|
ಪಿಟುರಿಯಲ್ಲಿ ಬಳಕೆಯಾಗುವ ಬೂದಿ.[೨೪][೪೨] ಮನಃಪ್ರಭಾವಕವೇ ಅಲ್ಲವೇ ಎಂಬುದು ತಿಳಿದುಬಂದಿಲ್ಲ. | ||
| ಮನಃಪ್ರಭಾವಕ[೪೨] | ||
| β-ಮೀಥೈಲ್-ಫೀನಲ್‌ಎತಲಮೈನ್, ಫೀನಲ್‌ಎತಲಮೈನ್[೬] ಅಮ್ಫೆಟಮೈನ್ ಗಳು ಹಾಗು ಮೆಸ್ಕಾಲಿನ್ ಸಹ ಪತ್ತೆಯಾಗಿದೆ.[೧೨] | ||
| β-ಮೀಥೈಲ್-ಫೀನಲ್‌ಎತಲಮೈನ್[೨೬] | ||
| ಎಲೆಯಲ್ಲಿ 0.1%ಗೂ ಕಡಿಮೆ DMT ಇರುತ್ತದೆ,[೨೩] NMT, ಇತರ ಟ್ರಿಪ್ಟಮೈನ್ ಗಳು. ಸಸ್ಯದಲ್ಲಿ DMT,[೪೪] ತೊಗಟೆಯಲ್ಲಿ DMT.[೨೯] | ||
| DMT, ಎಲೆಯಲ್ಲಿ.[೨೩] ಒಣಗಿದ ಎಲೆ ರಾಶಿಯ ಸುಮಾರು 1-7%ನಷ್ಟು ಈಥರ್ ಸಾರಗಳು.[೨೫] | ||
| DMT, ಎಲೆಯಲ್ಲಿ[೨೩] | ||
| ಎಲೆ, ಕಾಂಡ, ಹಾಗು ಕೊಂಬೆಯ ತೊಗಟೆಯಲ್ಲಿರುವ DMT ಹಾಗು NMT, 0.81%ರಷ್ಟು DMT ತೊಗಟೆಯಲ್ಲಿ, MMT[೨೩][೫೯] | ||
| β-ಮೀಥೈಲ್-ಫೀನಲ್‌ಎತಲಮೈನ್[೨೬] | ||
|
DMT, NMT, ಹಾಗು ಇತರ ಟ್ರಿಪ್ಟಮೈನ್ ಗಳು[೫೩] | ||
| ಎಲೆ ಹಾಗು ಕಾಂಡದಲ್ಲಿರುವ ಟ್ರಿಪ್ಟಮೈನ್,[೨೩] ಆದರೆ ಒಟ್ಟಾರೆ ಆಲ್ಕಲಾಯ್ಡ್ ಗಳಲ್ಲಿ 0.02%ಗೂ ಕಡಿಮೆ[೩೨] | ||
| ಟ್ರಿಪ್ಟಮೈನ್ ಗಳು, 5-MeO-ಅಲ್ಕೈಲ್ ಟ್ರಿಪ್ಟಮೈನ್[೨೯] |
ಮಾದರಿ ಪರೀಕ್ಷೆಗೆ ತೆಗೆದುಕೊಂಡಂತಹ ಅಕೇಶಿಯ ಪ್ರಭೇದಗಳಲ್ಲಿ ಕಡಿಮೆ ಪ್ರಮಾಣದ ಅಥವಾ ಆಲ್ಕಲಾಯ್ಡ್ ಗಳು ಇಲ್ಲದಿರುವಂತಹ ಸಸ್ಯಗಳ ಪಟ್ಟಿ:[೩೨]
0% C 0.02%, C...ಆಲ್ಕಲಾಯ್ಡ್ ಗಳ ಸಾಂದ್ರೀಕರಣ [%]
- ಅಕೇಶಿಯ ಅಸಿನಸಿಯೆ
- ಅಕೇಶಿಯ ಬೈಲೆಯಾನ
- ಅಕೇಶಿಯ ಡೆಕರೆನ್ಸ್
- ಅಕೇಶಿಯ ಡೆಲ್ಬಾಟ
- ಅಕೇಶಿಯ ಮೆಯರ್ನ್ಸೀ
- ಅಕೇಶಿಯ ಡ್ರುಮ್ಮೊನ್ಡೀ
- ಅಕೇಶಿಯ ಎಲಾಟ
- ಅಕೇಶಿಯ ಫಲ್ಕಾಟ
- ಅಕೇಶಿಯ ಲೆಪ್ರೋಸ
- ಅಕೇಶಿಯ ಲಿನೆಯಾರಿಸ್
- ಅಕೇಶಿಯ ಮೆಲನೋಜೈಲಾನ್
- ಅಕೇಶಿಯ ಪಿಕ್ನಂಥಾ
- ಅಕೇಶಿಯ ರೆಟಿನೋಡ್ಸ್
- ಅಕೇಶಿಯ ಸಲಿಗ್ನ
- ಅಕೇಶಿಯ ಸ್ಟ್ರಿಕ್ಟ
- ಅಕೇಶಿಯ ವರ್ಟಿಸಿಲ್ಲಟ
- ಅಕೇಶಿಯ ವೆಸ್ಟಿಟ
ಸಯನೋಜೆನಿಕ್ ಗ್ಲೈಕೋಸೈಡ್ಸ್
