ಸಂಖ್ಯೆ

testwikiದಿಂದ
ಬದಲಾವಣೆ ೦೭:೧೩, ೮ ಆಗಸ್ಟ್ ೨೦೨೪ ರಂತೆ ~aanzx (ಚರ್ಚೆ) ಇವರಿಂದ (Reverted 1 edit by 2401:4900:4E58:CC4F:8421:2AFF:FECE:DCAA (talk)(TwinkleGlobal))
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಸಂಖ್ಯೆ ಎನ್ನುವುದು ಎಣಿಕೆ ಮತ್ತು ಅಳತೆಯಲ್ಲಿ ಉಪಯೋಗಿಸುವ ಒಂದು ಅಮೂರ್ತ ಕಲ್ಪನೆ / ಪ್ರತೀಕ. ಗಣಿತಶಾಸ್ತ್ರದಲ್ಲಿ, ಸಂಖ್ಯೆಯ ಪರಿಕಲ್ಪನೆಯನ್ನು ವಿಸ್ತರಿಸಿ ಸ್ವಾಭಾವಿಕ ಸಂಖ್ಯೆಗಳು,[] ಸೊನ್ನೆ, ಧನ ಸಂಖ್ಯೆಗಳು (positive numbers), ಋಣ ಸಂಖ್ಯೆಗಳು (negative numbers) ಇನ್ನೂ ಮುಂತಾದ ಹೊಸ ರೀತಿಯ ಸಂಖ್ಯೆಗಳನ್ನೂ ಸೇರಿಸಿಕೊಳ್ಳಲಾಗಿದೆ.

ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ ಮುಂತಾದ ಸಂಖ್ಯೆಗಳ ಮೇಲೆ ಮಾಡುವ ಕ್ರಿಯೆಗಳ ಅಭ್ಯಾಸಕ್ಕೆ ಸಂಖ್ಯಾಗಣಿತ ಎನ್ನುವರು.

ಪ್ರಪಂಚದಾದ್ಯಂತ ವ್ಯವಹಾರದಲ್ಲಿರುವ ಹಿಂದು-ಅರ‍್ಯಾಬಿಕ್ ಪದ್ಧತಿಯಲ್ಲಿ ಹತ್ತು ವಿಭಿನ್ನ ಪ್ರತೀಕಗಳಿವೆ: 0, 1, 2, 3, 4, 5, 6, 7, 8, 9. ಇವು ಅಂಕೆಗಳು (ನ್ಯೂಮರಲ್ಸ್).[] ಇವುಗಳ ವಿವಿಧ ಸಂಯೋಜನೆಗಳೇ ಸಂಖ್ಯೆಗಳು.

ಸಂಖ್ಯಾಪ್ರಭೇದಗಳು

ನೈಜ, ಮಿಶ್ರ, ಪರಿಮೇಯ, ಅಪರಿಮೇಯ, ಪೂರ್ಣಾಂಕ, ಭಿನ್ನರಾಶಿ, ಕರಣಿ, ಬೀಜಾತೀತ, ಋಣ, 0, ಧನ

  • ನೈಜ ಸಂಖ್ಯೆಗಳಿಗೆ (ರಿಯಲ್ ನಂಬರ್ಸ್) ಉದಾಹರಣೆಗಳು: -5, 4/3, π, 2 ಇತ್ಯಾದಿ.
  • ಪರಿಮೇಯ (ರ‍್ಯಾಶನಲ್): 37,5,944 ಇತ್ಯಾದಿ
  • ಪೂರ್ಣಾಂಕ (ಇಂಟಿಜರ್): 37, -43 ಇತ್ಯಾದಿ
  • ಭಿನ್ನರಾಶಿ (ಫ್ರ್ಯಾಕ್ಷನ್): 12,173 ಇತ್ಯಾದಿ
  • ಋಣ (ನೆಗೆಟಿವ್): -43, -107 ಇತ್ಯಾದಿ
  • ಧನ (ಪಾಸಿಟಿವ್): 37, 149 ಇತ್ಯಾದಿ
  • ಅಪರಿಮೇಯ (ಇರ‍್ಯಾಶನಲ್):  2, π, e ಇತ್ಯಾದಿ
  • ಕರಣಿ (ಸರ್ಡ್): 2,3,5 ಇತ್ಯಾದಿ
  • ಬೀಜಾತೀತ (ಟ್ರಾನ್ಸೆಂಡೆಂಟಲ್): e, π ಇತ್ಯಾದಿ
  • ಮಿಶ್ರ (ಕಾಂಪ್ಲೆಕ್ಸ್):  -1 + 3i, 2 - 7i ಇತ್ಯಾದಿ

e (ಇದರ ಮೊತ್ತ 2 ಮತ್ತು 3ರ ನಡುವೆ ಇದೆ)

π = ವೃತ್ತಪರಿಧಿ ÷ ವ್ಯಾಸ (ಇದರ ಬೆಲೆ 3 ಮತ್ತು 4 ರ ನಡುವೆ ಇದೆ).

ಮಿಶ್ರ ಸಂಖ್ಯೆಯನ್ನು a+ib ರೂಪದಲ್ಲಿ ಬರೆಯುವುದು ವಾಡಿಕೆ. ಇಲ್ಲಿ a ಮತ್ತು b ನೈಜ ಸಂಖ್ಯೆಗಳು, i=1 ಅಥವಾ i2 = -1


ಮೌಲ್ಯ ಕನ್ನಡ ಸಂಖ್ಯೆ ಆಂಗ್ಲ ಸಂಖ್ಯೆ
ಸೊನ್ನೆ 0
ಒಂದು 1
ಎರಡು 2
ಮೂರು 3
ನಾಲ್ಕು 4
ಐದು 5
ಆರು 6
ಏಳು 7
ಎಂಟು 8
ಒಂಬತ್ತು 9



ಮೌಲ್ಯ ಕನ್ನಡ ಸಂಖ್ಯೆ ಆಂಗ್ಲ ಸಂಖ್ಯೆ
ಹತ್ತು ೧೦ 10
ನೂರು ೧೦೦ 100
ಐನೂರು ೫೦೦ 500
ಸಾವಿರ ೧೦೦೦ 1000
ಲಕ್ಷ ೧೦೦೦೦೦ 100000
ಕೋಟಿ ೧೦೦೦೦೦೦೦ 10000000

ಕಾಲದೊಂದಿಗೆ ಕನ್ನಡ ಲಿಪಿಯು ಹಲವಾರು ಬದಲಾವಣೆಗಳನ್ನು ಹೊಂದಿದೆ. ಅಂತೆಯೇ ಸಂಖ್ಯೆಗಳನ್ನು ಬರೆಯವ ರೀತಿಯಲ್ಲೂ ಅನೇಕ ಮಾರ್ಪಾಟುಗಳಾಗಿವೆ.ಸಂಖ್ಯಾ ಇತಿಹಾಸವು ಭಾಷಾ ವಿಜ್ಞಾನದ ಪ್ರಮುಖ ವಿಭಾಗವಾಗಿದೆ.

ಉಲ್ಲೇಖಗಳು

ಟೆಂಪ್ಲೇಟು:ಉಲ್ಲೇಖಗಳುಟೆಂಪ್ಲೇಟು:Includes Wikisource