ಸರಾಸರಿ

testwikiದಿಂದ
ಬದಲಾವಣೆ ೦೯:೪೫, ೩೦ ಸೆಪ್ಟೆಂಬರ್ ೨೦೨೪ ರಂತೆ imported>2330349 G Srujana Kannada ಇವರಿಂದ
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಸರಾಸರಿ ಎಂದರೆ ಒಂದು ಸಂಖ್ಯೆಗಳ ಗುಂಪಿನ ಅಥವಾ ಪ್ರಮಾಣದ ಪ್ರಾತಿನಿಧಿಕ ಸಂಖ್ಯೆ. ಸಾಮಾನ್ಯವಾಗಿ ಜನರು ಒಂದು ಪರಿಮಾಣ ಮೊತ್ತವನ್ನು ಗುಂಪಿನಲ್ಲಿರುವ ಪರಿಮಾಣ ಸಂಖ್ಯೆಗಳಿಂದ ಭಾಗಿಸಿದಾದ ಬರುವ ಸಂಖ್ಯೆ ಯನ್ನು ಸರಾಸರಿ ಎಂದು ಗುರುತಿಸುತ್ತಾರೆ.

ಅವರ್ಗೀಕೃತ ದತ್ತಾಂಶಗಳ ಸರಾಸರಿ


ನಾವು x1,x2,x3,...,xn ಎಂಬ n ವಾಸ್ತವ ಸಂಖ್ಯೆಗಳನ್ನು ಹೊಂದಿದ್ದರೆ x¯ ನಿಂದ ಸೂಚಿಸುವ ಅವುಗಳ ಅಂಕಗಣಿತ ಸರಾಸರಿಯು
x¯=i=1nxn ಆಗಿರುತ್ತದೆ.

ಇಲ್ಲಿ

     x¯ ಎಂದರೆ ಅಂಕಗಣಿತ ಸರಾಸರಿ 

n ಎಂದರೆ ದತ್ತ ಪ್ರಾಪ್ತಾಂಕಗಳ ಸಂಖ್ಯೆ

i=1nx ಎಂದರೆ ಪ್ರಾಪ್ತಾಂಕಗಳ ಒಟ್ಟು ಮೊತ್ತ

ಈ ಸೂತ್ರವನ್ನು ಸಾಮಾನ್ಯವಾಗಿ

x¯=xn ಎಂದೂ ಸೂಚಿಸುತ್ತಾರೆ.

ಅವರ್ಗೀಕೃತ ಆವೃತ್ತಿ ವಿತರಣೆಗಳ ಸರಾಸರಿ


ಅವರ್ಗೀಕೃತ ಆವೃತ್ತಿ ವಿತರಣೆಗಳ ಸರಾಸರಿಯು
x¯=i=1nfixii=1nfi ಆಗಿರುತ್ತದೆ.

ಇಲ್ಲಿ

  x¯ ಎಂದರೆ ಅಂಕಗಣಿತ ಸರಾಸರಿ 

i=1nfi ಎಂದರೆ ಎಲ್ಲಾ ಆವೃತ್ತಿಗಳ ಒಟ್ಟು ಮೊತ್ತ (ಇದು ದತ್ತ ಪ್ರಾಪ್ತಾಂಕಗಳ ಸಂಖ್ಯೆ ಗೆ ಸಮನಾಗಿರುತ್ತದೆ)

i=1nfixi ಎಂದರೆ ಪ್ರಾಪ್ತಾಂಕ ಮತ್ತು ಅವುಗಳ ಆವೃತ್ತಿಗಳ ಗುಣಲಬ್ಧಗಳ ಒಟ್ಟು ಮೊತ್ತ

fi ಎಂದರೆ i ನೇ ಪ್ರಾಪ್ತಾಂಕದ ಆವೃತ್ತಿ

xi ಎಂದರೆ iನೇ ಪ್ರಾಪ್ತಾಂಕ

ಈ ಸೂತ್ರವನ್ನು ಸಾಮಾನ್ಯವಾಗಿ

x¯=fxf ಎಂದೂ ಸೂಚಿಸುತ್ತಾರೆ.

ವರ್ಗೀಕೃತ ದತ್ತಾಂಶಗಳ ಸರಾಸರಿ


      ವರ್ಗೀಕೃತ ದತ್ತಾಂಶಗಳೆಂದರೆ ವರ್ಗಾಂತರ ಮತ್ತು ಆವೃತ್ತಿಯನ್ನು ಹೊಂದಿದ ದತ್ತಾಂಶಗಳು. ಇಲ್ಲಿ ವರ್ಗಾಂತರದ ಮಧ್ಯಬಿಂದುವನ್ನು  x ಎಂದು ತೆಗೆದುಕೊಳ್ಳಲಾಗುತ್ತದೆ.
      ವರ್ಗಾಂತರ ab  ನ ಮಧ್ಯಬಿಂದು   x=a+b2   ಆಗಿರುತ್ತದೆ. 

ಇಲ್ಲಿ ಸರಾಸರಿಯು x¯=i=1nfixii=1nfi ಎಂದು ವ್ಯಾಖ್ಯಾನಿಸಲ್ಪಡುತ್ತದೆ.

ಇಲ್ಲಿ

       x¯ ಎಂದರೆ ಅಂಕಗಣಿತ ಸರಾಸರಿ 

i=1nfi ಎಂದರೆ ಎಲ್ಲಾ ಆವೃತ್ತಿಗಳ ಒಟ್ಟು ಮೊತ್ತ (ಇದು ದತ್ತ ಪ್ರಾಪ್ತಾಂಕಗಳ ಸಂಖ್ಯೆ ಗೆ ಸಮನಾಗಿರುತ್ತದೆ)

i=1nfixi ಎಂದರೆ ಮಧ್ಯಬಿಂದು ಮತ್ತು ಅವುಗಳ ಆವೃತ್ತಿಗಳ ಗುಣಲಬ್ಧಗಳ ಒಟ್ಟು ಮೊತ್ತ

fi ಎಂದರೆ i ನೇ ಪ್ರಾಪ್ತಾಂಕದ ಆವೃತ್ತಿ

xi ಎಂದರೆ iನೇ ಪ್ರಾಪ್ತಾಂಕ

ಟೆಂಪ್ಲೇಟು:ಚುಟುಕು