ಅಮೆರಿಕದಲ್ಲಿರುವ ಹತ್ತೊಂಬತ್ತು ವಿವಿಧ ಪ್ರಭೇದ ಅಕೇಶಿಯಗಳು ಸಯನೋಜೆನಿಕ್ ಗ್ಲೈಕೋಸೈಡ್ ಗಳನ್ನು ಹೊಂದಿದೆ. ಇವುಗಳು ನಿರ್ದಿಷ್ಟವಾಗಿ ಗ್ಲೈಕೋಸೈಡ್ ಗಳನ್ನು ವಿಭಜಿಸುವ ಕಿಣ್ವಕ್ಕೆ ಒಡ್ಡಿದಾಗ, ಇವುಗಳು ಅಕೇಶಿಯ "ಎಲೆಗಳಲ್ಲಿ" ಹೈಡ್ರೋಜನ್ ಸೈನೆಡ್ (HCN)ಗಳನ್ನು ಬಿಡುಗಡೆ ಮಾಡಬಹುದು.[೬೦] ಇದು ಕೆಲವೊಂದು ಬಾರಿ ಜಾನುವಾರುಗಳಿಗೆ ವಿಷಕಾರಿಯಾಗಿ ಪರಿಣಮಿಸುವುದರ ಜೊತೆಗೆ ಅವುಗಳ ಸಾವಿಗೆ ಕಾರಣವಾಗಬಹುದು. ತಾಜಾ ಸಸ್ಯ ಪದಾರ್ಥಗಳು ಸಹಜವಾಗಿ 200 ppm ಅಥವಾ ಅದಕ್ಕೂ ಅಧಿಕ HCNನನ್ನು ಉತ್ಪಾದಿಸಿದರೆ, ಇದು ವಿಷತ್ವದ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದು ತಾಜಾ ಸಸ್ಯ ಪದಾರ್ಥದ ಪ್ರತಿ ಗ್ರಾಂಗೆ ಸುಮಾರು 7.5 μmol HCNಗೆ ಹೊಂದಿಕೆಯಾಗುತ್ತದೆ. ಅಕೇಶಿಯ "ಎಲೆಗಳು" ನಿರ್ದಿಷ್ಟ ಗ್ಲೈಕೋಸೈಡ್-ವಿಭಜಕ ಕಿಣ್ವವನ್ನು ಹೊಂದಿರದಿದ್ದರೆ, ಸಯನಿಕ್ ಗ್ಲೈಕೋಸೈಡ್ ಗಳ ಗಣನೀಯ ಪ್ರಮಾಣವನ್ನು ಹೊಂದಿರತಕ್ಕ ಸಸ್ಯಗಳಲ್ಲೂ ಸಹ ವಿಷದ ಪ್ರಮಾಣವು ಕಡಿಮೆಯಿರಬಹುದು.[೩೨] ಸಯನೋಜನ್ ಗಳನ್ನು ಉಳ್ಳ ಕೆಲವು ಅಕೇಶಿಯ ಪ್ರಭೇದಗಳೆಂದರೆ:
- ಅಕೇಶಿಯ ಏರಿಯೋಲೋಬ
- ಅಕೇಶಿಯ ಕನ್ನಿಂಗ್ಹಾಮೀ
- ಅಕೇಶಿಯ ಆಬ್ಟುಸಿಫೋಲಿಯಾ
- ಅಕೇಶಿಯ ಸೈಬಿರಿಯಾನ
- ಅಕೇಶಿಯ ಸೈಬೀರಿಯಾನ ವಾರ್. ವೂಡೀ [೬೧]
ವಿಭಿನ್ನ ಪ್ರಭೇದಗಳು
ಅಕೇಶಿಯದಲ್ಲಿ ಸುಮಾರು 1,300ಕ್ಕೂ ಅಧಿಕ ಪ್ರಭೇದಗಳಿವೆ. ಸಂಪೂರ್ಣವಾದ ಹೆಚ್ಚಿನ ಮಾಹಿತಿಗೆ ಅಕೇಶಿಯ ಪ್ರಭೇದಗಳ ಪಟ್ಟಿಯನ್ನು ನೋಡಿ.
ಪ್ರಸಿದ್ಧ ಅಕೇಶಿಯ
ಬಹುಶಃ ಅತ್ಯಂತ ಪ್ರಸಿದ್ಧ ಅಕೇಶಿಯ ಎಂದರೆ ನೈಜರ್ ನಲ್ಲಿರುವ ಅರ್ಬ್ರೆ ಡು ಟೆನೆರೆ ಮರದ ಪ್ರಸಿದ್ಧತೆಗೆ ಕಾರಣವೆಂದರೆ ಇದು ಪ್ರಪಂಚದಲ್ಲೇ ಇರುವ ಅತ್ಯಂತ ಏಕಾಂಗಿ ಮರವೆನಿಸಿದೆ, ಸರಿಸುಮಾರು ಟೆಂಪ್ಲೇಟು:Convertರಷ್ಟು ಇತರ ಯಾವುದೇ ಮರಕ್ಕಿಂತ ಪ್ರತ್ಯೇಕವಾಗಿದೆ. ಈ ಮರವನ್ನು 1973ರಲ್ಲಿ ಒಬ್ಬ ಟ್ರಕ್ ಚಾಲಕ ನೆಲೆಸಮ ಮಾಡಿದ.
ಗುರುತುಪತ್ತೆಗಾಗಿ ಚಿತ್ರಸಂಪುಟ
ಹೂವುಗಳು
-
ಅಕೇಶಿಯ ಅನೇಯುರ
-
ಅಕೇಶಿಯ ಕಾಟೆಚು
-
ಅಕೇಶಿಯ ಬೈಲೆಯನ
-
ಅಕೇಶಿಯ ಬರ್ಲಂಡಿಯೇರಿ
-
ಅಕೇಶಿಯ ಕಾನ್ಫುಸ
-
ಅಕೇಶಿಯ ಕಾಂಸ್ಟ್ರಿಕ್ಟ, ಲಾಸ್ ವೇಗಾಸ್, ನೆವಾಡಾ, USA
-
ಅಕೇಶಿಯ ಕಾವೆನ್ಯಿ
-
ಅಕೇಶಿಯ ಡೆಲ್ಬಾಟ
-
ಅಕೇಶಿಯ ಡೆನ್ಟಿಕುಲೋಸ
-
ಅಕೇಶಿಯ ಡ್ರಮ್ಮೊಡೀ
-
ಅಕೇಶಿಯ ಏರಿಯೋಲೋಬ ಸೋಸ್ಸುಲೇಯಿ, ನಮಿಬಿಯಾ
-
ಅಕೇಶಿಯ ಫಿಮ್ಬ್ರಿಯಾಟ ಆಸ್ಟ್ರೇಲಿಯನ್ ನ್ಯಾಷನಲ್ ಬೊಟಾನಿಕ್ ಗಾರ್ಡನ್ಸ್, ಕ್ಯಾನ್ಬೆರಾ
-
ಅಕೇಶಿಯ ಹೆಟೆರೋಫಿಲ್ಲ
-
ಅಕೇಶಿಯ ಲೊಂಗಿಫೋಲಿಯ
-
ಅಕೇಶಿಯ ಮೇಲನೋಜೈಲೋನ್ ನಜರೆ, ಪೋರ್ಚುಗಲ್
-
ಅಕೇಶಿಯ ಸಲಿಗ್ನ ಸೈಡ್, ಟರ್ಕಿ
-
ಅಕೇಶಿಯ ಸ್ಚಿನೋಯಿಡೆಸ್ ಆಸ್ಟ್ರೇಲಿಯನ್ ನ್ಯಾಷನಲ್ ಬೊಟಾನಿಕ್ ಗಾರ್ಡನ್ಸ್
-
ಅಕೇಶಿಯ ಟೆಟ್ರಗೋನೋಫಿಲ್ಲ ಗೀಲೊಂಗ್ ಬೊಟಾನಿಕ್ ಗಾರ್ಡನ್ಸ್, ಆಸ್ಟ್ರೇಲಿಯ
-
ಭಾರತದ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಲಕೋನ ಕಾಡಿನಲ್ಲಿರುವ ಅಕೇಶಿಯ ಪೆನ್ನಾಟ.
-
ಭಾರತದ ಆಂಧ್ರಪ್ರದೇಶದ ರಂಗಾರೆಡ್ಡಿ ಜಿಲ್ಲೆಯಲ್ಲಿರುವ ಅನಂತಗಿರಿ ಬೆಟ್ಟಗಳಲ್ಲಿರುವ ಅಕೇಶಿಯ ಪೆನ್ನಾಟ.
ತೊಗಟೆ
-
ಅಕೇಶಿಯ ಅನೆಯುರ ತೊಗಟೆ
-
ಅಕೇಶಿಯ ಔರಿಕುಲಿಫಾರ್ಮಿಸ್ ನ ತೊಗಟೆ
-
ಅಕೇಶಿಯ ಬರ್ಲಂಡಿಯೇರಿ ತೊಗಟೆ
-
ಅಕೇಶಿಯ ಕಾಲ್ಲಿನ್ಸೀ ತೊಗಟೆ
-
ಅಕೇಶಿಯ ಕಾಂಫುಸ ತೊಗಟೆ, ಹವಾಯಿ, USA
-
ಅಕೇಶಿಯ ಡೆಲ್ಬಾಟ
-
ಅಕೇಶಿಯ ಡೆಕುರೆನ್ಸ್
-
ಅಕೇಶಿಯ ಏರಿಯೋಲೋಬ
-
ಅಕೇಶಿಯ ಎಸ್ಟ್ರೋಫಿಯೋಲಟ ತೊಗಟೆ
-
ಅಕೇಶಿಯ ಗ್ರೆಗ್ಗೀ ತೊಗಟೆ
-
ಅಕೇಶಿಯ ಹೆಟೆರೋಫಿಲ್ಲ ತೊಗಟೆ
-
ಭಾರತದ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಲಕೋನ ಕಾಡಿನಲ್ಲಿ ಕಂಡುಬಂದ ಅಕೇಶಿಯ ಪೆನ್ನಾಟದ ಕಾಂಡ.
ಪರ್ಣಸಮೂಹ
-
ಅಕೇಶಿಯ ಕಾಟೆಚು
-
ಅಕೇಶಿಯ ಕಾಲ್ಲಿನ್ಸೀ ಪರ್ಣಸಮೂಹ
-
ಅಕೇಶಿಯ ಕಾನ್ಸಿನ್ನ ಪರ್ಣಸಮೂಹ
-
ಅಕೇಶಿಯ ಡೆನ್ಟಿಕುಲೋಸ ಪರ್ಣಸಮೂಹ
-
ಅಕೇಶಿಯ ಕರ್ರೂ ಪರ್ಣಸಮೂಹ
-
ಅಕೇಶಿಯ ಲೆಪ್ರೋಸ ಪರ್ಣಸಮೂಹ
-
ಭಾರತದ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಲಕೋನ ಅರಣ್ಯದಲ್ಲಿ ಕಂಡುಬರುವ ಅಕೇಶಿಯ ಪೆನ್ನಾಟ.
ಬೀಜಕೋಶಗಳು
-
ಅಕೇಶಿಯ ಅನೆಯುರ.
-
ಅಕೇಶಿಯ ಕಾಟೆಚು
-
ಅಕೇಶಿಯ ಕಾಂಫುಸ
-
ಅಕೇಶಿಯ ಕಾಂಸ್ಟ್ರಿಕ್ಟ
-
ಅಕೇಶಿಯ ಡೆಲ್ಬಾಟ
-
ಅಕೇಶಿಯ ಹೆಟೆರೋಫಿಲ್ಲ
-
ಅಕೇಶಿಯ ಮೆಲನೋಜೈಲೋನ್
-
Acacia sp. - Museum specimen
ಬೀಜಗಳು
-
ಅಕೇಶಿಯ ಬೈಲೆಯಾನ
-
ಅಕೇಶಿಯ ಬರ್ಲಂಡಿಯೇರಿ
-
ಅಕೇಶಿಯ ಕಾಂಫುಸ
-
ಅಕೇಶಿಯ ಕಾಂಸ್ಟ್ರಿಕ್ಟ
-
ಅಕೇಶಿಯ ಸೈಕ್ಲೋಪ್ಸ್
-
ಅಕೇಶಿಯ ಡೆಲ್ಬಾಟ
-
ಅಕೇಶಿಯ ಡೆಕರೆನ್ಸ್
-
ಅಕೇಶಿಯ ಫಾರ್ನೆಸಿಯಾನ
-
ಅಕೇಶಿಯ ಗ್ರೆಗ್ಗೀ
-
ಅಕೇಶಿಯ ಲೊಂಗಿಫೋಲಿಯ
-
ಅಕೇಶಿಯ ಮೆಯರ್ನ್ಸಿ
-
ಅಕೇಶಿಯ ಮೆಲನೋಜೈಲೋನ್
-
ಅಕೇಶಿಯ ಪಿಕ್ನಂಥಾ
-
ಅಕೇಶಿಯ ರಿಗಿಡುಲ
-
ಅಕೇಶಿಯ ಟಾರ್ಟುಸಾ
ಮುಳ್ಳುಗಳು
-
Acacia drepanolobium - Museum specimen
-
ಅಕೇಶಿಯ ಕಾಟೆಚು
-
ಅಕೇಶಿಯ ಕಾಲ್ಲಿನ್ಸೀ
-
ಅಕೇಶಿಯ ಕಾರ್ನಿಗೆರ
-
ಅಕೇಶಿಯ ಹೊರ್ರಿಡ
-
ಅಕೇಶಿಯ ಫಾರ್ನೆಸಿಯಾ ವಾರ್. ಫಾರ್ನೆಸಿಯಾ
ಮರ
-
ಅಕೇಶಿಯ ಅನೆಯುರ
-
ಅಕೇಶಿಯ ಬರ್ಲಂಡಿಯೇರಿ
-
ಅಕೇಶಿಯ ಕಾಂಫುಸ
-
ಅಕೇಶಿಯ ಡೆಲ್ಬಾಟ
-
ಅಕೇಶಿಯ ಹೆಟೆರೋಫಿಲ್ಲ
-
ಅಕೇಶಿಯ ಕೊಅ
-
ಅಕೇಶಿಯ ಲೆಪ್ರೋಸ
ಮರ (ದಿಮ್ಮಿ)
-
ಅಕೇಶಿಯ ಕೊಅ
-
ಅಕೇಶಿಯ ಹೆಟೆರೋಫಿಲ್ಲ
-
ಅಕೇಶಿಯ ಸ್ಕಫ್ಫ್ನೆರಿ
ಇವನ್ನೂ ನೋಡಿ
- ಅಕೇಶಿಯ ಪ್ರಭೇದಗಳ ಪಟ್ಟಿ
- ಸಸ್ಯಾಹಾರಿಗಳ ವಿರುದ್ಧ ಸಸ್ಯದ ರಕ್ಷಣೆ
- ಭ್ರಾಂತಿಜನಕ ಸಸ್ಯಗಳು
ಟಿಪ್ಪಣಿಗಳು
ಸಾಮಾನ್ಯ ಆಕರಗಳು
- ಕ್ಲೆಮೆಂಟ್, B.A., ಗೊಫ್ಫ್, C.M., ಫೋರ್ಬೇಸ್, T.D.A. ಟಾಕ್ಸಿಕ್ ಅಮೈನ್ಸ್ ಅಂಡ್ ಆಲ್ಕಲಾಯ್ಡ್ಸ್ ಫ್ರಮ್ ಅಕೇಶಿಯ ರಿಗಿಡುಲ, ಫೈಟೊಚೆಮ್. 1998, 49(5), 1377.
- ಶುಲ್ಗಿನ್, ಅಲೆಕ್ಸಾಂಡರ್ ಹಾಗು ಆನ್, TiHKAL ದಿ ಕಂಟಿನ್ಯೂಯೇಶನ್. ಟ್ರ್ಯಾನ್ಸ್ಫಾರ್ಮ್ ಪ್ರೆಸ್, 1997. ISBN 0-9630096-9-9.
ಬಾಹ್ಯ ಕೊಂಡಿಗಳು
ಟೆಂಪ್ಲೇಟು:Wikispecies ಟೆಂಪ್ಲೇಟು:Commons
- ಟೆಂಪ್ಲೇಟು:Eol
- ವರ್ಲ್ಡ್ ವೈಡ್ ವ್ಯಾಟ್ಲ್
- ಅಕೇಶಿಯ-ವರ್ಲ್ಡ್
- ವಾಯ್ನೆ'ಸ್ ವರ್ಡ್ ಟೆಂಪ್ಲೇಟು:Webarchive ಆನ್ "ದಿ ಅನ್ ಫರ್ಗೆಟ್ಟಬಲ್ ಅಕೇಶಿಯಸ್"
- ದಿ ಜೀನಸ್ ಅಕೇಶಿಯ ಅಂಡ್ ಎಂತೋಜೆನಿಕ್ ಟ್ರಿಪ್ಟಮೈನ್ಸ್, ವಿಥ್ ರೆಫರೆನ್ಸ್ ಟು ಆಸ್ಟ್ರೇಲಿಯನ್ ಅಂಡ್ ರಿಲೇಟೆಡ್ ಸ್ಪೀಸೀಸ್. ಬೈ ಮುಲ್ಗ ಟೆಂಪ್ಲೇಟು:Webarchive
- ಏ ಡಿಸ್ಕ್ರಿಪ್ಶನ್ ಆಫ್ ಅಕೇಶಿಯ ಫ್ರಮ್ ಪೋಮೆಟ್'ಸ್ 1709 ರೆಫರೆನ್ಸ್ ಬುಕ್, ಹಿಸ್ಟರಿ ಆಫ್ ಡ್ರಗ್ಸ್ ಟೆಂಪ್ಲೇಟು:Webarchive
- www.serendipity.com
- Dr. ಡ್ಯೂಕ್'ಸ್ ಫೈಟೊಕೆಮಿಕಲ್ ಅಂಡ್ ಎತ್ನೋಬೋಟಾನಿಕಲ್ ಡಾಟಾಬೇಸಸ್
- ಫ್ಲೋರ ಐಡೆನ್ಟಿಫಿಕೆಶನ್ ಟೂಲ್ಸ್ ಫ್ರಮ್ ದಿ ಸ್ಟೇಟ್ ಹೆರ್ಬರಿಯಂ ಆಫ್ ಸೌತ್ ಆಸ್ಟ್ರೇಲಿಯಾ ಟೆಂಪ್ಲೇಟು:Webarchive
- ಟ್ಯಾನಿನ್ಸ್ ಇನ್ ಸಮ್ ಇಂಟರ್ ರಿಲೇಟೆಡ್ ವ್ಯಾಟಲ್ಸ್
- ಲಿಸ್ಟ್ ಆಫ್ ಅಕೇಶಿಯ ಸ್ಪೀಶಿಸ್ ಇನ್ ದಿ U.S.ಟೆಂಪ್ಲೇಟು:Dead link
- FAO ಟಿಂಬರ್ ಪ್ರಾಪರ್ಟೀಸ್ ಆಫ್ ವೇರಿಯಸ್ ಅಕೇಶಿಯ ಸ್ಪೀಶಿಸ್
- FAO ಕಂಪ್ಯಾರಿಸನ್ ಆಫ್ ವೇರಿಯಸ್ ಅಕೇಶಿಯ ಸ್ಪೀಸಿಸ್ ಅಸ್ ಫೋರೆಜ್
- ಲಾಂಗ್ ಟರ್ಮ್ ಎಫೆಕ್ಟ್ಸ್ ಆಫ್ ರೋಲರ್ ಚಾಪಿಂಗ್ ಟೆಂಪ್ಲೇಟು:Webarchive ಮೂರು ಪೊದೆಯ ಪ್ರಭೇದಗಳಲ್ಲಿ ಸಸ್ಯಾಹಾರಿ ವಿರೋಧಿ ರಕ್ಷಣೆಗಳು, ಜೇಸನ್ R. ಸ್ಚಿಂಡ್ಲೆರ, ತಿಮೋತಿ E. ಫುಲ್ ಬ್ರೈಟ್
- ವೆಟ್. ಟೆಂಪ್ಲೇಟು:Webarchiveಪಾಥ್. ಟೆಂಪ್ಲೇಟು:WebarchiveResultsAFIP ವೆನ್ಸ್ಡೇ ಸ್ಲೈಡ್ ಕಾನ್ಫರೆನ್ಸ್ - nam. 21 ಫೆಬ್ರವರಿ 24, 1999 ಟೆಂಪ್ಲೇಟು:Webarchive
- ಅಕೇಶಿಯ ಸಯನೋಫಿಲ್ಲ ಲಿಂಡ್ಲ್ ಆಸ್ ಸಪ್ಲಿಮೆಂಟರಿ ಫೀಡ್/ಫಾರ್ ಸ್ಮಾಲ್ ಸ್ಟಾಕ್ ಇನ್ ಲಿಬಿಯ ಟೆಂಪ್ಲೇಟು:Webarchive
- ಡಿಸ್ಕ್ರಿಪ್ಶನ್ ಆಫ್ ಅಕೇಶಿಯ ಮಾರ್ಫಾಲಜಿ
- ನೈಟ್ರೋಜನ್ ಫಿಕ್ಸಾಟನ್ ಇನ್ ಅಕೇಶಿಯಸ್ ಟೆಂಪ್ಲೇಟು:Webarchive
- ಅಕೇಶಿಯಾಸ್ ವಿಥ್ ಸಯನಾಜೆನಿಕ್ ಕಾಂಪೌಂಡ್ಸ್
- ಅಕೇಶಿಯ ಅಲಾರ್ಮ್ ಸಿಸ್ಟಂ
- ↑ ಟೆಂಪ್ಲೇಟು:Cite web
- ↑ ಟೆಂಪ್ಲೇಟು:Cite book
- ↑ ಟೆಂಪ್ಲೇಟು:Cite book
- ↑ ಟೆಂಪ್ಲೇಟು:Cite journal
- ↑ ಟೆಂಪ್ಲೇಟು:Cite web
- ↑ ೬.೦ ೬.೧ ೬.೨ ೬.೩ ಟೆಂಪ್ಲೇಟು:Cite web
- ↑ ಟೆಂಪ್ಲೇಟು:Cite web
- ↑ ರಿಚರ್ಡ್ ಪಾಂಕ್ಹರ್ಸ್ಟ್, ಆನ್ ಇಂಟ್ರೋಡಕ್ಷನ್ ಟು ದಿ ಮೆಡಿಕಲ್ ಹಿಸ್ಟರಿ ಆಫ್ ಇಥಿಯೋಪಿಯಾ (ಟ್ರೆನ್ಟನ್: ರೆಡ್ ಸೀ ಪ್ರೆಸ್, 1990), ಪುಟ. 97
- ↑ ಆನ್ OCR'd ವರ್ಶನ್ ಆಫ್ ದಿ US ಡಿಸ್ಪೆನ್ಸೆಟರಿ ಬೈ ರೆಮಿಂಗ್ಟನ್ ಅಂಡ್ ವುಡ್, 1918.
- ↑ ವರ್ಲ್ಡ್ ವಿದ್ ವಾಟಲ್
- ↑ ಎಕ್ಸರ್ಪ್ಟ್ ಫ್ರಂ ಏ ಕನ್ಸ್ಯೂಮರ್'ಸ್ ಡಿಕ್ಷನರಿ ಆಫ್ ಕಾಸ್ಮೆಟಿಕ್ ಇಂಗ್ರೀಡಿಯಂಟ್ಸ್: ಫಿಫ್ತ್ ಎಡಿಶನ್ (ಪೇಪರ್ ಬ್ಯಾಕ್)Amazon.com
- ↑ ೧೨.೦ ೧೨.೧ ೧೨.೨ ೧೨.೩ ೧೨.೪ ನಟುರ್ಹೆಯಿಲ್ಪ್ರಾಕ್ಸಿಸ್ ಫಾಚ್ಫೋರಮ್ (ಜರ್ಮನ್)
- ↑ ಈಸ್ಟನ್'ಸ್ ಬೈಬಲ್ ಡಿಕ್ಷನರಿ: ಬುಶ್
- ↑ ಟೆಂಪ್ಲೇಟು:Cite web
- ↑ ಟೆಂಪ್ಲೇಟು:Cite web
- ↑ ೧೬.೦೦ ೧೬.೦೧ ೧೬.೦೨ ೧೬.೦೩ ೧೬.೦೪ ೧೬.೦೫ ೧೬.೦೬ ೧೬.೦೭ ೧೬.೦೮ ೧೬.೦೯ ೧೬.೧೦ ೧೬.೧೧ ದಿ ಟಿಂಬರ್ ಪ್ರಾಪರ್ಟೀಸ್ ಆಫ್ ಅಕೇಶಿಯ ಸ್ಪೀಶೀಸ್ ಅಂಡ್ ದೆಯರ್ ಯೂಸಸ್
- ↑ ೧೭.೦ ೧೭.೧ ೧೭.೨ ೧೭.೩ FAO
- ↑ ಟೆಂಪ್ಲೇಟು:Cite web
- ↑ ಟೆಂಪ್ಲೇಟು:Cite journal
- ↑ ಟೆಂಪ್ಲೇಟು:Cite web
- ↑ ಟೆಂಪ್ಲೇಟು:Cite web
- ↑ ೨೨.೦ ೨೨.೧ ೨೨.೨ ೨೨.೩ ೨೨.೪ ೨೨.೫ ೨೨.೬ ಫಿಟ್ಜೆರಾಲ್ಡ್, ಜ.ಸ. ಆಲ್ಕಲಾಯ್ಡ್ಸ್ ಆಫ್ ದಿ ಆಸ್ಟ್ರೇಲಿಯನ್ ಲೆಗುಮುಮಿನೋಸೆ -- ದಿ ಅಕ್ಕರೆನ್ಸ್ ಆಫ್ ಫೆನ್ಯಲೇತಿಲಾಮೆ ಡಿರೈವೇಟಿವ್ಸ್ ಇನ್ ಅಕೇಶಿಯ ಸ್ಪೀಶಿಸ್, ಆಸ್ಟ್.J ಚೆಂ., 1964, 17, 160-2.
- ↑ ೨೩.೦೦ ೨೩.೦೧ ೨೩.೦೨ ೨೩.೦೩ ೨೩.೦೪ ೨೩.೦೫ ೨೩.೦೬ ೨೩.೦೭ ೨೩.೦೮ ೨೩.೦೯ ೨೩.೧೦ ೨೩.೧೧ ೨೩.೧೨ ೨೩.೧೩ ೨೩.೧೪ ೨೩.೧೫ ಶಾಮನ್ ಆಸ್ಟ್ರಾಲಿಸ್
- ↑ ೨೪.೦ ೨೪.೧ ೨೪.೨ ೨೪.೩ ೨೪.೪ ಟೆಂಪ್ಲೇಟು:Cite web
- ↑ ೨೫.೦ ೨೫.೧ ೨೫.೨ ಟೆಂಪ್ಲೇಟು:Cite web
- ↑ ೨೬.೦ ೨೬.೧ ೨೬.೨ ೨೬.೩ ೨೬.೪ ೨೬.೫ ಟೆಂಪ್ಲೇಟು:Cite book
- ↑ ಇಂಗ್ಲಿಷ್ ಟೈಟಲ್: ನ್ಯೂಟ್ರಿಟಿವ್ ವ್ಯಾಲ್ಯೂ ಅಸೆಸ್ಮೆಂಟ್ ಆಫ್ ದಿ ಟ್ರಾಪಿಕಲ್ ಶ್ರಬ್ ಲೆಗ್ಯೂಂ ಅಕೇಶಿಯ ಅಂಗುಸ್ಟಿಸ್ಸಿಮ: ಆಂಟಿ-ನ್ಯೂಟ್ರಿಷನಲ್ ಕಾಂಪೌಂಡ್ಸ್ ಅಂಡ್ ಇನ್ ವಿಟ್ರೋ ಡೈಜೆಸ್ಟಿಬಿಲಿಟಿ. ಟೆಂಪ್ಲೇಟು:Webarchive ವೈಯಕ್ತಿಕ ಬರಹಗಳು: ಮ್ಯಾಕ್ ಸ್ವೀನೆಯ್, C. S., ಕ್ರುಸೆ, D. O., ಪಾಮರ್, B., ಗೌಗ್ಹ್, J., ಕಾನ್ಲಾನ್, L. L., ಹೆಗರ್ಟಿ, M. P.ರಿಂದ ಲೇಖಕರ ಸದಸ್ಯತ್ವ: CSIRO ಲೈವ್ಸ್ಟಾಕ್ ಇಂಡಸ್ಟ್ರೀಸ್, ಲಾಂಗ್ ಪಾಕೆಟ್ ಲ್ಯಾಬೋರೆಟರೀಸ್, 120 ಮೆಯಿಯೇರ್ಸ್ ರಸ್ತೆ, ಇಂದೂರೂಪಿಲ್ಲಿ, ಓಲ್ಡ್ 4068, ಆಸ್ಟ್ರೇಲಿಯಾ. ಡಾಕ್ಯುಮೆಂಟ್ ಟೈಟಲ್: ಅನಿಮಲ್ ಫೀಡ್ ಸೈನ್ಸ್ ಅಂಡ್ ಟೆಕ್ನಾಲಜಿ, 2005 (ಸಂಪುಟ. 121) (ನಂ. 1/2) 175-190
- ↑ ಟೆಂಪ್ಲೇಟು:Cite web
- ↑ ೨೯.೦ ೨೯.೧ ೨೯.೨ ೨೯.೩ ೨೯.೪ ೨೯.೫ ೨೯.೬ ೨೯.೭ ಟೆಂಪ್ಲೇಟು:Cite web
- ↑ ಟೆಂಪ್ಲೇಟು:Cite web
- ↑ ೩೧.೦ ೩೧.೧ www.serendipity.com
- ↑ ೩೨.೦ ೩೨.೧ ೩೨.೨ ೩೨.೩ ೩೨.೪ ೩೨.೫ ೩೨.೬ ೩೨.೭ ೩೨.೮ ರಾಬರ್ಟ್ ಹೆಗ್ನಯುಎರ್ ರಿಂದ ಚೆಮೋಟ್ಯಾಕ್ಸಾನಾಮಿ ಡೆರ್ Pಫ್ಲಾನ್ಜೆನ್
- ↑ ೩೩.೦ ೩೩.೧ ೩೩.೨ ೩೩.೩ ೩೩.೪ ಟೆಂಪ್ಲೇಟು:Cite web
- ↑ ಆಸ್ಕ್ ಡಾ. ಶುಲ್ಗಿನ್ ಆನ್ಲೈನ್: ಅಕೆಷಾಸ್ ಅಂಡ್ ನ್ಯಾಚುರಲ್ ಅಮ್ಫೆಟಮೈನ್
- ↑ ಟೆಂಪ್ಲೇಟು:Cite web
- ↑ www.abc.net.au
- ↑ ಟೆಂಪ್ಲೇಟು:Cite web
- ↑ ಟೆಂಪ್ಲೇಟು:Cite web
- ↑ ಟೆಂಪ್ಲೇಟು:Cite web
- ↑ ಟೆಂಪ್ಲೇಟು:Cite web
- ↑ NMR ಸ್ಪೆಕ್ಟ್ರಲ್ ಅಸೈನ್ಮೆಂಟ್ಸ್ ಆಫ್ ಏ ನ್ಯೂ ಕ್ಲೋರೋ ಟ್ರಿಪ್ಟಾಮೈನ್ ಅಲ್ಕಾಲಾಯ್ಡ್ ಅಂಡ್ ಇಟ್ಸ್ ಅನಲಾಗ್ಸ್ ಫ್ರಮ್ ಅಕೇಶಿಯ ಕಾಂಫುಸ ಮಾಲ್ಕಂ S. ಬುಕನಾನ್, ಆಂಟ್ಹನಿ R. ಕಾರ್ರೋಲ್, ಡೇವಿಡ್ ಪಾಸ್, ರೋನಾಲ್ಡ್ J. ಕ್ವಿನ್ನ್ ರಸಾಯನಶಾಸ್ತ್ರದಲ್ಲಿ ಬರುವ ಮ್ಯಾಗ್ನೆಟಿಕ್ ರೆಸೋನನ್ಸ್ ಸಂಪುಟ 45, ಸಂಚಿಕೆ 4, ಪುಟಗಳು359 - 361. ಜಾನ್ ವಿಲೆಯ್ & ಸನ್ಸ್, Ltd.
- ↑ ೪೨.೦೦ ೪೨.೦೧ ೪೨.೦೨ ೪೨.೦೩ ೪೨.೦೪ ೪೨.೦೫ ೪೨.೦೬ ೪೨.೦೭ ೪೨.೦೮ ೪೨.೦೯ ೪೨.೧೦ ಇಂಡೆಕ್ಸ್ ಆಫ್ ರಾಟ್ಸ್ಚ್, ಕ್ರಿಶ್ಚಿಯನ್. Enzyklopädie der psychoaktiven Pflanzen, Botanik, Ethnopharmakologie und Anwendungen, 7. ಆಫ್ಲೇಜ್. AT ವರ್ಲಾಗ್, 2004, 941 ಸೇಯಿಟೆನ್. ISBN 3-85502-570-3 ಅಟ್ [೧] ಟೆಂಪ್ಲೇಟು:Webarchive
- ↑ ಟೆಂಪ್ಲೇಟು:Cite web
- ↑ ೪೪.೦ ೪೪.೧ Dr. ಡ್ಯೂಕ್'ಸ್ ಫೈಟೊಕೆಮಿಕಲ್ ಅಂಡ್ ಎಥ್ನೋಬೋಟಾನಿಕಲ್ ಡಾಟಾಬೇಸಸ್
- ↑ ಟೆಂಪ್ಲೇಟು:Cite web
- ↑ ಪರ್ಡ್ಯೂ ವಿಶ್ವವಿದ್ಯಾಲಯ
- ↑ ೪೭.೦ ೪೭.೧ ೪೭.೨ ೪೭.೩ ಟೆಂಪ್ಲೇಟು:Cite book
- ↑ ಲಿಕಾಯುಂ (ಅಕೇಶಿಯ ಫ್ಲೋರಿಬಂಡ)
- ↑ wiki.magiskamolekyler.org (ಸ್ವೀಡಿಶ್)
- ↑ ಟೆಂಪ್ಲೇಟು:Cite web
- ↑ ಟೆಂಪ್ಲೇಟು:Cite web
- ↑ extentech.sheetster.comಟೆಂಪ್ಲೇಟು:Dead link
- ↑ ೫೩.೦ ೫೩.೧ wiki.magiskamolekyler.org (Swedish)
- ↑ ಟೆಂಪ್ಲೇಟು:Cite web
- ↑ ಟೆಂಪ್ಲೇಟು:Cite web
- ↑ ಟೆಂಪ್ಲೇಟು:Cite web
- ↑ ಟೆಂಪ್ಲೇಟು:Cite web
- ↑ ಮಗಿಸ್ಕ ಮೊಲೆಕ್ಯ್ಲೆರಸ್ ವಿಕಿ
- ↑ ಟೆಂಪ್ಲೇಟು:Cite web
- ↑ ಕ್ಯನೋಜೆನಿಕ್ ಗ್ಲಯ್ಕೋಸೈಡ್ಸ್ ಇನ್ ಆಂಟ್-ಅಕೆಶಿಯಾಸ್ ಆಫ್ ಮೆಕ್ಸಿಕೋ ಅಂಡ್ ಸೆಂಟ್ರಲ್ ಅಮೆರಿಕ ಡೇವಿಡ್ S. ಸೇಯಿಗ್ಲರ್, ಜಾನ್ ಎ. ಎಬಿಂಗರ್ ದಿ ಸೌತ್ ವೆಸ್ಟ್ರನ್ ನ್ಯಾಚುರಲಿಸ್ಟ್, ಸಂಪುಟ.32, ನಂ. 4 (ಡಿಸೆಂಬರ್ 9, 1987), ಪುಟಗಳು. 499-503 doi:10.2307/3671484
- ↑ FAO ಕಮಲ್ M. ಇಬ್ರಾಹಿಮ್, ದಿ ಕರೆಂಟ್ ಸ್ಟೇಟ್ ಆಫ್ ನಾಲೆಡ್ಜ್ ಆನ್ ಪ್ರೋಸೋಪಿಸ್ ಜೂಲಿಫ್ಲೋರ...